ಪ್ರಯಾಣ ಮಾಡುವಾಗ ವಾಂತಿ ಆಗುತ್ತಿದೆಯೇ? ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ!!!

ಹಲವರಲ್ಲಿ ಕೆಲವರಿಗೆ ವಾಹನಗಳಲ್ಲಿ ಹತ್ತಿರ ಅಥವಾ ದೂರದ ಪ್ರಯಾಣ ಮಾಡಬೇಕಾದರೆ ವಾಂತಿ ಬರುತ್ತದೆ. ಇದರಿಂದ ಕೆಲವು ಜನರಿಗೆ ಹಿಂಸೆ ಎನಿಸುತ್ತದೆ. ಇನ್ನೂ ಕೆಲವರು ದೂರದ ಪ್ರಯಾಣ ಬೆಳೆಸುವುದನ್ನೇ ನಿಲ್ಲಿಸುತ್ತಾರೆ. ಅಷ್ಟು ಮಾತ್ರವಲ್ಲದೆ ಹಲವಾರು ರೀತಿಯಲ್ಲಿ ವಾಕರಿಕೆ ತಡೆಗಟ್ಟಲು ಪ್ರಯತ್ನಿಸಿ ವಿಫಲವಾಗಿರುತ್ತದೆ. ಈ ವಾಕರಿಕೆ, ವಾಂತಿ ನಿವಾರಣೆಗೆ ಏನು ಮಾಡಬೇಕು ಎಂಬ ಬಗ್ಗೆ ವೈದ್ಯರ ಸಲಹೆ ಇಲ್ಲಿದೆ.

 

ಹೀಗೇ ಪ್ರಯಾಣದ ವೇಳೆ ವಾಂತಿ ಬರುವುದನ್ನು ಮೋಷನ್‌ ಸಿಕ್‌ನೆಸ್‌ ಎನ್ನುತ್ತಾರೆ. ಇದು ಯಾಕೆ ಹೀಗಾಗುತ್ತದೆ ಅಂದರೆ ವಾಹನದ ಚಲನೆ ವೇಗವಾಗಿದ್ದಾಗ ನಮ್ಮ ಮೆದುಳು ಅದನ್ನು ಗ್ರಹಿಸುವುದಿಲ್ಲ. ಇದರಿಂದಾಗಿ ಹೊಟ್ಟೆಯ ಸಮಸ್ಯೆಗಳು, ತಲೆನೋವು, ಬಾಯಲ್ಲಿ ನೀರು ಬರುವುದು ಉಂಟಾಗುತ್ತದೆ.

ಪ್ರಯಾಣ ಮಾಡುವಾಗ ಅನಾರೋಗ್ಯವಾಗುವುದು 2 ವರ್ಷದಿಂದ 12 ವರ್ಷದ ಮಕ್ಕಳಿಗೆ ಹಾಗೂ ಮಹಿಳೆಯರಲ್ಲಿ ಹೆಚ್ಚಾಗಿ ಈ ಸಮಸ್ಯೆ ಕಾಡುತ್ತದೆ ಎಂದು ಆಯುರ್ವೇದ ವೈದ್ಯೆ ಡಾ. ವಸುಂಧರಾ ಅವರು ಹೇಳಿದರು.

ಪ್ರಯಾಣ ಮಾಡುವಾಗ ಉಂಟಾಗುವ ವಾಕರಿಕೆ, ಕಿರಿಕಿರಿಯನ್ನು ತಪ್ಪಿಸಲು ಬಾಯಲ್ಲಿ ಶುಂಠಿ ಅಥವಾ ಲಿಂಬು ಚಾಕಲೇಟ್ ಅಥವಾ ಪೆಪ್ಪರ್‌ಮೆಂಟ್‌ಗಳನ್ನು ಬಾಯಲ್ಲಿ ಹಾಕಿಕೊಂಡಿರುವುದು ಒಳ್ಳೆಯದು. ಇದರಿಂದ ಗಮನ ಒಂದೇ ಕಡೆ ಇರುತ್ತದೆ. ಅಲ್ಲದೆ ಪ್ರಯಾಣ ಮಾಡುವಾಗ ಅಂತಹ ಸಮಸ್ಯೆ ಇದ್ದವರು ನೀರು ಕುಡಿಯುವುದು ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ.

ಅಷ್ಟೇ ಅಲ್ಲದೆ, ಹೊರಡುವ 2 ಅಥವಾ 3 ಗಂಟೆ ಮೊದಲೇ ಆಹಾರವನ್ನು ಸೇವನೆ ಮಾಡುವುದು ಒಳ್ಳೆಯದು. ಆಗ ಹೊಟ್ಟೆ ತೊಳೆಸುವಂತಹ ಸಮಸ್ಯೆಯನ್ನು ದೂರಮಾಡಬಹುದು. ಹೊಟ್ಟೆ ತುಂಬಾ ತಿನ್ನದೆ ಲಘು ಆಹಾರ ಸೇವನೆ ಮಾಡಿದರೆ ಒಳ್ಳೆಯದು. ಖಾರ, ಜೊತೆಗೆ ಕರಿದ ಅಥವಾ ಎಣ್ಣೆ ಅಂಶ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡಬಾರದು.

ಪ್ರಯಾಣ ಮಾಡುವಾಗ ತಮ್ಮ ಗಮನವನ್ನು ಬೇರೆಡೆಗೆ ಇಟ್ಟುಕೊಳ್ಳಲು ಪ್ರಯಾಣದ ವೇಳೆಯಲ್ಲಿ ಪುದೀನಾ, ಶುಂಠಿಯಂತಹ ನೈಸರ್ಗಿಕ ಸುವಾಸನೆಯುಕ್ತ ಪದಾರ್ಥಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಕು. ಆಗಾಗ ಅದರ ಸುವಾಸನೆಯನ್ನು ಪಡೆದುಕೊಳ್ಳುತ್ತಿದ್ದರೆ ವಾಂತಿ, ವಾಕರಿಕೆಯಂತಹ ಸಮಸ್ಯೆಯಿಂದ ದೂರವಿರಿಸಬಹುದು ಎಂಬುದು ವೈದ್ಯರ ಸಲಹೆಯಾಗಿದೆ.

Leave A Reply

Your email address will not be published.