“ಶ್ಯಾನೆ ಟಾಪಗವ್ಲೇ ನಮ್ ಹುಡುಗಿ ಶ್ಯಾನೆ ಟಾಪಗವ್ಲೇ” ಹಾಡಿನ ಮೂಲಕ ಎದೆಬಡಿತ ಹೆಚ್ಚಿಸಿದ ನಟಿ ಮದುವೆ ಡೇಟ್ ಫಿಕ್ಸ್!!!

ಕಳೆದ ವರ್ಷವಷ್ಟೆ ನಿಶ್ಚಿತಾರ್ಥ ನಿಶ್ಚಯಿಸಿಕೊಂಡಿದ್ದ ದಾವಣಗೆರೆಯ ಸ್ಯಾಂಡಲ್‌ವುಡ್‌ ಬೆಡಗಿ ಅದಿತಿ ಪ್ರಭುದೇವ, ಇದೀಗ ಮದುವೆಯ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತ, ಸದ್ಯ ಸ್ಯಾಂಡಲ್‌ವುಡ್‌ ಬಿಜಿ ನಟಿಯಾಗಿರುವ ಅದಿತಿ ಪ್ರಭುದೇವ ಹಸೆಮಣೆ ಏರಲು ಭರದ ತಯಾರಿ ನಡೆಯುತ್ತಿದೆ.

 

ಪ್ರಭುದೇವ ಮದುವೆಗೆ ದಿನಗಣನೆ ಆರಂಭವಾಗುತ್ತಿದ್ದು, ಯಶಸ್ವಿ(ಯಶಸ್) ಅವರ ಜೊತೆಗೆ ಅದಿತಿ ಮದುವೆ ನಿಶ್ಚಿತಾರ್ಥ ನೆರವೇರಿದ್ದು ಹಳೆಯ ಸಂಗತಿ. ಇದೀಗ, ಈ ಜೋಡಿ ನವೆಂಬರ್​ 27ರಂದು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಮುಂದಾಗಿದ್ದಾರೆ.

ಇವರಿಬ್ಬರ ಮದುವೆ ಆಮಂತ್ರಣ ಪತ್ರಿಕೆಯ ಫೋಟೋ ಲಭ್ಯವಾಗಿದ್ದು, ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಅದಿತಿ ಶ್ಯಾನೆ ಟಾಪಾಗೌಳೆ.. ಹಾಡಿನ ಮೂಲಕ ಪಡ್ಡೆ ಹುಡುಗರ ಹೃದಯ ಗೆದ್ದ ಚೆಂದುಳ್ಳಿ ಚೆಲುವೆ.

ಅನೇಕ ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆ ನಟಿಯಾಗಿ ಮಿಂಚಿರುವ ಸ್ಯಾಂಡಲ್ ವುಡ್ ನಟಿ ನಿಶ್ಚಿತಾರ್ಥದ ಸುದ್ದಿ ಕೊಟ್ಟು ಅಭಿಮಾನಿಗಳಿಗೆ ಸಣ್ಣದಾಗಿ ಶಾಕ್ ಕೂಡ ನೀಡಿದ್ದರು. ಉದ್ಯಮಿ ಹಾಗೂ ಕಾಫಿ ಪ್ಲಾಂಟರ್ ಆಗಿರುವ ಯಶಸ್ವಿ ಜೊತೆ ಅದಿತಿ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದು, ಗುರು ಹಿರಿಯರು ಸೇರಿ ಮದುವೆ ನಿಶ್ಚಯ ಮಾಡಿದ್ದಾರೆ. ಹಾಗಾಗಿ, ಕೆಲ ದಿನಗಳ ಕಾಲ ನಟನೆಯಿಂದ ದೂರ ಉಳಿಯುವ ಸಾಧ್ಯತೆ ದಟ್ಟವಾಗಿದೆ.

ಯಶಸ್ವಿಯವರು ಅದಿತಿಯನ್ನು ಮೆಚ್ಚಿಕೊಂಡು, ಹಿರಿಯರ ಒಪ್ಪಿಗೆ ಪಡೆದು ಆಕೆಗೆ ವಿಷಯ ತಿಳಿಸಿ ಅದಿತಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟ ಬಳಿಕ, ನಿಶ್ಚಿತಾರ್ಥ ನೆರವೇರಿದೆ.ಇದಲ್ಲದೆ, ಕಂಡ ಕನಸೊಂದು ಕನಸಿನ ರೀತಿ ನನಸಾಯಿತು ಎಂದು ಅದಿತಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡ ವಿಚಾರ ಎಲ್ಲೆಡೆ ಸಂಚಲನ ಮೂಡಿಸಿತ್ತು.

ಜೊತೆಗೆ #engaged ಅಂತ ಕೂಡ ಹಾಕಿ ತಮ್ಮ ಹುಡುಗನ ಕೈ ಹಿಡಿದುಕೊಂಡಿರುವ ಫೋಟೋವನ್ನೂ ನಟಿ ಅದಿತಿ ಪ್ರಭುದೇವ ಶೇರ್ ಮಾಡಿದ್ದರು. ನಟಿಯ ಅಭಿಮಾನಿ ವರ್ಗ ಈ ಸಂದರ್ಭ ತುಂಬು ಹೃದಯದಿಂದ ಈ ಜೋಡಿಗಳಿಗೆ ಅಭಿನಂದನೆ ಸಲ್ಲಿಸಿದ್ದರು.

