Nokia : ಬಜೆಟ್ ಫ್ರೆಂಡ್ಲಿ ಬೆಲೆಗೆ ನೋಕಿಯಾದಿಂದ ಬಂಪರ್ ಫೋನ್ ಬಿಡುಗಡೆ | ಇದರ ಬೆಲೆ …
ಸ್ಮಾರ್ಟ್ಫೋನ್ ಇಲ್ಲದೆ ಕೆಲಸ ಕಾರ್ಯ ಯಾವುದು ನಡಿಯಲ್ಲ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್ಫೋನ್ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಿದೆ. ಹಾಗಿದ್ದರೆ ನಾವು ಈ ಸ್ಮಾರ್ಟ್ಫೋನ್ ಯಾವುದು ಬೆಸ್ಟ್ ಅನ್ನೋದು ಕೂಡ ನಮಗೆ ಗೊತ್ತಿದ್ದರೆ ಉತ್ತಮ.
ಪ್ರಸ್ತುತ ನೋಕಿಯಾ (Nokia) ಕಂಪನಿಯ ಫೋನ್ಗಳಿಗೆ ಈಗ ಹಿಂದಿನಂತೆ ಬೇಡಿಕೆಯಿಲ್ಲ. ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ, ಒಪ್ಪೋ, ಒನ್ಪ್ಲಸ್ ನಂತಹ ಘಟಾನುಘಟಿ ಕಂಪನಿಗಳ ಸ್ಮಾರ್ಟ್ಫೋನ್ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಅಪರೂಪಕ್ಕೆ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ.
ಈಗಾಗಲೇ ಇತ್ತೀಚಿಗೆ ಭಾರತದಲ್ಲಿ ಮೊಟ್ಟ ಮೊದಲ 5G ಫೋನ್ ಬಿಡುಗಡೆ ಮಡಿದ್ದ ನೋಕಿಯಾ ಕಂಪನಿ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ 2780 ಫ್ಲಿಪ್ ಫೀಚರ್ ಫೋನ್ ರಿಲೀಸ್ ಮಾಡಿದೆ. ಡ್ಯುಯಲ್ ಸ್ಕ್ರೀನ್ ಹೊಂದಿರುವ ಈ ಫೋನ್ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ. ಇದರ ವಿನ್ಯಾಸಕ್ಕೆ ಜನರು ಮನಸೋತಿದ್ದಾರೆ.
ನೋಕಿಯಾ 2780 ಫ್ಲಿಪ್ ನ ವಿಶೇಷತೆ :
• ನೋಕಿಯಾ 2780 ಫ್ಲಿಪ್ ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ $89.99, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 7,400ರೂ. ಆಗಿದೆ .
• ಇದು ಕೆಂಪು ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ನೀಡಲಾಗುತ್ತದೆ.
• ಈ ಫೋನ್ 2.7 ಇಂಚಿನ TFT ಡಿಸ್‌ಪ್ಲೇಯನ್ನು ಹೊಂದಿದೆ.
• ಇದರ ಹೊರಭಾಗದಲ್ಲಿ 1.77 ಇಂಚಿನ ಸೆಕೆಂಡರಿ ಡಿಸ್‌ಪ್ಲೇಯನ್ನು ನೀಡಲಾಗಿದೆ. ಟೈಂ, ಕಾಲರ್ ಐಡಿ ಮತ್ತು ನ್ಯೂ ಅಪ್ಡೇಟ್‌ಗಳು ಸೆಕೆಂಡರಿ ಡಿಸ್‌ಪ್ಲೇಯಲ್ಲಿ ಕಾಣಿಸುತ್ತದೆ.
• ನೋಕಿಯಾ 2780 ಫ್ಲಿಪ್ ಫೋನ್ ಕ್ವಾಲ್ಕಾಮ್ 215 ಪ್ರೊಸೆಸರ್ ವೇಗವನ್ನು ಪಡೆದಿದ್ದು, KaiOS 3.1 ನಲ್ಲಿ ಕಾರ್ಯನಿರ್ವಹಿಸಲಿದೆ.
• ಇದು 1.3 GHz ನಲ್ಲಿ ಚಾಲನೆಯಲ್ಲಿರುವ ಕ್ವಾಡ್-ಕೋರ್ CPU ಮತ್ತು 150 Mbps ಗರಿಷ್ಠ ಡೌನ್‌ಲಿಂಕ್ ವೇಗದೊಂದಿಗೆ X5 LTE ಮೋಡೆಮ್ ಅನ್ನು ಒಳಗೊಂಡಿರುತ್ತದೆ.
• 4GB RAM ಮತ್ತು 512MB ಇಂಟರ್ ಸ್ಟೋರೇಜ್ ಇದೆ.
• ಈ ಫೋನ್ನ ಸೆಕೆಂಡರಿ ಸ್ಕ್ರೀನ್ ಮೇಲೆ ಎಲ್‌ಇಡಿ ಫ್ಲ್ಯಾಷ್ ಒಳಗೊಂಡಿರುವ 5 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.
• 1,450mAh ಸಾಮರ್ಥ್ಯದ ರಿಮೂವಬಲ್ ಬ್ಯಾಟರಿಯನ್ನು ಒಳಗೊಂಡಿದೆ.
• ಗೂಗಲ್ ಮ್ಯಾಪ್, ಯೂಟ್ಯೂಬ್ ಮತ್ತು ವೆಬ್ ಬ್ರೌಸರ್ ನೀಡಿದೆ.
• ವೈಫೈ, MP3 ಮತ್ತು FM ರೇಡಿಯೋ ಬೆಂಬಲ ಕೂಡ ಪಡೆದುಕೊಂಡಿದೆ.
ಇದರ ಜೊತೆಗೆ ಭಾರತಕ್ಕೆ ಬಂದಿದೆ ನೋಕಿಯಾ G60 5G:
ನೋಕಿಯಾ ಕಂಪನಿ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್ ಬಿಡುಗಡೆ ಮಾಡಿದೆ. ಮಧ್ಯಮ ಬೆಲೆ ಹೊಂದಿರುವ ಈ ಫೋನಿನ ಹೆಸರು ನೋಕಿಯಾ G60 5G ಆಗಿದೆ. ಇದರ 6GB RAM, 128GB ಸ್ಟೋರೇಜ್ ಆಯ್ಕೆಗೆ 29,999 ರೂ. ನಿಗದಿ ಮಾಡಲಾಗಿದೆ. ಅಲ್ಲದೆ 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ವೇಗದೊಂದಿಗೆ ಕಾರ್ಯನಿರ್ವಹಿಸಲಿದ್ದು ಆಂಡ್ರಾಯ್ಡ್ 12 OS ಅಳವಡಿಸಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡರೆ, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್, 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದಕ್ಕೆ ತಕ್ಕಂತೆ 20W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ ಎಂದು ಮಾಹಿತಿ ನೀಡಲಾಗಿದೆ.
ನೋಕಿಯಾ ಬ್ರಾಂಡ್ ಇಷ್ಟ ಪಡುವವರು ಮತ್ತು ನೋಕಿಯಾ ವನ್ನು ಇನ್ನು ಬಳಸುವವರಿಗೆ ಈ ಹೊಸ ಸ್ಮಾರ್ಟ್ ಫೋನನ್ನು ಪರಿಚಯಿಸಲಾಗಿದೆ.