ಈ ವ್ಯಕ್ತಿಯನ್ನು ಹುಡುಕಿಕೊಟ್ಟವರಿಗೆ ದೊರೆಯಲಿದೆ 8 ಕೋಟಿ ರೂ. ಬಹುಮಾನ!

ಕೊಲೆಗಾರ ನರ್ಸ್ ನ್ನು ಹುಡುಕಿಕೊಟ್ಟವರಿಗೆ ಪೊಲೀಸರಿಂದ 8 ಕೋಟಿಯ ಬಹುಮಾನ ದೊರೆಯುತ್ತದೆ. ಹೌದು. ಇಂತಹದೊಂದು ಘೋಷಣೆಯನ್ನು ಪೊಲೀಸರು ಮಾಡಲು ಕಾರಣ ಭಾರತದ ವ್ಯಕ್ತಿ. ಯಾರೀ ವ್ಯಕ್ತಿ, ಯಾರನ್ನು ಕೊಲೆ ಮಾಡಿದ್ದಾನೆ ಎಂಬುದನ್ನು ಮುಂದೆ ನೋಡಿ..

 

38 ವರ್ಷದ ರಾಜ್‌ವಿಂದರ್ ಸಿಂಗ್ ಎನ್ನುವ ವ್ಯಕ್ತಿಯನ್ನೇ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಹುಡುಕುತ್ತಿದ್ದಾರೆ. ಯಾಕಂದ್ರೆ ಈತ ಮೆಲ್ಬೋರ್ನ್ ಆಸ್ಟ್ರೇಲಿಯಾದಲ್ಲಿ ಮಹಿಳೆ ಒಬ್ಬರನ್ನ ಕೊಂದಿದ್ದಾನೆ. ಇದೀಗ ತಲೆಮರೆಸಿಕೊಂಡಿದ್ದು, ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ್ದಾರೆ.

ರಾಜ್‌ವಿಂದರ್ ಸಿಂಗ್ ಭಾರತ ಮೂಲದ ವ್ಯಕ್ತಿ ಎಂದು ಹೇಳಲಾಗಿದೆ. ಈತ ಆಸ್ಟ್ರೇಲಿಯಾದಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ.  2018ರಲ್ಲಿ ಕಡಲತೀರದಲ್ಲಿ ಆಸ್ಟ್ರೇಲಿಯನ್ ಮಹಿಳೆಯನ್ನು ಕೊಂದಿದ್ದು, ನಂತರ ಕುಟುಂಬ ಸಮೇತರಾಗಿ ಭಾರತದಲ್ಲಿ ಬಂದು ತಲೆ ಮರೆಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ಮಹಿಳೆ ಹತ್ಯೆಯಾದ ಮರುದಿನ ಅಂದರೆ ಅಕ್ಟೋಬರ್ 22 ರಂದು ಕೇರ್ನ್ಸ್‌ನಿಂದ ಹೊರಟು, ಅಲ್ಲಿಂದ 23ರಂದು ಸಿಡ್ನಿಗೆ ಬಂದು ನಂತರ ಭಾರತಕ್ಕೆ ಹೋಗಿದ್ದಾರಂತೆ. ಈ ಖಚಿತ ಮಾಹಿತಿಯ ಮೇರೆಗೆ ಭಾರತದಲ್ಲಿ ಈ ವ್ಯಕ್ತಿ ಇದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಭಾರತದ ಅಧಿಕಾರಿಗಳಿಗೆ ಈ ವಿಚಾರ ತಿಳಿಸಿರುವ ಪೊಲೀಸರು ಅವರ ಸಹಕಾರ ಕೂಡ ಕೇಳಿದ್ದಾರೆ. ಹೀಗಾಗಿ ಈತನನ್ನು ಹುಡುಕಿಕೊಟ್ಟವರಿಗೆ ಒಂದು ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 8 ಕೋಟಿ ಬಹುಮಾನ ಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.