‘ಆಮ್ಲೇಟ್’ನಿಂದ ಹೋಯ್ತು ವ್ಯಕ್ತಿಯ ಪ್ರಾಣ!!

ಕೆಲವೊಂದು ಬಾರಿ ನಂಬಲು ಅಸಾಧ್ಯವಾದದ್ದು ಕೂಡ ನಂಬಲೇಬೇಕಾಗಿದೆ. ಯಾಕಂದ್ರೆ, ಈ ಜಗತ್ತೆ ಅಷ್ಟು ವಿಚಿತ್ರತೆಯಿಂದ ಕೂಡಿದೆ. ಇಂದು ನಮ್ಮೊಂದಿಗೆ ಇರೋರು ಮತ್ತೆ ನಮ್ಮೊಂದಿಗೆ ಇರುತ್ತಾರೆ ಅನ್ನೋದು ನಂಬಿಕೆ ಮಾತ್ರ. ಅದರಂತೆ ಇಲ್ಲೊಂದು ಕಡೆ ಆಮ್ಲೇಟ್ ತಿಂದಿದ್ದರಿಂದ ವ್ಯಕ್ತಿಯ ಜೀವವೇ ಹೋಗಿದೆ.

 

ಹೌದು. ಈ ಘಟನೆಯು ಊಹಿಸಲು ಅಸಾಧ್ಯವಾದರೂ, ಇಂತಹ ಪ್ರಕರಣಗಳ ಸಾಲಿಗೆ ಅದೆಷ್ಟೋ ಘಟನೆಗಳು ಸೇರಿದೆ. ಈ ಘಟನೆ ನಡೆದಿರೋದು ತೆಲಂಗಾಣದಲ್ಲಿ. ಇಲ್ಲಿನ ಬಚ್ಚನಪೇಟೆಯ ಭೂಪಾಲ ರೆಡ್ಡಿ ಸಾವನ್ನಪ್ಪಿರುವ ವ್ಯಕ್ತಿ. ಈ ವ್ಯಕ್ತಿ ಆಮ್ಲೇಟ್ ತಿನ್ನೋದಕ್ಕೆ ಹೋಗಿ ಪ್ರಾಣ ಬಿಟ್ಟಿದ್ದಾರೆ.

ಮೃತರು ಸ್ಥಳೀಯ ಬಾರ್ ಒಂದರಲ್ಲಿ ಕುಳಿತು ಕುಡಿಯುತ್ತಿದ್ದ ವೇಳೆ ಆಮ್ಲೇಟ್ ತರಿಸಿಕೊಂಡಿದ್ದಾರೆ. ಆಮ್ಲೇಟ್ ತಿನ್ನುವ ವೇಳೆ ಗಂಟಲಿಗೆ ಸಿಕ್ಕಾಕಿಕೊಂಡಿದ್ದು, ಈ ಪರಿಣಾಮವಾಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಾವಿನ ಸಂಬಂಧ ಇದೀಗ ತನಿಖೆ ಆರಂಭಿಸಿದ್ದು, ಸಾವಿನ ಸತ್ಯಾಸತ್ಯತೆ ಬಳಿಕವಷ್ಟೇ ತಿಳಿದು ಬರಬೇಕಿದೆ.

Leave A Reply

Your email address will not be published.