KCET 2022 : ‘ಕೆಇಎ’ ಯಿಂದ ಮಹತ್ವದ ಮಾಹಿತಿ !

ಪ್ರಸ್ತುತ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ ಮುಂತಾದ ಕೋರ್ಸ್‌ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ ಮಹತ್ವದ ಸುತ್ತೋಲೆ ಹೊರಡಿಸಿದೆ. 2022ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ ಮುಂತಾದ ಕೋರ್ಸ್‌ಗಳ ಪ್ರವೇಶಾತಿಗೆ ಮೊದಲನೇ ಸುತ್ತಿನ ಸೀಟು ಹಂಚಿಕೆಗೆ ಚಾಯ್ಸ್‌ ಅನ್ನು ಆಯ್ಕೆ ಮಾಡಲು, ಶುಲ್ಕ ಪಾವತಿ ಹಾಗು ಕಾಲೇಜಿನಲ್ಲಿ ಪ್ರವೇಶ ಪಡೆಯಲು ದಿನಾಂಕವನ್ನು ವಿಸ್ತರಿಸಲಾಗಿದೆ.

 

2022ನೇ ಸಾಲಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ ಮುಂತಾದ ಕೋರ್ಸ್‌ಗಳ ಪ್ರವೇಶಾತಿ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ. ಅಲ್ಲದೆ ಕೆಲವು ದಿನಾಂಕಗಳನ್ನು ಕೆಇಎ ವಿಸ್ತರಿಸಿ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆ ಕ್ರಮಗಳು :
• ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಚಾಯ್ಸ್ ಅನ್ನು ಆಯ್ಕೆ ಮಾಡಲು, ನಾಲ್ಕು ಚಾಯ್ಸ್‌ ಗಳಲ್ಲಿ ಸೂಕ್ತವಾದ ಚಾಯ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳಲು ದಿನಾಂಕ 03-11-2022ರ ಸಂಜೆ 4 ಗಂಟೆಯವರೆಗೆ ಅವಕಾಶ ನೀಡಿದೆ.
• ಯಾವುದೇ ಚಾಯ್ಸ್ ಅನ್ನು ಆಯ್ಕೆ ಮಾಡುವ ಮುನ್ನ ಪ್ರತಿ ಚಾಯ್ಸ್ ನ ಪರಿಣಾಮವನ್ನು ಗಮನಿಸಿ ನಂತರ ಆಯ್ಕೆ ಮಾಡುವಂತೆ ತಿಳಿಸಿದೆ.
• ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ, ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ದಿನಾಂಕ 04-11-2022ರ ಸಂಜೆ 4 ಗಂಟೆಯವರೆಗೆ ಅವಕಾಶ ನೀಡಿದೆ.
• ಚಾಯ್ಸ್ ಒಂದನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಮಾತ್ರ ಶುಲ್ಕ ಪಾವತಿ ಮತ್ತು ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಕೆಇಎ ತಿಳಿಸಿದೆ.
• ಇನ್ನೂ ಚಾಯ್ಸ್ 1 ಅನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು 05-11-2022ರ ಸಂಜೆ 5 ಗಂಟೆಯೊಳಗೆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ತಿಳಿಸಿದೆ.

ಈ ಮೇಲೆ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ/ ಕಾಲೇಜುಗಳ ಪ್ರವೇಶ / ಸೀಟು ಹಂಚಿಕೆ ಇತ್ಯಾದಿಗಲು MCI, DCI, AICTE, COA, NCISM, NCH, PCI, ಸರ್ಕಾರ, ಸಂಬಂಧಿಸಿದ ವಿಶ್ವವಿದ್ಯಾಲಯಗಳು, ಅಪೆಕಸ್‌ ಸಂಸ್ಥೆಗಳು ಕಾಲ ಕಾಲಕ್ಕೆ ನಿಗದಿಪಡಿಸುವ ನಿಯಮಗಳಿಗೆ / ಅನುಮೋದನೆಗೆ / ಷರತ್ತಿಗೆ ಒಳಪಟ್ಟಿರುತ್ತವೆ.

ಪ್ರಾಧಿಕಾರವು ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಅಥವಾ ನಿಂಬಂಧನೆಗಳನ್ನು ಪೂರೈಸದ ಅಭ್ಯರ್ಥಿಗಳ ಪ್ರವೇಶವನ್ನು ಯಾವುದೇ ಸಮಯದಲ್ಲಿ ಹಿಂತೆಗೆದುಕೊಳ್ಳುವ ಹಕ್ಕನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಾಯ್ದಿರಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.