Canon : ಕ್ಯಾನನ್ ಲಾಂಚ್ ಮಾಡಿದೆ ಭಾರತದಲ್ಲಿ ಹೊಸ ಕ್ಯಾಮೆರಾ | ಫೀಚರ್ಸ್ ಬಗ್ಗೆ ತಿಳ್ಕೊಳ್ಳಿ!

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲದರಲ್ಲೂ ಮಾರ್ಪಾಡುಗಳಾಗಿ, ತಂತ್ರಜ್ಞಾನದಲ್ಲಿ ನವೀನ ಮಾದರಿಗಳ ವೈಶಿಷ್ಟ್ಯದ ಉಪಕರಣಗಳು, ಮೊಬೈಲ್ ಸಾಧನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಕಾಲ ಬದಲಾದಂತೆ ಎಲ್ಲದರಲ್ಲೂ ಬದಲಾವಣೆಗಳಾಗಿ, ಜನರ ಅಭಿರುಚಿಗೆ ಅನುಗುಣವಾಗಿ ಕೈಗೆಟಕುವ ದರದಲ್ಲಿ ಪಡೆದುಕೊಳ್ಳುವ ಸುವರ್ಣ ಅವಕಾಶವನ್ನೂ ಕಂಪನಿಗಳು ಕಲ್ಪಿಸಿವೆ.


ಇದೀಗ ತನ್ನ ಹೊಸ ಕ್ಯಾನನ್‌ EOS R6 Mark II ಕ್ಯಾಮೆರಾವನ್ನು ಭಾರತದಲ್ಲಿ ಪರಿಚಯಿಸಿದ್ದು, ಈ ಹೊಸ ಮಾದರಿಯು ಸೆನ್ಸಾರ್ ರೆಸಲ್ಯೂಶನ್, ಬರ್ಸ್ಟ್ ಶೂಟಿಂಗ್ ಸಾಮರ್ಥ್ಯ, ಆಟೋಫೋಕಸ್‌ನಲ್ಲಿ ಹೊಸ ಅಪ್ಡೇಟ್‌ಗಳನ್ನು ಪಡೆದುಕೊಂಡಿದೆ.

ಫೋಟೊ ಶೂಟ್ ಮಾಡುವ ಕ್ರೇಜ್ ಈಗಿನ ದಿನಗಳಲ್ಲಿ ಹೆಚ್ಚು ಎಂದರೆ ತಪ್ಪಾಗದು. ಇಂದಿನ ದಿನಗಳಲ್ಲಿ ಕ್ಯಾಮೆರಾ ಮಾರುಕಟ್ಟೆ ಸಾಕಷ್ಟು ಕಲರ್‌ಫುಲ್‌ ಆಗಿದ್ದು, ನವೀನ ತಂತ್ರಜ್ಞಾನವನ್ನು ಒಳಗೊಂಡ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಬೇಡಿಕೆ ಪಡೆದಿವೆ .

ಇದರಲ್ಲಿ ಕ್ಯಾನನ್‌ ಕಂಪೆನಿ ಕೂಡ ಒಂದಾಗಿದ್ದು, ಕ್ಯಾನನ್‌ ಕಂಪೆನಿ ನೂತನ ಮಾದರಿಯ ಕ್ಯಾಮೆರಾಗಳಿಗೆ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದೆ.

ಕ್ಯಾನನ್‌ ಕಂಪೆನಿ ಭಾರತದಲ್ಲಿ ಹೊಸ ಕ್ಯಾನನ್‌ EOS R6 Mark II ಕ್ಯಾಮೆರಾ ಬಿಡುಗಡೆ ಮಾಡಿದೆ. ಇದು 24.2-ಮೆಗಾಪಿಕ್ಸೆಲ್ ಫುಲ್‌-ಫ್ರೇಮ್ CMOS ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ ಇದು ಇನ್-ಬಾಡಿ 5-ಆಕ್ಸಿಸ್ ಸೆನ್ಸರ್ ಸ್ಟೆಬಿಲೈಸೇಶನ್ ಮತ್ತು 3.69 ಮಿಲಿಯನ್-ಡಾಟ್ ರೆಸಲ್ಯೂಶನ್ ಹೊಂದಿರುವ OLED ಎಲೆಕ್ಟ್ರಾನಿಕ್ ವ್ಯೂಫೈಂಡರ್ ಅನ್ನು ಒಳಗೊಂಡಿದೆ.
ಕ್ಯಾನನ್‌ EOS R6 Mark II ಕ್ಯಾಮೆರಾ ಭಾರತದಲ್ಲಿ ಕೇವಲ ಕ್ಯಾಮೆರಾ ಬಾಡಿಗೆ ಮಾತ್ರ 2,43,995ರೂ. ಬೆಲೆಯನ್ನು ಹೊಂದಿದ್ದು, ಇದು RF24-105mm f/4L IS USM ಪ್ರೀಮಿಯಂ ಕಿಟ್ ಲೆನ್ಸ್ ಜೊತೆಗೆ 3,43,995ರೂ, ಬೆಲೆಯಲ್ಲಿ ಬರಲಿದೆ. ಈ ಕ್ಯಾಮೆರಾ ನವೆಂಬರ್ ಅಂತ್ಯದ ವೇಳೆಗೆ ಭಾರತದಲ್ಲಿ ಲಭ್ಯವಾಗಲಿದೆ ಎಂದು ಕ್ಯಾನನ್‌ ಕಂಪೆನಿ ಹೇಳಿದೆ .


