ಮಹಿಳೆಯರೇ ನಿಮಗಾಗಿ | ಈ ಎಲ್ಲಾ Applications ಮಹಿಳೆಯರ ಕೆಲಸ ಸುಲಭ ಮಡುತ್ತೆ!!!

ಮನೆಯ ಜವಾಬ್ದಾರಿ ಹೊರುವ ಮಹಿಳೆಯರು ಹಣಕಾಸಿನ ವಿಚಾರದಲ್ಲಿ ಸೂಕ್ಷ್ಮದಿಂದ ಉಳಿತಾಯದ ಕಡೆಗೆ ಗಮನ ಹರಿಸುವುದು ವಾಡಿಕೆ. ಆದರೆ, ಕೆಲವೊಮ್ಮೆ ಎಲ್ಲಿ ಹಣ ಖರ್ಚು ಮಾಡಿದ್ದೇವೆ ಎಂಬ ಲೆಕ್ಕಚಾರ ನೆನಪಿರುವುದಿಲ್ಲ.

 

ಅನೇಕ ಬಾರಿ ಮಹಿಳೆಯರ ಸುರಕ್ಷತೆಯ ಪ್ರಶ್ನೆ ತಲೆದೋರುತ್ತದೆ. ಮಹಿಳೆಯರ ಸುರಕ್ಷತೆಯಿಂದ ಹಿಡಿದು ಕೆಲಸದವರೆಗೆ ಎಲ್ಲಕ್ಕೂ ನೆರವಾಗುವ ಕೆಲ ಅಪ್ಲಿಕೇಷನ್ ಗಳಿದ್ದು, ಅದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕಿದೆ.

ಮಹಿಳೆಯರ ಕೆಲಸ ಸುಲಭಗೊಳಿಸುವ ನಿಟ್ಟಿನಲ್ಲಿ ಕೆಲ ಅಪ್ಲಿಕೇಶನ್ ಗಳನ್ನೂ ಪರಿಚಯಿಸಲಾಗಿದೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದ ಮೇಲಿಂದ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಅನೇಕ ವಿಷಯಗಳ ಬಗ್ಗೆ ಗಮನ ಹರಿಸುವ ನಡುವೆ ಕೆಲ ವಿಚಾರಗಳು ಮರೆಯುವುದುಂಟು.


ಮನೆಯವರ ಆರೈಕೆ, ಅಡುಗೆ ತಯಾರಿಕೆ, ಮಕ್ಕಳ ಟಿಫನ್, ಮನೆ ಜವಾಬ್ದಾರಿ, ಮಕ್ಕಳ ಓದು, ಬ್ಯಾಂಕ್ ವ್ಯವಹಾರ, ಮನೆಯವರ ಆರೋಗ್ಯ, ಮನೆ ಕೆಲಸದವರ ಅಕೌಂಟ್, ಮನೆಗೆ ತರಬೇಕಾದ ಸಾಮಾನುಗಳ ಪಟ್ಟಿ ಸೇರಿದಂತೆ ಸಾಕಷ್ಟು ವಿಷಯಗಳನ್ನು ಮಹಿಳೆಯರು ನೆನಪಿಟ್ಟುಕೊಳ್ಳಬೇಕು.
ಕಚೇರಿಗೆ ಹೋಗುವ ಮಹಿಳೆಯಾಗಿದ್ದರೆ ಆ ಕೆಲಸವನ್ನು ಕೂಡ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ದಿನದ ರೂಟೀನ್ ನಲ್ಲಿ ಒಂದು ಮರೆತರು ಕೂಡ ಕೆಲಸ ಕೆಡುತ್ತದೆ. ಹಾಗಾಗಿ, ಎಲ್ಲವನ್ನು ನೆನಪಿಸಿಕೊಂಡು ಕೆಲಸ ಮಾಡೋದು ಸುಲಭದ ವಿಷಯವಲ್ಲ!!!

ಕೆಲಸ (Work) ಜಾಸ್ತಿಯಾದಂತೆ ಯಾವುದೂ ನೆನಪಾಗೋದಿಲ್ಲ ಎನ್ನುವ ಮಹಿಳೆಯರು ಡಿಜಿಟಲ್ (Digital) ಯುಗದ ಲಾಭ ಪಡೆಯಬಹುದಾಗಿದೆ. ಇದೀಗ,ಮಹಿಳೆಯರ ಕೆಲಸವನ್ನು ಸರಳಿಕರಿಸುವ ನಿಟ್ಟಿನಲ್ಲಿ ಅನೇಕ ಅಪ್ಲಿಕೇಷನ್ ಗಳು ಲಭ್ಯವಿದೆ.

