NPS : ಗಮನಿಸಿ : ಸರಕಾರಿ ನೌಕರರ ಮರಣದ ಗ್ರಾಚ್ಯುಟಿಯಲ್ಲಿ ಬದಲಾವಣೆ!!!

ಉಳಿತಾಯ ಮಾಡುವ ಹವ್ಯಾಸ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದ್ದು, ಮುಂದೆ ಎದುರಾಗುವ ಆರ್ಥಿಕ ಮುಗ್ಗಟ್ಟನ್ನು ತಪ್ಪಿಸಲು ನೆರವಾಗುತ್ತದೆ. ಜೊತೆಗೆ ನಿವೃತ್ತಿ ಸಮಯದಲ್ಲಿ ಯಾವುದೇ ಚಿಂತೆಯಿಲ್ಲದೆ ಆರಾಮವಾಗಿ ದಿನಗಳನ್ನು ಕಳೆಯಬಹುದು.

 

ಎನ್‌ಪಿಎಸ್‌ ಯೋಜನೆಯು ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಇದು ಚಂದಾದಾರರಿಗೆ ನಿವೃತ್ತಿಯ ನಂತರದ ಯೋಜಿತ ಉಳಿತಾಯಕ್ಕೆ ನಿರ್ದಿಷ್ಟ ಕೊಡುಗೆಯನ್ನು ನೀಡಲು ಅನುವು ಮಾಡಿಕೊಡುತ್ತದೆ.

ಭಾರತ ಸರ್ಕಾರವು (Indian Government) ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಹಣ ಉಳಿತಾಯ (Money Savings) ಮಾಡುವ ಯೋಜನೆಗಳು ಜನರಿಗೆ ಹೆಚ್ಚು ನೆರವಾಗುತ್ತಿವೆ . ಹೆಣ್ಣು ಮಕ್ಕಳಿಗಾಗಿ (Girl Child) ಗೆ ಸುಕನ್ಯ ಸಮೃದ್ಧಿ ಯೋಜನೆ (Sukanya Samruddhi Scheme) , ವಯಸ್ಸಾದವರಿಗೆ ವೃದ್ಯಾಪ್ಯ ಯೋಜನೆ, ಕೆಲಸದಿಂದ ನಿವೃತ್ತಿ ಪಡೆದವರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಯೋಜನೆಗಳನ್ನು ರೂಪಿಸಲಾಗಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS)NPS ಅನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ. NPS ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆಯು ಭಾರತ ಸರ್ಕಾರದ ನಿವೃತ್ತಿ ಪ್ರಯೋಜನಗಳ ಯೋಜನೆಯಾಗಿದ್ದು ಅದು ಅವರ ನಿವೃತ್ತಿಯ ನಂತರ ಅದರ ಎಲ್ಲಾ ಚಂದಾದಾರರಿಗೆ ನಿಯಮಿತ ಆದಾಯವನ್ನು ಒದಗಿಸುತ್ತದೆ.

ಈ ಯೋಜನೆ ಚಂದಾದಾರರಿಗೆ ನಿವೃತ್ತಿಯ ನಂತರದ ಯೋಜಿತ ಉಳಿತಾಯಕ್ಕೆ ನಿರ್ದಿಷ್ಟ ಕೊಡುಗೆಯನ್ನು ನೀಡಲು ಅನುವು ಮಾಡಿಕೊಡುತ್ತದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನೋಡಲ್ ಏಜೆನ್ಸಿ ಸಂಸ್ಥೆಯು NPS ನ ಅನುಷ್ಠಾನ ಹಾಗೂ ಕಾರ್ಯಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಿಕೊಂಡು ಅದನ್ನು ನಿಯಂತ್ರಿಸುವ ಕಾರ್ಯ ನಿರ್ವಹಿಸುತ್ತದೆ.

ಇತ್ತೀಚೆಗೆ, ಕೇಂದ್ರ ಸರ್ಕಾರವು ಸರ್ಕಾರಿ ನೌಕರನ ಮರಣದ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಅಥವಾ ನಾಮಿನಿಗಳಿಗೆ ಎನ್‌ಪಿಎಸ್ ಪಾವತಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ನೀಡಿದೆ.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು, ಸರ್ಕಾರಿ ನೌಕರನ ಮರಣದ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಅಥವಾ ನಾಮಿನಿಗಳಿಗೆ ಎನ್‌ಪಿಎಸ್ ಪಾವತಿಗೆ ಸಂಬಂಧಿಸಿದ ಕೆಲವು ನಿಬಂಧನೆಗಳನ್ನು ಉಲ್ಲೇಖಿಸಿದೆ. ಅಕ್ಟೋಬರ್ 28 ರ ಕಚೇರಿಯ ಜ್ಞಾಪಕ ಪತ್ರದಲ್ಲಿ, ಸಿಬ್ಬಂದಿಯ ಸಾರ್ವಜನಿಕ ಕುಂದುಕೊರತೆಗಳು ಹಾಗೂ ಪಿಂಚಣಿಗಳ ಸಚಿವಾಲಯದ ಅಡಿಯಲ್ಲಿ ಕೇಂದ್ರ ನಾಗರಿಕ ಸೇವೆಗಳ (NPS ಅನುಷ್ಠಾನ) ನಿಯಮಗಳು, 2021 ರ ನಿಯಮ 20 ರ ನಿಬಂಧನೆಗಳನ್ನು ಹೈಲೈಟ್ ಮಾಡಲಾಗಿದೆ.