ಕ್ಯಾನನ್‌ EOS R6 Mark II ಕ್ಯಾಮೆರಾ 24.2-ಮೆಗಾಪಿಕ್ಸೆಲ್ ಫುಲ್‌-ಫ್ರೇಮ್ CMOS ಸೆನ್ಸಾರ್‌ ಅನ್ನು ಹೊಂದಿದೆ. ಇದರ ISO ರೇಂಜ್‌ 100 ರಿಂದ 1,02,400 ಸ್ಟಿಲ್‌ಗಳಿಗೆ ಮತ್ತು 100 ರಿಂದ 25,600 ವೀಡಿಯೊಗಳಿಗೆ ಹೊಂದಿದೆ.

ಇದರ ಬರ್ಸ್ಟ್ ಶೂಟಿಂಗ್ ಸಾಮರ್ಥ್ಯವನ್ನು ಸುಧಾರಿಸಲಾಗಿದ್ದು, ಎಲೆಕ್ಟ್ರಾನಿಕ್ ಶಟರ್ ಬಳಸುವಾಗ AE/AF ಟ್ರ್ಯಾಕಿಂಗ್‌ನೊಂದಿಗೆ 20fps ನಿಂದ 40fps ಗೆ ಹೋಗುತ್ತದೆ. ಮೆಕಾನಿಕಲ್‌ ಶಟರ್ ಬಳಸುವಾಗ ಸ್ಟಿಲ್‌ಗಳ ಬರ್ಸ್ಟ್ ರೇಟ್‌ 12fps ಆಗಿರಲಿದೆ.

ಈ ಕ್ಯಾಮರಾದಲ್ಲಿ AI ಡೀಪ್‌ ಲರ್ನಿಂಗ್‌ ಟೆಕ್ನಾಲಜಿಯನ್ನು ನೀಡಲಾಗಿದ್ದು, ಕುದುರೆಗಳು, ರೈಲುಗಳು ಮತ್ತು ವಿಮಾನಗಳಂತಹ ಕಂಟೆಂಟ್‌ ಅನ್ನು ಫೋಟೋ ಸೆರೆಹಿಡಿಯುವುದು ಸುಲಭವಾಗಲಿದೆ. ಇದಲ್ಲದೆ EOS R6 ಮಾರ್ಕ್ II ಕ್ಯಾಮೆರಾ ಡಿಜಿಟಲ್ ಟೆಲಿಕಾನ್ವರ್ಟರ್ ಅನ್ನು ಹೊಂದಿದ್ದು, ಗುಂಡಿಯ ಟ್ಯಾಪ್‌ನಲ್ಲಿ ಫೋಕಲ್ ಲೆಂತ್ ಅನ್ನು 2X ಅಥವಾ 4X ಹೆಚ್ಚಿಸಬಹುದಾಗಿದೆ.

ಇದರಲ್ಲಿ 4K 60fps ವೀಡಿಯೊವನ್ನು ದೀರ್ಘಕಾಲದವರೆಗೆ ಮತ್ತು ಅನಿಯಮಿತ 4K 30fps ವೀಡಿಯೊ ರೆಕಾರ್ಡಿಂಗ್ ಅನ್ನು ಶೂಟ್ ಮಾಡಬಹುದಾಗಿದೆ.

ಕ್ಯಾನನ್‌ EOS R6 Mark II ಕ್ಯಾಮೆರಾ ಹಳೆಯ ಮಾದರಿಯಂತೆ ವಿನ್ಯಾಸದಂತಿದ್ದು, ಬಟನ್ ಅನ್ನು ಒಳಗೊಂಡಿದೆ. ಇದು ಇನ್-ಬಾಡಿ 5-ಆಕ್ಸಿಸ್ ಸೆನ್ಸರ್ ಸ್ಟೆಬಿಲೈಸೇಶನ್ ಅನ್ನು ಒಳಗೊಂಡಿದೆ. ಈ ಕ್ಯಾಮೆರಾ 3.69 ಮಿಲಿಯನ್-ಡಾಟ್ ರೆಸಲ್ಯೂಶನ್ ಹೊಂದಿರುವ OLED ಎಲೆಕ್ಟ್ರಾನಿಕ್ ವ್ಯೂಫೈಂಡರ್ ಅನ್ನು ಪಡೆದಿದೆ. ಇದರಲ್ಲಿ ಆಟೋಫೋಕಸ್ ಸಿಸ್ಟಮ್ ಅನ್ನು ಸುಧಾರಿತಗೊಂಡಿದೆ.

ಇದಲ್ಲದೆ ಕ್ಯಾನನ್ ತನ್ನ ಹೊಸ RF135mm f/1.8L IS USM ಪ್ರೈಮ್ ಲೆನ್ಸ್ ಅನ್ನು ಸಹ ಬಿಡುಗಡೆ ಮಾಡಿದ್ದು, ಇದು ಅಂತರ್ಗತ ಆಪ್ಟಿಕಲ್ ಸ್ಟೆಬಿಲೈಸೇಶನ್‌ ಹೊಂದಿದೆ. ಅಲ್ಲದೆ, ಇದು ವೃತ್ತಿಪರ ಗ್ರೇಡ್‌ ಗ್ಲಾಸ್‌ ಅನ್ನು ಹೊಂದಿರುವುದರಿಂದ ನೀರು, ದೂಳು ಮತ್ತು ಸ್ಕ್ರ್ಯಾಚ್‌ಗಳ ವಿರುದ್ದ ಬಳಸಬಹುದಾಗಿದೆ.

Leave A Reply

Your email address will not be published.