ಚಂದ್ರಗ್ರಹಣ ಹಿನ್ನೆಲೆ ನ.8ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳು ನಡೆಯುವುದಿಲ್ಲ

Share the Article

ಸುಬ್ರಹ್ಮಣ್ಯ : ಚಂದ್ರಗ್ರಹಣದ ದಿನವಾದ ನ.8ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳು ನಡೆಯುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಯಾವುದೇ ಸೇವೆಗಳು, ಭೋಜನ ಪ್ರಸಾದ ವಿತರಣೆ ಕೂಡಾ ಇರುವುದಿಲ್ಲಆದರೆ ಶ್ರೀ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತರಿಗೆ ಶ್ರೀ ದೇವರ ದರುಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಳಗ್ಗೆ 9ಗಂಟೆಯಿಂದ 11.30ರ ತನಕ,ಮಧ್ಯಾಹ್ನ 2.39ರಿಂದ 6.19ರ ತನಕ, ರಾತ್ರಿ 7.30ರಿಂದ 9 ರ ತನಕ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.