ಮಾಲಿವುಡ್ ಗೆ ಹಾರಿದ ರಾಜ್ ಬಿ ಶೆಟ್ಟಿ !!!

ಚಿತ್ರರಂಗದ ಹವಾ ಇತ್ತೀಚಿಗೆ ಜೋರಾಗಿದೆ. ಹೊಸ ಹೊಸ ಕಥೆಗಳೊಂದಿಗೆ ಹೊಸ ಹೊಸ ನಾಯಕ ನಾಯಕಿಯರು ಚಿತ್ರರಂಗದಲ್ಲಿ ಅದ್ಭುತ ಸಾಧನೆ ಮಾಡುವುದು ಈಗಾಗಲೇ ನಾವು ನೋಡಿರಬಹುದು.

 

ಈಗಾಗಲೇ ಒಂದು ಮೊಟ್ಟೆಯ ಮೂಲಕ ಖ್ಯಾತಿ ಘಳಿಸಿದ ರಾಜ್ ಬಿ ಶೆಟ್ಟಿ ಪ್ರಸ್ತುತ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದಾರೆ. ನಟನೆಯ ಜೊತೆಗೆ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡಿರುವ ರಾಜ್ ಬಿ ಶೆಟ್ಟಿ ಇದೀಗ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ ಎಂದು ಮಾಹಿತಿ ಇದೆ. ರಾಜ್ ಬಿ ಶೆಟ್ಟಿ ಒಬ್ಬ ಉತ್ತಮ ನಟ ಎಂದು ಮತ್ತೊಮ್ಮೆ ಸಾಬೀತು ಪಡಿಸಲು ಇನ್ನೊಂದು ಅವಕಾಶ ದೊರಕಿದೆ.

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ ಚಿತ್ರಕ್ಕೆ ಆಕ್ಷನ್ ಕಟ್ ಜೊತೆಗೆ ನಾಯಕನಾಗಿ ನಟಿಸುತ್ತಿರುವ ರಾಜ್ ಬಿ ಶೆಟ್ಟಿ ಇದೀಗ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಮೂಡಿ ಬರುತ್ತಿರುವುದು ವಿಶೇಷ ಸಂಗತಿ ಆಗಿದೆ. ಮೂಲ ಮಲಯಾಳಂನಲ್ಲಿ ತಯಾರಾದರೂ, ಇತರ ಮೂರು ಭಾಷೆಗಳಿಗೆ ಈ ಚಿತ್ರವನ್ನು ಡಬ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಹೀಗಾಗಿ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಘೋಷಣೆ ಆಗಿದೆ.

ಪ್ರಮುಖವಾಗಿ ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾಗೆ ‘ರುಧಿರಂ’ ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಮೂಲಕ ರಾಜ್ ಬಿ ಶೆಟ್ಟಿ ಅವರು ಮಲಯಾಳಂ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಈ ಸಿನಿಮಾದ ಪೋಸ್ಟರ್ ಇದೀಗ ರಿಲೀಸ್ ಆಗಿದೆ. ಚಿತ್ರವನ್ನು ಜಿಶೋ ಲೋನ್ ಆಂಟನಿ ನಿರ್ದೇಶನ ಮಾಡುತ್ತಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣ ಬಾಲಮುರಳಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

Leave A Reply

Your email address will not be published.