NPS ಬಗ್ಗೆ ಜ್ಞಾಪಕ ಪತ್ರದಲ್ಲಿರುವ ಮಾಹಿತಿ ತಿಳಿಯುವುದಾದರೆ, ಎನ್‌ಪಿಎಸ್‌ ಚಂದಾದಾರರ ಮರಣದ ನಂತರ, ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳ ಅಡಿಯಲ್ಲಿ ಕುಟುಂಬಕ್ಕೆ ಪಿಂಚಣಿ ಪ್ರಯೋಜನಗಳನ್ನು ಪಾವತಿಸಿದರೆ, ಚಂದಾದಾರರ ಸಂಚಿತ ಪಿಂಚಣಿ ಕಾರ್ಪಸ್‌ನಲ್ಲಿ ಸರ್ಕಾರದ ಕೊಡುಗೆ ಮತ್ತು ಅದರ ಮೇಲಿನ ಬಡ್ಡಿಯನ್ನು ಸಹ ಸರ್ಕಾರಿ ಖಾತೆಗೆ ವರ್ಗಾಯಿಸಲಾಗುತ್ತದೆ.

ಉಳಿದ ಸಂಚಿತ ಪಿಂಚಣಿ ಕಾರ್ಪಸ್ ಅನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ನಿರ್ಗಮನ ಮತ್ತು ಹಿಂತೆಗೆದುಕೊಳ್ಳುವಿಕೆ) ಕಾಯಿದೆ- 2015 ರ ನಿಯಮಗಳ ಅಡಿಯಲ್ಲಿ ಯಾರ ಪರವಾಗಿ ನಾಮನಿರ್ದೇಶನ ಮಾಡಲಾಗಿದೆಯೋ ಆ ವ್ಯಕ್ತಿಗಳಿಗೆ ಪಿಂಚಣಿ ಹಣವನ್ನು ಪಾವತಿಸಲಾಗುತ್ತದೆ.

ಸೇವಾ ಅವಧಿಯಲ್ಲಿ ಎನ್‌ಪಿಎಸ್ ವ್ಯಾಪ್ತಿಗೆ ಒಳಪಡುವ ಸರ್ಕಾರಿ ನೌಕರರು ಮರಣ ಹೊಂದಿದಲ್ಲಿ ಮತ್ತು ಎನ್‌ಪಿಎಸ್ ಅಡಿಯಲ್ಲಿ ಸಂಚಿತ ಪಿಂಚಣಿ ಕಾರ್ಪಸ್‌ನಿಂದ ಪ್ರಯೋಜನಗಳನ್ನು ಪಡೆದರೆ, ಅಂತಹ ಮರಣ ಹೊಂದಿದ ಸರ್ಕಾರಿ ನೌಕರನ ಕುಟುಂಬದ ಸದಸ್ಯರು ಸಹ ಮರಣ ಗ್ರಾಚ್ಯುಟಿಗೆ ಅರ್ಹರಾಗಿರುತ್ತಾರೆ. ಇಲಾಖೆಯು ಅದರ ದರಗಳನ್ನು ವಿವರಿಸುತ್ತದೆ ಎಂದು ಇಲಾಖೆಯು ಪತ್ರದಲ್ಲಿ ತಿಳಿಸಿದೆ.

ಎನ್‌ಪಿಎಸ್‌ ಚಂದಾದಾರರ ಮರಣದ ನಂತರ ಯಾವುದೇ ನಾಮನಿರ್ದೇಶನವಿಲ್ಲದಿದ್ದರೆ ಅಥವಾ ಮಾಡಿದ ನಾಮನಿರ್ದೇಶನವು ಅಸ್ತಿತ್ವದಲ್ಲಿಲ್ಲದಿದ್ದರೆ, ಚಂದಾದಾರರ ಕಾನೂನುಬದ್ಧ ಉತ್ತರಾಧಿಕಾರಿಗೆ ಮೊತ್ತವನ್ನು ಪಾವತಿಸಲಾಗುತ್ತದೆ ಎಂದು ಹೇಳಲಾಗಿದೆ ಇದರ ಜೊತೆಗೆ ಎನ್‌ಪಿಎಸ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುವ ಆಯ್ಕೆಯನ್ನು ಚಲಾಯಿಸಿದ ಚಂದಾದಾರರ ಮರಣದ ಸಂದರ್ಭದಲ್ಲಿ, ಅಂತಹ ಪ್ರಯೋಜನಗಳನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಕಾಯಿದೆ- 2015 ರ ಪ್ರಕಾರ ನೀಡಲಾಗುತ್ತದೆ.

Leave A Reply

Your email address will not be published.