Elon Musk : ಟ್ವಿಟ್ಟರ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದ ಎಲಾನ್ ಮಸ್ಕ್!!!
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರು ಸುಮಾರು 3.5 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿ ಟ್ವಿಟರ್ ಖರೀದಿಸಿದ್ದಾರೆ. ಮಸ್ಕ್ ಟ್ವಿಟರ್ ಖಾತೆಗೆ ಬ್ಲೂ ಟಿಕ್ ನೀಡುವುದಕ್ಕೆ ಭಾರಿ ಶುಲ್ಕ ವಿಧಿಸಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿ ಪ್ರಕಾರ ತಿಳಿಸಿತ್ತು.
ಈಗಾಗಲೇ ಟ್ವೀಟ್‌ಗಳನ್ನು ಎಡಿಟ್ ಮಾಡಲು ಅನುಮತಿಸುವ ಬಹುನಿರೀಕ್ಷಿತ ‘ಎಡಿಟ್ ಟ್ವೀಟ್’ ವೈಶಿಷ್ಟ್ಯವನ್ನು ಕಳೆದ ತಿಂಗಳಷ್ಟೇ ‘ಟ್ವಿಟರ್ ಬ್ಲೂ’ ಚಂದಾದಾರಿಕೆ ಪಡೆದ ಗ್ರಾಹಕರಿಗೆ ಸಹ ಪರಿಚಯಿಸಲಾಗಿತ್ತು. ಟ್ವಿಟ್ಟರ್ ಸಂಸ್ಥೆಯ ಈ ಹಿಂದಿನ ಆಡಳಿತ ಮಂಡಳಿಯು ಕೇವಲ ಪ್ರೀಮಿಯಂ ಬಳಕೆದಾರರಿಗೆ ಮಾತ್ರ ವೈಶಿಷ್ಟ್ಯವನ್ನು ಬಿಡುಗಡೆಗೊಳಿಸಿತ್ತು.
ಎಲಾನ್ ಮಸ್ಕ್ ಅವರು ಬ್ಲೂ ಟಿಕ್‌ಗಾಗಿ ತಿಂಗಳಿಗೆ 8 (ಅಂದಾಜು 661 ರೂ.) ಪಾವತಿಸಬೇಕಾಗುತ್ತದೆ ಎಂದು ಮಂಗಳವಾರ ಘೋಷಿಸಿದ್ದಾರೆ. ಟ್ವಿಟರ್‌ನ ಪ್ರಸ್ತುತ ಬ್ಲೂ ಟಿಕ್ ವ್ಯವಸ್ಥೆಯು ಬ್ಲೂ ಟಿಕ್ ಹೊಂದಿರುವವರಿಗೆ ಮತ್ತು ಹೊಂದಿಲ್ಲದವರಿಗೂ ಉತ್ತಮವಾಗಿಲ್ಲ. ಇದೀಗ ಜನರಿಗೆ ಅಧಿಕಾರ ನೀಡಲಾಗಿದೆ. ಈಗ ಪ್ರತಿ ತಿಂಗಳು 8 ಡಾಲರ್ ಪಾವತಿಸಿ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆಯನ್ನು ಪಡೆದುಕೊಳ್ಳಿ ಎಂದು ಎಲಾನ್ ಮಸ್ಕ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇಷ್ಟೇ ಅಲ್ಲದೇ, ಖರೀದಿ ಸಾಮರ್ಥ್ಯದ ಅನುಗುಣವಾಗಿ ಆಯಾ ದೇಶದಲ್ಲಿ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆಯ ಬೆಲೆಯನ್ನು ಸರಿಹೊಂದಿಸಲಾಗುತ್ತದೆ ಎಂದು ಮಸ್ಕ್ ಅವರು ಹೇಳಿದ್ದಾರೆ.
‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆ ಹೊಂದಿಲ್ಲದ ಬಳಕೆದಾರರಿಗೂ ‘ಎಡಿಟ್ ಬಟನ್’ ವೈಶಿಷ್ಟ್ಯವನ್ನು ಪರಿಚಯಿಸಲು ಎಲಾನ್ ಮಸ್ಕ್ ಅವರು ಮುಂದಾಗಿದ್ದಾರೆ ಎಂದು ವರದಿಯಾಗಿದೆ
ಹೌದು ಟ್ವಿಟ್ಟರ್ ಸಂಸ್ಥೆಯ ಹೊಸ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿರುವ ಎಲಾನ್ ಮಸ್ಕ್ ಅವರು ನೆನ್ನೆಯಷ್ಟೇ ಟ್ವಿಟರ್ ಬ್ಲೂ ಚಂದಾದಾರಿಕೆ ಸೇವೆಯ ಬೆಲೆಯನ್ನು ಪ್ರಕಟಿಸಿದ್ದಾರೆ .
