Reliance Jio : ಜಿಯೋ ಪೋಸ್ಟ್ ಪೇಡ್ ಬಳಕೆದಾರರಿಗೆ ಮೋಸ | ಗ್ರಾಹಕರಿಂದ ಭಾರೀ ಆಕ್ರೋಶ!
ಜಿಯೋ ಚಂದಾದಾರರು ಇಲ್ಲಿ ಸ್ವಲ್ಪ ಗಮನಿಸಿ. ನೀವು ನಿಮ್ಮ ಆಯ್ಕೆಯಾದ ಜಿಯೋ ಸಿಮ್ ನಲ್ಲಿ ಏನೆಲ್ಲಾ ವ್ಯತ್ಯಾಸ ಆಗುತ್ತಿವೆ ಎಂದು ತಿಳಿದುಕೊಳ್ಳಲೇ ಬೇಕು. ಪ್ರಸ್ತುತ ಏಕಾಏಕಿ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನಿಲ್ಲಿಸುವ ಮೂಲಕ ಬಿಗ್ ಶಾಕ್ ಜಿಯೋ ನೀಡಿದೆ. ವಿಶ್ವಕಪ್ ಟಿ20 ಕ್ರಿಕೆಟ್ ನಡೆಯುತ್ತಿರುವ ಈ ವೇಳೆಗೆ ಏಕಾಏಕಿ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನಿಲ್ಲಿಸಲಾಗಿದ್ದು ಮತ್ತು ಹೊಸ ಡೇಟಾ ಪ್ಯಾಕ್ ನ ಸವಿವರಗಳನ್ನು ಈ ಕೆಳಗೆ ತಿಳಿಸಲಾಗಿದೆ.
ಜಿಯೋವಿನ ಆರಂಭಿಕ ಪೋಸ್ಟ್‌ಪೇಡ್ ಯೋಜನೆಯಲ್ಲಿ ಪ್ರತಿ ತಿಂಗಳಿಗೆ ಒಟ್ಟು 75GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿದಿನ 100 SMS ಗಳನ್ನು ಜಿಯೋ ಒದಗಿಸುತ್ತಿದೆ. 75GB ಡೇಟಾ ಬಳಕೆಯ ನಂತರ ಬಳಕೆದಾರರು ಪ್ರತಿ 1 ಜಿಬಿ ಡೇಟಾಗೆ 10 ರೂ. ಪಾವತಿಸಬೇಕಾಗುತ್ತದೆ. ಆದರೆ, ದೇಶದ ನಂ.1 ಟೆಲಿಕಾಂ ಕಂಪೆನಿ ರಿಲಯನ್ಸ್ ಜಿಯೋ ಅತ್ಯಂತ ಕಡಿಮೆ ಬೆಲೆಗಳಲ್ಲಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಒಳಗೊಂಡ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಒದಗಿಸುವ ಮೂಲಕ ಹೆಚ್ಚು ಜನರನ್ನು ಆಕರ್ಷಿಸಿತ್ತು. ಆದರೆ, ಇದೀಗ ಏಕಾಏಕಿ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನಿಲ್ಲಿಸುವ ಮೂಲಕ ಬಿಗ್ ಶಾಕ್ ನೀಡಿದೆ. ವಿಶ್ವಕಪ್ ಟಿ20 ಕ್ರಿಕೆಟ್ ನಡೆಯುತ್ತಿರುವ ಈ ವೇಳೆಗೆ ಏಕಾಏಕಿ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನಿಲ್ಲಿಸಲಾಗಿದ್ದು, ಕ್ರಿಕೆಟ್ ಲೈವ್ ಮ್ಯಾಚ್ ವೀಕ್ಷಿಸುವ ಸಲುವಾಗಿಯೇ ಜಿಯೋ ಪೋಸ್ಟ್‌ಪೇಡ್ ಗ್ರಾಹಕ ಚಂದಾದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಕಳೆದುಕೊಂಡಿರುವ ಜಿಯೋವಿನ ಪ್ರಮುಖ ಪೋಸ್ಟ್‌ಪೇಯ್ಡ್ ಯೋಜನೆಗಳ ಮಾಹಿತಿ ಈ ಕೆಳಗಿನಂತಿದೆ.
