ಹೊಸಕನ್ನಡ ದೀಪಾವಳಿ ವಿಶೇಷಾಂಕ!! ದೀಪಗಳೊಂದಿಗೆ ಬೆಳಗಿದ ಮುಖಗಳ ಮಧ್ಯೆ ಸ್ಪರ್ಧೆ!! ಆಕರ್ಷಕ ನಗದು ಬಹುಮಾನ ಪಡೆದ ಫೋಟೋ ಗಳು ಇಲ್ಲಿವೆ!

ಕಳೆದ ನಾಲ್ಕು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ವಸ್ತು ನಿಷ್ಠ ವರದಿ ಹಾಗೂ ವಿಭಿನ್ನ ನಿರೂಪಣೆಯೊಂದಿಗೆ ವೇಗವಾಗಿ ಓದುಗರನ್ನು ತಲುಪಿದ ಹೊಸಕನ್ನಡ ಡಿಜಿಟಲ್ ಮಾಧ್ಯಮವು ಈ ಬಾರಿ ದೀಪಾವಳಿ ವಿಶೇಷಾಂಕ ಎಂಬ ಶೀರ್ಷಿಕೆಯಡಿಯಲ್ಲಿ ಓದುಗರಿಗೆ ಸ್ಪರ್ಧೆ ಏರ್ಪಡಿಸಿತ್ತು.

 

ದೀಪಗಳೊಂದಿಗೆ ಬೆಳಗಿದ ಮುಖಗಳ ಮಧ್ಯೆ ನಡೆದ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿ ಓದುಗರು ಭಾಗವಹಿಸಿದ್ದು, ಅವುಗಳಲ್ಲಿ ಮಕ್ಕಳ, ವಯಸ್ಕರ ಹಾಗೂ ಗ್ರೂಪ್ ಎಂಬಂತೆ ಮೂರು ವಿಭಾಗಗಳನ್ನು ಮಾಡುವ ಮೂಲಕ ನುರಿತ ಛಾಯಾಗ್ರಾಹಕರ ತಂಡದ ತೀರ್ಪು ಬಹುಮಾನ ಪಡೆಯಲು ಅರ್ಹವಾದ ಫೋಟೋಗಳನ್ನು ಆಯ್ಕೆ ಮಾಡಿತ್ತು.

ಅಂತೆಯೇ ನಗದು ಬಹುಮಾನಕ್ಕೆ ಆಯ್ಕೆಯಾದ ಫೋಟೋಗಳನ್ನು ಇಲ್ಲಿ ಪ್ರಕಟಿಸಲಾಗಿದ್ದು, ಪ್ರಥಮ ಹಾಗೂ ದ್ವಿತೀಯ ಆಕರ್ಷಕ ನಗದು ಬಹುಮಾನಗಳನ್ನು ಪಡೆದ ಹಾಗೂ ಭಾಗವಹಿಸಿದ ನಮ್ಮೆಲ್ಲಾ ಪ್ರೀತಿಯ ಓದುಗ ಮಿತ್ರರಿಗೆ ಅಭಿನಂದನೆಗಳೊಂದಿಗೆ ಮುಂದೆಯೂ ನಿಮ್ಮೆಲ್ಲರ ಸಹಕಾರವನ್ನು ಬಯಸುತ್ತಾ..

ಪ್ರಧಾನ ಸಂಪಾದಕರು ಮತ್ತು ಸಿಬ್ಬಂದಿ ವರ್ಗ ಹೊಸಕನ್ನಡ.ಕಾಂ ಡಿಜಿಟಲ್ ಮಾಧ್ಯಮ ಬಳಗ.

ಪ್ರಥಮ:ಯಶಿಕ ಬಿ.ಎಸ್ ದೇವಿಪುರ ತಲಪಾಡಿ

ದ್ವಿತೀಯ:ಸನ್ನಿಧಿ ಎಸ್. ಹೆಬ್ಬಾರ್ ನರಿಮೊಗರು ಪುತ್ತೂರು

ಪ್ರಥಮ:ನಿರೀಕ್ಷಾ ಶೆಟ್ಟಿ ವಿಟ್ಲ

ದ್ವಿತೀಯ:ಅಂಕಿತಾ ವಿ.ದೇವಾಡಿಗ ಉಡುಪಿ

ಪ್ರಥಮ:ಅತ್ತಾಜೆ ಕುಟುಂಬ ಪುಂಜಾಲಕಟ್ಟೆ ಬಂಟ್ವಾಳ

ದ್ವಿತೀಯ:ಭಾಗ್ಯಶ್ರೀ ಮತ್ತು ಮನೆಯವರು ಕೊಚ್ಚಿಲ ಗೋಳಿತೊಟ್ಟು ಕಡಬ

ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಫೋಟೋ ಗಳು

Leave A Reply

Your email address will not be published.