3 ಅಡಿ ಎತ್ತರದ ವಧುವನ್ನು ಕೊನೆಗೂ ವರಿಸಿದ 2.5 ಅಡಿ ಎತ್ತರದ ವ್ಯಕ್ತಿ!!!

Share the Article

ಮದುವೆ ಎಂಬ ವೈವಾಹಿಕ ಜೀವನಕ್ಕೆ ಮುನ್ನುಡಿ ಬರೆಯುವ ಜೋಡಿಗಳು ನೂರಾರು ಕನಸು ಕಾಣುವುದು ಸಹಜ ಕಂಡ ಕನಸೆಲ್ಲ ನನಸಾಗುವುದು ವಿರಳ. ಮದುವೆಯೆಂಬ ಬೆಸುಗೆಗೆ ಕಂಕಣ ಭಾಗ್ಯ ಕೂಡಿ ಬರಬೇಕು ಎಂಬ ಮಾತಿದೆ. ತನಗೆ ಅನುರೂಪವಾದ ಗುಣ,ನಡತೆ ಹಾಗೂ ತನ್ನ ಅಭಿರುಚಿಗೆ ತಕ್ಕಂತೆ ಸೂಕ್ತ ಸಂಗಾತಿಯ ಅನ್ವೇಷಣೆ ಮಾಡುವುದು ಸಾಮಾನ್ಯ.

ಹೀಗೆ ಸೂಕ್ತ ಸಂಗಾತಿ ಸಿಗದೇ ಪೊಲೀಸರ, ಉತ್ತರ ಪ್ರದೇಶದ ಯೋಗಿ ಕೊನೆಗೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಲ್ಲಿಯೂ ಕೂಡ ಮನವಿ ಮಾಡಿಕೊಂಡ ಛೋಟಾ ಮ್ಯಾನ್ ಅಜೀಮ್ ಮನ್ಸೂರಿ ಬಗ್ಗೆ ನೀವು ಕೇಳಿರಬಹುದು. ಕೊನೆಗೂ ಅವರಿಗೆ ತಕ್ಕ ವಧು ದೊರೆತಿದ್ದು, ಉತ್ತರ ಪ್ರದೇಶದ 2.5 ಅಡಿ ಎತ್ತರದ ಅಜೀಮ್ ಮನ್ಸೂರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಹಾಪುರ್‌ನ 3 ಅಡಿ ಎತ್ತರದ ಬುಶ್ರಾಳನ್ನು ಅಜೀಮ್ ಮದುವೆಯಾಗಿ ಸತಿ ಪತಿ ಗಳಾಗಿದ್ದಾರೆ .

ಬಹಳ ದಿನಗಳಿಂದ ಅಜೀಮ್ ವೈವಾಹಿಕ ಸಂಬಂಧಕ್ಕಾಗಿ ವಧು ಅನ್ವೇಷಣೆ ನಡೆಸಿದರು ಕೂಡ ವಧು ಸಿಕ್ಕಿರಲಿಲ್ಲ. ಇದೀಗ ಆತ ಅಂದುಕೊಂಡಂತೆಯೇ ವಿವಾಹ ಕಾರ್ಯಕ್ರಮ ನೆರವೇರಿದೆ.

2019 ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಜೀವನ ಸಂಗಾತಿಯನ್ನು ಹುಡುಕುವಂತೆ ಅಜೀಮ್ ಮನವಿ ಮಾಡಿ ಬೇಕಾಬಿಟ್ಟಿ ಪ್ರಚಾರ ಪಡೆದುಕೊಂಡಿದ್ದರು. ಇದಾದ ಬಳಿಕ ಹುಡುಗಿ ಸಿಕ್ಕ ಮೇಲೆ ತನ್ನ ಮದುವೆಗೆ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿಗೆ ಆಹ್ವಾನ ನೀಡುವುದಾಗಿ ಹೇಳಿ ಸುದ್ದಿಯಲ್ಲಿದ್ದರು.

ಹೀಗೆ ಸುದ್ದಿಯಾಗಿದ್ದ ಅಜೀಂ ಕೆಲವೇ ದಿನಗಳಲ್ಲಿ ವಿವಾಹ ಕಾರ್ಯಕ್ರಮ ಬುಧವಾರ ನಡೆದಿದ್ದು, ಅಂತೂ ಇಂತೂ ಕಂಡ ಕನಸು ನನಸಾಗಿದ್ದು, ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ

Leave A Reply