ವಾಹನ ಪ್ರಿಯರಿಗೆ ಸಿಹಿ ಸುದ್ದಿ | ರೂ.30,000 ನೀಡಿದರೆ ನಿಮ್ಮ ಎಲೆಕ್ಟ್ರಿಕ್ ಆಗುತ್ತೆ ಪೆಟ್ರೋಲ್ ಸ್ಕೂಟರ್ | ಹೇಗೆ ಏನು ಎಂಬ ಅನುಮಾನಗಳಿಗೆ ಇಲ್ಲಿದೆ ಉತ್ತರ!

ಮೊದಲೆಲ್ಲ ಪೆಟ್ರೋಲ್ ವಾಹನಗಳನ್ನೇ ಜನರು ಬಳಕೆ ಮಾಡುತ್ತಿದ್ದರು. ನಂತರ ಇದೀಗ ಎಲೆಕ್ಟ್ರಿಕ್ ವಾಹನಗಳು ಲಗ್ಗೆ ಇಟ್ಟವು. ಇನ್ನೂ ಹೊಸದಾದ ವಿಷಯ ಏನಂದ್ರೆ 30,000 ಕೊಟ್ಟರೆ ಎಲೆಕ್ಟ್ರಿಕ್‌ ವಾಹನ ಕೂಡ ಪೆಟ್ರೋಲ್‌ ವಾಹನವಾಗುತ್ತದೆ.

 

ಇಂದು ಮತ್ತೆ ಮುಂದಿನ ದಿನಗಳಲ್ಲೂ ಎಲೆಕ್ಟ್ರಿಕ್ ವಾಹನಗಳದ್ದೇ ರಾಯಭಾರಿ ಎಂದು ಎಲ್ಲರಿಗೂ ತಿಳಿದಿರುವುದೆ. ಆದರೆ, ಎಲೆಕ್ಟ್ರಿಕ್‌ ವಾಹನಗಳನ್ನು ಕೊಳ್ಳುವುದು ಸ್ವಲ್ಪ ದುಬಾರಿ. ಹಾಗಾಗಿ ಹೊಸ ವಾಹನಗಳನ್ನು ಕೊಳ್ಳುವ ಬದಲು ಮನೆಯಲ್ಲೇ ಇರುವ ದ್ವಿಚಕ್ರ ವಾಹನಕ್ಕೆ ಬ್ಯಾಟರಿ ಅಳವಡಿಸಿ ಹೈಬ್ರೀಡ್‌ ಬೈಕ್‌ ಆಗಿ ಪರಿವರ್ತಿಸಬಹುದು. ಇನ್ನು ಇದು ಹೇಗೆ ಸಾಧ್ಯ ಎಂದು ನೋಡೋಣ.

ಬೆಂಗಳೂರು ನಗರದ ಮಾಗಡಿ ರಸ್ತೆಯ ಸೀಗೆಹಳ್ಳಿ ಬಳಿ ಇರುವ ‘ಮೆಲ್ದಾತ್‌ ಆಡೋ ಕಾಂಪೋನೆಂಟ್‌’ ಅಥವಾ ‘ಈಜಿ ಹೈಬ್ರಿಡ್‌’ ಎಂಬ ಕಂಪನಿಯು ಪ್ರಸ್ತುತ ಪೆಟ್ರೋಲ್‌ ಚಾಲಿತ ಬೈಕುಗಳಿಗೆ ವಿದ್ಯುತ್‌ ಬ್ಯಾಟರಿ ಅಳವಡಿಸಿ ಹೈಬ್ರಿಡ್‌ ಬೈಕ್‌ ಆಗಿ ಪರಿವರ್ತಿಸಿ ಕೊಡುತ್ತಿದೆ. ಇದರಿಂದ ಆ ಬೈಕ್‌ ನ್ನು ಒಂದು ಬಟನ್‌ ಮೂಲಕ, ಬ್ಯಾಟರಿ ಮೂಲಕ ಅಥವಾ ಪೆಟ್ರೋಲ್‌ ಮೂಲಕವಾದರೂ ಚಲಾಯಿಸಬಹುದು. ಈ ಸಂಸ್ಥೆ ಇದೀಗ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹುಡಿಕೆದಾರರ ಸಮಾವೇಶದಲ್ಲಿ ಮಳಿಗೆ ತೆರೆದಿದೆ.

ಇನ್ನೂ ಈ ಸಂಸ್ಥೆಯು 30 ಸಾವಿರ ರೂ.ಗಳಿಗೆ ಅತಿ ಸುಲಭವಾಗಿ ಬ್ಯಾಟರಿ ಅಳವಡಿಸಿಕೊಡಲಿದೆ. ಆಕ್ವಿವ್‌ ಹೋಂಡಾ, ಸ್ಕೂಟಿ ಒಳಗೊಂಡಂತೆ ಮೊಪೆಡ್‌ ಮಾದರಿ ಸ್ಕೂಟರ್‌ಗಳಿಗೆ ಬ್ಯಾಟರಿ ಅಳವಡಿಸುತ್ತಿದ್ದೇವೆ. ಹಾಗೂ ಇತರೆ ಬೈಕ್ ಗಳಿಗೂ ಬ್ಯಾಟರಿ ಅಳವಡಿಸುವ ಯೋಜನೆ ಸಿದ್ಧವಾಗುತ್ತಿದೆ ಎಂದು ಸಂಸ್ಥೆಯ ಸಿಬ್ಬಂದಿ ಹೇಳಿದ್ದಾರೆ.

Leave A Reply

Your email address will not be published.