ಈ ಅಪ್ಲಿಕೇಷನ್ ಸಹಾಯ ಪಡೆದು ಅದರಲ್ಲಿ ಕೆಲಸದ ಪಟ್ಟಿ ಮಾಡಿಡಬಹುದಾಗಿದೆ.
ಈ ಅಪ್ಲಿಕೇಶನ್ ಗಳು ಕಾಲ ಕಾಲಕ್ಕೆ ಮಹಿಳೆಯರನ್ನು ಎಚ್ಚರಿಸುತ್ತಿರುತ್ತವೆ. ಹಾಗಾದರೆ ಮಹಿಳೆಯರಿಗೆ ಸಹಕಾರಿಯಾಗುವ ಅಪ್ಲಿಕೇಷನ್ (Application) ಗಳು ಯಾವುವು?? ಇಲ್ಲಿದೆ ಮಾಹಿತಿ.

ಮಿಂಟ್ (Mint) : ಮೊಬೈಲ್‌ನಲ್ಲಿ ಮಿಂಟ್ ಆ್ಯಪ್ ಡೌನ್‌ಲೋಡ್ ಮಾಡಬಹುದಾಗಿದ್ದು, ಇಡೀ ತಿಂಗಳ ಖರ್ಚು ವೆಚ್ಚವನ್ನು ಡೈರಿಯಲ್ಲಿ ಬರೆಯುವ ಅಗತ್ಯವಿರುವುದಿಲ್ಲ. ಈ ಅಪ್ಲಿಕೇಷನ್ ನಲ್ಲಿ ಎಲ್ಲ ಮಾಹಿತಿ ಸಿಗುತ್ತದೆ.

ತಿಂಗಳು ಎಷ್ಟು ಖರ್ಚು ಮಾಡಿದ್ದೀರಿ, ಎಷ್ಟು ಉಳಿಸಿದ್ದೀರಿ ಎಂಬುದು ಕೂಡ ತಿಳಿಯುತ್ತದೆ. ಕುಟುಂಬದ ಯಾವ್ಯಾವ ವ್ಯಕ್ತಿಗಳಿಗೆ ಎಷ್ಟು ಖರ್ಚಾಗಿದೆ ಎಂಬ ವಿವರಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ಸೇಫ್ಟಿಪಿನ್ (Safetipin) : ಹೆಸರಿನಲ್ಲಿಯೇ ಮಹತ್ವವನ್ನು ಹೇಳುವ ಈ ಅಪ್ಲಿಕೇಶನ್, ಮಹಿಳೆಯರಿಗೆ ಸುರಕ್ಷತೆ ಬಹಳ ಅಗತ್ಯವಾಗಿದ್ದು, ಮಹಿಳೆಯರು ಈ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡರೆ ಅವರ ಲೊಕೇಷನ್ ಟ್ರ್ಯಾಕ್ ಮಾಡಬಹುದಾಗಿದ್ದು , ಇದರಲ್ಲಿ ತುರ್ತು ನಂಬರ್ ಕೂಡ ಸೇವ್ ಮಾಡಬಹುದಾಗಿದೆ.

ಅಗತ್ಯವಿದ್ದಾಗ ಆ ನಂಬರ್ ಗೆ ತುರ್ತು ಎಚ್ಚರಿಕೆಯನ್ನು ಕಳುಹಿಸಬಹುದಾಗಿದೆ. ಪ್ರತಿಯೊಬ್ಬ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ ಡೌನ್ಲೋಡ್ ಮಾಡಬಹುದಾಗಿದೆ.


ಸ್ಟಿಪೇಟರ್ (Stipator) : ಇದು ಕೂಡ ಸುರಕ್ಷತೆಯ ಅಪ್ಲಿಕೇಷನ್ ಆಗಿದೆ. ಮಹಿಳೆಯರು ಎಲ್ಲಿಗೆ ಹೋಗಿದ್ದೀರಿ ಎಂಬುದನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ನೆರವಾಗುತ್ತದೆ. ಸಾಮಾಜಿಕ ನೆಟ್ವರ್ಕ್ ನಲ್ಲಿ ನಿಮ್ಮ ಪ್ರದೇಶದ ಬಗ್ಗೆ ಇದು ಮಾಹಿತಿ ನೀಡುವ ಕಾರಣ, ನಿಮ್ಮ ಆಪ್ತರಿಗೆ ನೀವು ಎಲ್ಲಿದ್ದೀರಿ ಎಂಬುದು ಸುಲಭವಾಗಿ ತಿಳಿಯುತ್ತದೆ.

