Safety Measure : ಸುರಕ್ಷತಾ ಕಾರಣದಿಂದ 3 ಹ್ಯಾಚ್ ಬ್ಯಾಕ್ ಹಿಂಪಡೆಯಲು ಸಜ್ಜಾದ ಮಾರುತಿ!!!

ಮಾರುತಿ ಸುಜುಕಿ ಸುರಕ್ಷತಾ ಕಾರಣದಿಂದ ತನ್ನ 3 ಹ್ಯಾಚ್ ಬ್ಯಾಕ್ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿರುವ ವ್ಯಾಗನ್ಆರ್ , ಸೆಲೆರಿಯೊ ಮತ್ತು ಇಗ್ನಿಸ್ ಬ್ರೇಕ್ ಅಸೆಂಬ್ಲಿ ಪಿನ್ನಲ್ಲಿರುವ ದೋಷದಿಂದಾಗಿ ಸುಮಾರು 9925 ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಯಾಕೆಂದರೆ ಈ ಕಾರುಗಳ ಹಿಂದಿನ ಬ್ರೇಕ್ ಗಳಲ್ಲಿನ ದೋಷವನ್ನು ಸರಿಪಡಿಸಲು ತಯಾರಕರು ಈ ಕಾರುಗಳನ್ನು ಹಿಂಪಡೆಯುತ್ತಿದ್ದಾರೆ.

 

ಮಾರುತಿ ಸುಜುಕಿ ಈ ಮೂರು ಕಾರುಗಳ ದೋಷಯುಕ್ತ ಬ್ರೇಕ್ ಗಳ ಮಾಲೀಕರಿಗೆ ಕರೆ ಮಾಡಿ ಹತ್ತಿರದ ಶೋರೂಮ್‌ಗೆ ಭೇಟಿ ನೀಡುವಂತೆ ಮಾಹಿತಿ ನೀಡುತ್ತದೆ. ಇನ್ನೂ ವ್ಯಾಗನ್ಆರ್, ಇಗ್ನಿಸ್ ಮತ್ತು ಸೆಲೆರಿಯೊ ಮಾದರಿಗಳನ್ನು ಖರೀದಿಸುವವರಿಗೆ ಮಾರುತಿ ಸುಜುಕಿ, ಈ ಕಾರುಗಳ ಹಿಂದಿನ ಬ್ರೇಕ್ ಅಸೆಂಬ್ಲಿ ಪಿನ್ ದೋಷಯುಕ್ತವಾಗಿದೆ , ಬೇಕಾದಲ್ಲಿ ಅದನ್ನು ಯಾವುದೇ ಶುಲ್ಕವಿಲ್ಲದೆ ಸರಿಪಡಿಸಬಹುದು ಎಂದಿದೆ.

ಹಿಂಬದಿಯ ಬ್ರೇಕ್ ಕ್ರ್ಯಾಕ್ ಆದಾಗ, ಬ್ರೇಕ್ ಹಾಕುವಾಗ ಅದು ಕರ್ಕಶ ಧ್ವನಿ ಹೊರಡಿಸುತ್ತದೆ. ಇದನ್ನು ದುರಸ್ತಿ ಮಾಡದೆ ಹೆಚ್ಚು ಕಾಲ ಚಾಲನೆ ಮಾಡುವುದು ಬ್ರೇಕ್ ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಪನಿ ಹೇಳಿದೆ. ಇದರಿಂದ ಈ ಮೂರು ಮಾದರಿಯ ಕಾರುಗಳ ಮಾಲೀಕರು ಹತ್ತಿರದ ಸರ್ವಿಸ್ ಸೆಂಟರ್ ಅಥವಾ ವರ್ಕ್‌ಶಾಪ್‌ಗೆ ಹೋಗುವಂತೆ ಕಂಪನಿ ಸಲಹೆ ನೀಡಿದೆ.

