ಮಾನವೀಯತೆಯೇ ಮರೆತರಾ ಪೊಲೀಸರು | ಆಸ್ಪತ್ರೆಗೆ ಹೋಗುತ್ತಿದ್ದ ದಂಪತಿ ದುಡ್ಡಿಲ್ಲವೆಂದರೂ ಕೇಳದೆ ಹಣ ಪೀಕಿಸಿದ ಪೊಲೀಸಪ್ಪ |

ಜನರು ವಾಹನ ಚಲಾಯಿಸುವಾಗ ನಿಯಮಗಳನ್ನು ಉಲ್ಲಂಘಿಸಿದರೆ ಟ್ರಾಫಿಕ್ ಪೊಲೀಸರು ಫೈನ್ ಹಾಕುವುದು ಎಲ್ಲಾ ಕಡೆ ಇರುವಂತದ್ದೆ. ಆದರೆ ಇಲ್ಲಿ ನಡೆದಿರುವ ಘಟನೆ ಸ್ವಲ್ಪ ವಿಭಿನ್ನವಾಗಿದೆ. ಮಗುವಿಗೆ ಹುಷಾರಿಲ್ಲ ಎಂದರೂ ಮಾನವೀಯತೆ ಇಲ್ಲದವರ ಹಾಗೆ ಪೋಲಿಸರು ವರ್ತಿಸಿದ್ದಾರೆ.

ಮಂಡ್ಯ ನಗರದ ಮಹಾವೀರ ವೃತ್ತದ ಬಳಿ ಕೆಆರ್ ಪೇಟೆಯಿಂದ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಪೋಷಕರು ಬೈಕ್‍ನಲ್ಲಿ ತಮ್ಮ ಮಗುವನ್ನು ಕರೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ. ಬೈಕ್‍ನ್ನು ಪೊಲೀಸರು ಅಡ್ಡಗಟ್ಟಿ ಹೆಲ್ಮೆಟ್ ಎಲ್ಲಿ ಎಂದು ಕೇಳಿದ್ದಾರೆ. ಆಗ ಮಗುವಿನ ತಂದೆ, ಸರ್ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾ ಇದ್ದೀವಿ, ಮಗುವಿಗೆ ಹುಷಾರಿಲ್ಲ ಸರ್, ನಮ್ಮನ್ನು ಬಿಟ್ಟು ಬಿಡಿ ಸಾರ್ ಎಂದಿದ್ದಾರೆ. ಈ ವೇಳೆ ಪೊಲೀಸರು, ಹೆಲ್ಮೆಟ್ ಇಲ್ಲ ಹಾಗಾಗಿ ಮೊದಲು ಫೈನ್ ಕಟ್ಟು ಎಂದು ಬೈಕ್ ಕೀಯನ್ನು ಕಿತ್ತುಕೊಂಡಿದ್ದಾರೆ. ನಂತರ ಆತ ಸರ್ ನಿಜವಾಗಲೂ ನನ್ನ ಬಳಿ ಒಂದು ಪೈಸೆ ಕೂಡ ಇಲ್ಲ ಸರ್ ಆಸ್ಪತ್ರೆಗೆ ಹೋಗಲು ಬಿಡಿ ಸಾರ್ ಎಂದು ಮತ್ತೆ ಮತ್ತೆ ಕೇಳಿಕೊಂಡಿದ್ದಾರೆ.

ಇಷ್ಟಾದ್ರು ಸಹ ಕರುಣೆ ತೋರದೆ ಮಾನವೀಯತೆ ಮರೆತಿರುವಂತೆ ಪೊಲೀಸರು ಬೈಕ್‍ನ ಕೀ ಕೊಟ್ಟಿಲ್ಲ. ಇತ್ತ ಪತ್ನಿ ಮಗುವನ್ನು ಎತ್ತಿಕೊಂಡು ಫುಟ್‍ಪಾತ್‍ನಲ್ಲಿ ಕೂತಿದ್ರು. ನಂತರ ಸ್ನೇಹಿತರಿಗೆ ಫೋನ್ ಮಾಡಿ ವಿಷಯ ತಿಳಿಸಿ, ಗೂಗಲ್ ಪೇ ಮಾಡಿಸಿಕೊಂಡು ಎಟಿಎಂನಲ್ಲಿ ಹಣ ಡ್ರಾ ಮಾಡಿ ಫೈನ್ ಕಟ್ಟಿದ ಬಳಿಕ ಪೊಲೀಸರು ಬೈಕ್ ಕೀ ಕೊಟ್ಟರು.

ಇದನ್ನು ನೋಡಿದರೆ ಇವರನ್ನು ಮಾನವೀಯತೆ ಇಲ್ಲದ ಪೋಲಿಸರು ಎನ್ನಬಹುದು. ಇನ್ನು ಮಗುವಿನ ಪರಿಸ್ಥಿತಿಯನ್ನೂ ನೋಡಲಿಲ್ಲ. ಆತ ಅಷ್ಟು ಕೇಳಿಕೊಂಡರೂ ಬಿಡದೆ ಕೊನೆಗೂ ಫೈನ್ ಕಟ್ಟಿಸಿಕೊಂಡೇಬಿಟ್ಟರು. ಕೊನೆಗೆ ಸ್ನೇಹಿತರು ಸಹಾಯ ಮಾಡಿರುವುದರಿಂದ ಆತ ಆಸ್ಪತ್ರೆಗೆ ಹೋಗುವಂತಾಯಿತು.

Leave A Reply

Your email address will not be published.