ಟ್ವಿಟರ್ ಬ್ಲೂ ಚಂದಾದಾರಿಕೆ ಸೇವೆಗಾಗಿ ಪ್ರತಿ ತಿಂಗಳು $8 ಡಾಲರ್ (ಸುಮಾರು ರೂ. 660) ಶುಲ್ಕ ವಿಧಿಸುವುದಾಗಿ ಹೇಳಿ ಎಲಾನ್ ಮಸ್ಕ್ ಶಾಕ್ ನೀಡಿದ್ದರು. ಇದೀಗ ‘ಟ್ವಿಟ್ಟರ್ ಬ್ಲೂ’ ಚಂದಾದಾರಿಕೆ ಹೊಂದಿಲ್ಲದ ಟ್ವಿಟ್ಟರ್ ಬಳಕೆದಾರರಿಗೆ ಸಹ ‘ಎಡಿಟ್ ಬಟನ್’ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಅದಲ್ಲದೆ ಟ್ವೀಟ್‌ಗಳನ್ನು ಎಡಿಟ್ ಮಾಡಲು ಅನುಮತಿಸುವ ಬಹುನಿರೀಕ್ಷಿತ ‘ಎಡಿಟ್ ಟ್ವೀಟ್’ ವೈಶಿಷ್ಟ್ಯವನ್ನು ಕಳೆದ ತಿಂಗಳಷ್ಟೇ ‘ಟ್ವಿಟರ್ ಬ್ಲೂ’ ಚಂದಾದಾರಿಕೆ ಪಡೆದ ಗ್ರಾಹಕರಿಗಾಗಿ ಪರಿಚಯಿಸಲಾಗಿತ್ತು. ಆದರೆ, ಇದೊಂದು ಮೂಲಭೂತವಾಗಿ ಒದಗಿಸಬೇಕಿರುವ ವೈಶಿಷ್ಟ್ಯ ಎಂಬುದು ಎಲಾನ್ ಮಸ್ಕ್ ಅವರ ಯೋಚನೆಯಂತೆ. ಇದರಿಂದ ಎಲ್ಲಾ ಬಳಕೆದಾರರಿಗೆ ‘ಎಡಿಟ್ ಬಟನ್’ ವೈಶಿಷ್ಟ್ಯವನ್ನು ಸಂಪೂರ್ಣ ಉಚಿತವಾಗಿ ಒದಗಿಸಲು ಮುಂದಾಗಿದ್ದಾರೆ ಎಂದು ವರದಿ ಮೂಲಕ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಟ್ವಿಟ್ಟರ್ ಬಿಡುಗಡೆಗೊಳಿಸಿರುವ ಹೊಸ ‘ಎಡಿಟ್ ಬಟನ್’ ಟೂಲ್ ವೈಶಿಷ್ಟ್ಯವು ಟ್ವೀಟ್ ಮಾಡಿದ ನಂತರ 30 ನಿಮಿಷಗಳಲ್ಲಿ ಐದು ಬಾರಿ ಟ್ವೀಟ್ ಅನ್ನು ಎಡಿಟ್ ಮಾಡಲು ಅನುಮತಿಸುತ್ತದೆ. ಈ ವೈಶಿಷ್ಟ್ಯವು ನಿರ್ಧಿಷ್ಟ ಟ್ವೀಟ್ ಅನ್ನು ಎಡಿಟ್ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಸೂಚಕವನ್ನು ಸಹ ಹೊಂದಿದ್ದು, ಟ್ವಿಟ್ಟರ್ ಬಳಕೆದಾರರು ಎಡಿಟ್ ಮಾಡಿರುವ ಟ್ವೀಟ್ ಇತಿಹಾಸ ಮತ್ತು ಬದಲಾವಣೆಗೂ ಮೊದಲು ಇದ್ದ ಮೂಲ ಟ್ವೀಟ್ ಸಹ ನೋಡಲು ಅವಕಾಶವಿದೆ.
ಬ್ಲೂ ಟಿಕ್ ಸೇವೆ ಇದೀಗ ಕೇವಲ ಯುಎಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಂತಹ ಆಯ್ದ ದೇಶಗಳಲ್ಲಿ ಮಾತ್ರ ಲಭ್ಯವಿದೆ. ಇನ್ನು ಎಲ್ಲಾ ದೇಶಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.