ಕೋಜಿ (Cozi) : ಇದು ಉಚಿತ ಅಪ್ಲಿಕೇಶನ್ ಆಗಿದ್ದು, ಅಮ್ಮಂದಿರಿಗೆ ಇದಕ್ಕಿಂತ ಉತ್ತಮವಾದ ಅಪ್ಲಿಕೇಷನ್ ಬೇರೊಂದಿಲ್ಲ ಎನ್ನಬಹುದಾಗಿದೆ.ಎಲ್ಲಾ ಕುಟುಂಬ ಸದಸ್ಯರನ್ನು ಒಂದೇ ಸಮಯದಲ್ಲಿ ನಿರ್ವಹಿಸಬಹುದಾಗಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯರ ಹೆಸರನ್ನು ಬೇರೆ ಬೇರೆ ಬಣ್ಣಗಳಲ್ಲಿ ತೋರಿಸಬಹುದಾಗಿದ್ದು, ಮುಂಬರುವ ಈವೆಂಟ್‌ಗಳ ಪಟ್ಟಿಯನ್ನು ಕೂಡ ಮಾಡಲು ಅವಕಾಶವಿದೆ.

ಜೊತೆಗೆ ಮನೆಗೆ ಅಗತ್ಯವಿರುವ ವಸ್ತುಗಳ ಪಟ್ಟಿಯನ್ನು ಕೂಡ ಸಿದ್ದ ಪಡಿಸಬಹುದು. ಇದು ಮೊಬೈಲ್ ನಲ್ಲಿ ಮಾತ್ರವಲ್ಲದೆ ಕಂಪ್ಯೂಟರ್ ನಲ್ಲಿ ಕೂಡ ಓಪನ್ ಆಗುವ ವಿಶೇಷತೆಯನ್ನು ಒಳಗೊಂಡಿದೆ.

ಎಂ ಟ್ರ್ಯಾಕರ್ (mTrakr) : ಈ ಅಪ್ಲಿಕೇಶನ್ ಮೂಲಕ ವರ್ಕಿಂಗ್ ವುಮೆನ್ ಗಳಿಗೆ ನೆರವಾಗಲಿದೆ. ಇದರ ಮೂಲಕ ಮಹಿಳೆ ಗಳಿಕೆಯಿಂದ ವೆಚ್ಚಗಳವರೆಗೆ, ಹೂಡಿಕೆಯಿಂದ ನೀವು ಮಾಡುವ ಯೋಜನೆಗಳವರೆಗೆ ಎಲ್ಲಾ ದಾಖಲೆಗಳನ್ನು ಒಂದೇ ಅಪ್ಲಿಕೇಶನ್‌ನಲ್ಲಿ ಇಡಬಹುದಾಗಿದೆ.


ಈ ಅಪ್ಲಿಕೇಶನ್ ಒಂದಿದ್ದರೆ ಕಂಪ್ಯೂಟರ್ ನಲ್ಲಿ ಯಾವುದೇ ದಾಖಲೆ ಇಟ್ಟುಕೊಳ್ಳುವ ಅಗತ್ಯವಿಲ್ಲ. ನೀವು ಅಗತ್ಯಕ್ಕಿಂತ ಹೆಚ್ಚು ಎಲ್ಲಿ ಖರ್ಚು ಮಾಡಿದ್ದೀರಿ ಎಂಬುದನ್ನು ಈ ಅಪ್ಲಿಕೇಷನ್ ಮೂಲಕ ಸುಲಭವಾಗಿ ಪತ್ತೆ ಮಾಡಬಹುದು. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೂ ನೀವು ಈ ಅಪ್ಲಿಕೇಷನ್ ಮೂಲಕವೆ ಎಲ್ಲವನ್ನು ಟ್ರ್ಯಾಕ್ ಮಾಡಬಹುದಾಗಿದೆ.

Leave A Reply

Your email address will not be published.