ಜಿಯೋ ಒದಗಿಸುತ್ತಿರುವ ಎರಡನೇ ಪೋಸ್ಟ್‌ಪೇಯ್ಡ್ ಯೋಜನೆಯು 599 ರೂಪಾಯಿಗಳಿಗೆ ಲಭ್ಯವಿದೆ. ಈ 599 ರೂ. ಯೋಜನೆಯಲ್ಲಿ ಬಳಕೆದಾರರು 200GB ರೋಲ್‌ಓವರ್ ಡೇಟಾದೊಂದಿಗೆ ತಿಂಗಳಿಗೆ ಒಟ್ಟು 100GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು 100 SMS ಗಳನ್ನು ಪಡೆಯುತ್ತಾರೆ. 100GB ಡೇಟಾ ಬಳಕೆಯ ನಂತರ, ಬಳಕೆದಾರರಿಗೆ ಪ್ರತಿ 1 ಜಿಬಿ ಡೇಟಾಗೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಈ ಯೋಜನೆಯು ಒಂದು ಹೆಚ್ಚುವರಿ ಸಿಮ್ ಕಾರ್ಡ್ ಅನ್ನು ಒದಗಿಸುತ್ತಿರುವುದು ಪ್ರಮುಖ ವಿಶೇಷತೆ ಎಂದು ಹೇಳಬಹುದು. ಈ ಯೋಜನೆಯು ಸಹ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆಗಳನ್ನು ನೀಡುತ್ತದೆ.
ಜಿಯೋವಿನ ಮೂರನೇ ಹಾಗೂ ಅತ್ಯಂತ ಸಮಂಜಸವಾದ ಯೋಜನೆಯು 799 ರೂ.ಗಳಲ್ಲಿ ಲಭ್ಯವಿದೆ. ಈ 799 ರೂ.ಯೋಜನೆಯು 200GB ಡೇಟಾ ರೋಲ್‌ಓವರ್ ಅನ್ನು ಅನುಮತಿಸುವ ಒಟ್ಟು 150GB ಡೇಟಾವನ್ನು ನೀಡುತ್ತದೆ. 150GB ಡೇಟಾ ಪೂರ್ಣಗೊಂಡ ನಂತರ ಬಳಕೆದಾರರಿಗೆ ಪ್ರತಿ 1 ಜಿಬಿ ಡೇಟಾಗೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 SMS ಗಳನ್ನು ನೀಡುವ ಈ ಯೋಜನೆಯೊಂದಿಗೆ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ಗ್ರಾಹಕರು ಪಡೆಯುತ್ತಾರೆ. ಈ ಯೋಜನೆಯು ಸಹ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆಗಳನ್ನು ನೀಡುತ್ತದೆ.
ಜಿಯೋವಿನ ನಾಲ್ಕನೇ ಹಾಗೂ ಕುಟುಂಬ ಯೋಜನೆಯು 999 ರೂ.ಗಳಲ್ಲಿ ಲಭ್ಯವಿದೆ. ಈ 999 ರೂ.ಯೋಜನೆಯು 500GB ಡೇಟಾ ರೋಲ್‌ಓವರ್ ಅನ್ನು ಅನುಮತಿಸುವ ಒಟ್ಟು 200GB ಡೇಟಾವನ್ನು ನೀಡುತ್ತದೆ. 200GB ಡೇಟಾ ಪೂರ್ಣಗೊಂಡ ನಂತರ ಬಳಕೆದಾರರಿಗೆ ಪ್ರತಿ 1 ಜಿಬಿ ಡೇಟಾಗೆ 10 ರೂ. ಶುಲ್ಕ ವಿಧಿಸಲಾಗುತ್ತದೆ. ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 SMS ಗಳನ್ನು ನೀಡುವ ಈ ಯೋಜನೆಯೊಂದಿಗೆ ಮೂರು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ಗ್ರಾಹಕರು ಪಡೆಯುತ್ತಾರೆ. ಈ ಯೋಜನೆಯು ಸಹ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆಗಳನ್ನು ನೀಡುತ್ತದೆ.