ಸುದ್ದಿ ವಾಹಿನಿ ನಿರೂಪಕಿಯಿಂದ ಅದಿತಿ ಪಯಣ ಆರಂಭವಾಗಿ ಅಲ್ಲಿಂದ ಕಿರುತೆರೆಯಲ್ಲಿಯೂ ಹೆಸರು ಗಳಿಸಿ, ಫ್ಯಾಂಟಸಿ ಧಾರಾವಾಹಿಯಲ್ಲಿ ನಾಗಿಣಿಯಾಗಿ ಗಮನ ಸೆಳೆದಿದ್ದಾರೆ. ಇದರ ಬಳಿಕ 2017ರಲ್ಲಿ ಚಿತ್ರ ರಂಗಕ್ಕೆ ಹಾರಿ, ಅಜಯ್‌ ರಾವ್‌ ಜತೆಗಿನ “ಧೈರ್ಯ” ಸಿನಿಮಾ ಮೂಲಕ ಚಂದನವನದಲ್ಲಿ ಕೂಡ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಚೆಲುವೆಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳು ಕೈ ಬೀಸಿ ಕರೆಯುತ್ತಿದೆ.

ಕಳೆದ ವರ್ಷ ಮದುವೆ ನಿಶ್ಚಯಿಸಿಕೊಂಡಿದ್ದ ಈ ದಾವಣಗೆರೆ ಚೆಲುವೆ, ಮದುವೆಯ ದಿನಾಂಕದ ಜತೆ ಬಂದಿದ್ದು, ಅದಿತಿ, ಇದೀಗ ಯಶಸ್ವಿ ಜತೆಗೆ ಬಾಳ ಬಂಧನಕ್ಕೆ ಬಲಗಾಲಿಡಲು ಸಿದ್ಧತೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಾಹ ಆಮಂತ್ರಣವೂ ಆಪ್ತರನ್ನು ತಲುಪುತ್ತಿವೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ವಿವಾಹಕಾರ್ಯ ನೆರವೇರಲಿದೆ ಎನ್ನಲಾಗುತ್ತಿದೆಯಾದರೂ, ಸ್ಥಳದ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಸದ್ಯದ ಆಮಂತ್ರಣ ಪತ್ರಿಕೆಯಲ್ಲಿ ಇಬ್ಬರ ಹೆಸರು ಮತ್ತು ವಿವಾಹ ದಿನಾಂಕ ಮಾತ್ರ ನಮೂದಾಗಿದ್ದು, ವಿವಾಹ ಸ್ಥಳದ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.

ಧನ್ವೀರ್ ಗೌಡ ನಟನೆಯ ‘ಬಜಾರ್’ ಚಿತ್ರದಲ್ಲೂ ನಟಿಸಿ ಗೆದ್ದ ಬಳಿಕ ಚಿರಂಜೀವಿ ಸರ್ಜಾ ನಟನೆಯ ‘ಸಿಂಗ’ ಚಿತ್ರದಲ್ಲೂ ನಾಯಕಿಯಾಗಿ ಮಿಂಚಿದ್ದರು. ಚಿತ್ರದಲ್ಲಿ ‘ಶ್ಯಾನೆ ಟಾಪಾಗವ್ಳೆ’ ಸಾಂಗ್ ಸೂಪರ್ ಹಿಟ್ ಆಗಿ, ಅಂದಿನಿಂದ ಅಭಿಮಾನಿಗಳ ಪಾಲಿಗೆ ನೆಚ್ಚಿನ ನಟಿಯನ್ನು ಶ್ಯಾನೆ ಟಾಪ್ ಬೆಡಗಿ ಎಂದೇ ಖ್ಯಾತಿ ಪಡೆದಿದ್ದಾರೆ.

ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದು ಮಾತ್ರವಲ್ಲದೇ ‘ರಂಗನಾಯಕಿ’ ಹಾಗೂ ‘ಆನ’ ರೀತಿಯ ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಜಮಾಲಿಗುಡ್ಡ’ ಶೂಟಿಂಗ್ ಮುಗಿಸಿರುವ ಅದಿತಿ, ‘ದಿಲ್‌ಮಾಲ್’, ‘ತೋತಾಪುರಿ’, ‘ತ್ರಿಬಲ್ ರೈಡಿಂಗ್’, 5D, ‘ಅಂದೊಂದಿತ್ತು ಕಾಲ’ ಹಾಗೂ ‘ಮಾಫಿಯಾ’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸದ್ಯಕ್ಕೆ ಒಂದಷ್ಟು ದಿನ ಸಿನಿಮಾಗಳಿಂದ ಬ್ರೇಕ್ ಪಡೆಯುವ ಸೂಚನೆ ದೊರೆತಿದೆ. ನಟಿಯ ಮದುವೆ ಮಹೋತ್ಸವ ಸಮಾರಂಭ ಎಲ್ಲಿ ನಡೆಯಲಿದೆ ಎಂಬ ಕುತೂಹಲ ಜನರಲ್ಲಿ ಮೂಡಿದ್ದು, ಸದ್ಯದಲ್ಲೇ ಉತ್ತರ ಸಿಗುವ ನಿರೀಕ್ಷೆ ಇದೆ.

Leave A Reply

Your email address will not be published.