ಮಾರುತಿ ಸುಜುಕಿ ವ್ಯಾಗನ್ಆರ್ ಭಾರತದ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಪ್ರಾಬಲ್ಯವಿದ್ದು, ಅತಿ ಹೆಚ್ಚು ಮಾರಾಟವನ್ನು ಹೊಂದಿದೆ. ಇನ್ನೂ ಈ ಮಾರುತಿ ಸುಜುಕಿ ವ್ಯಾಗನ್ಆರ್ ಬೆಲೆ 5.47 ಲಕ್ಷ ರೂ.ಗಳಿಂದ 7.20 ಲಕ್ಷಗಳವರೆಗೆ ಇರುತ್ತದೆ. ಸೆಲೆರಿಯೊ ಮಾರುತಿ ಸುಜುಕಿಯ ಅತ್ಯಧಿಕ ಮೈಲೇಜ್ ಕಾರು. ಇದರ ಸಿಎನ್‌ಜಿ ವೇರಿಯಂಟ್ಗಳು ಒಂದು ಕೆಜಿ CNG ಯಲ್ಲಿ ಸುಮಾರು 36 ಕಿಲೋಮೀಟರ್ ವರೆಗೆ ಚಲಿಸುತ್ತದೆ. ಮಾರುತಿ ಸುಜುಕಿ ಸೆಲೆರಿಯೊ ಬೆಲೆ 5.25 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗಳವರೆಗೆ ಇದೆ. ವ್ಯಾಗನ್ಆರ್ ಮತ್ತು ಸೆಲೆರಿಯೊ ಪೆಟ್ರೋಲ್ ಮತ್ತು CNG ಆಯ್ಕೆಯಲ್ಲಿ ಲಭ್ಯವಿದೆ. ಮಾರುತಿ ಸುಜುಕಿಯ ಪ್ರೀಮಿಯಂ ನೆಕ್ಸಾಡೀಲರ್ಶಿಪ್ನಲ್ಲಿ ಮಾರಾಟವಾದ ಇಗ್ನಿಸ್ ಹ್ಯಾಚ್‌ಬ್ಯಾಕ್‌ ಬೆಲೆ 5.35 ಲಕ್ಷ ರೂ.ಗಳಿಂದ 7.72 ಲಕ್ಷ ರೂ.ಗಳವರೆಗೆ ಇದೆ.

ಇತ್ತೀಚೆಗೆ ಮಾರುತಿ ಸುಜುಕಿ , ಬಲೆನೊ ಮತ್ತು ಎಕ್ಸ್ಎಲ್6 (XL6) CNG ವೇರಿಯಂಟ್ಗಳನ್ನು ಪರಿಚಯಿಸಿದೆ. ಬಲೆನೊ CNG ಬೆಲೆ 8.28 ಲಕ್ಷ ರೂ. ಮತ್ತು ಎಕ್ಸ್ಎಲ್6 CNG ಬೆಲೆ ರೂ. 12.24 ಲಕ್ಷ ರೂ.ಗಳಾಗಿವೆ. ಬಲೆನೊ S-CNG , 1.2-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು CNG ನಲ್ಲಿ ಚಾಲನೆಯಲ್ಲಿರುವಾಗ 76 BHP ಪವರ್ ಅನ್ನು ಉತ್ಪಾದಿಸುತ್ತದೆ. ಬಲೆನೊ S-CNG 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ ಡೆಲ್ಟಾ ಮತ್ತು ಝೀಟಾ ವೇರಿಯಂಟ್ಗಳಲ್ಲಿ ಸಿಗುತ್ತದೆ. ಕಾರು 7-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಹೆಡ್-ಯೂನಿಟ್ ಜೊತೆಗೆ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ಪ್ಲೇ ಸಂಪರ್ಕ, ಕ್ರೂಸ್ ಕಂಟ್ರೋಲ್ ಮತ್ತು 6 ಏರ್ಬ್ಯಾಗ್ ಗಳನ್ನು ಹೊಂದಿದೆ.

ಇನ್ನೂ XL6 S-CNG 1.5 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸುತ್ತದೆ. ಇದು CNG ನಲ್ಲಿ ಚಾಲನೆಯಲ್ಲಿರುವಾಗ 87 BHP @ 5,500 rpm ಮತ್ತು 121.5 Nm @ 4,200 rpm ಮಾಡುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್‌ನೊಂದಿಗೆ ಜೋಡಿಸಲಾಗಿದೆ ಮತ್ತು 26.32 ಕಿಮೀ/ಕೆಜಿ ಇಂಧನ ದಕ್ಷತೆಯನ್ನು ಹೊಂದಿರುವುದಾಗಿದೆ.

Leave A Reply

Your email address will not be published.