ನಿಮ್ಮ ಮೊಣಕೈ, ಮೊಣಕಾಲು ಕಪ್ಪಾಗಿದೆಯೇ ? ಹಾಗಾದರೆ ಹೀಗೆ ಮಾಡಿ, ಸರಿ ಹೋಗುತ್ತೆ!!!

ನಮ್ಮ ದೇಹದಲ್ಲಿ ಅತಿಯಾಗಿ ನಿರ್ಲಕ್ಷಿಸುವ ಜಾಗ ಎಂದರೆ ಅದು ಮೊಣಕೈ ಮತ್ತು ಮೊಣಕಾಲು. ಯಾವುದೇ ರೀತಿಯ ಆರೈಕೆ ಮಾಡದೆ ಹಾಗೆ ಬಿಟ್ಟುಬಿಡುವುದರಿಂದಾಗಿ ಇತರೆ ಭಾಗಗಳಿಗಿಂತ ಇವು ಒರಟಾಗಿರುತ್ತವೆ ಹಾಗೂ ಸುತ್ತಲೂ ಚರ್ಮಕ್ಕಿಂತ ಗಾಢ ಕಪ್ಪುಬಣ್ಣದಲ್ಲಿರುತ್ತವೆ. ಇದಕ್ಕೆಂದೆ ಮಾರುಕಟ್ಟೆಯಲ್ಲಿ ಹಲವು ಕ್ರೀಮ್‌ಗಳಿವೆ. ಆದರೆ ನಾವು ಸುಲಭವಾಗಿ ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿ ಮನೆಮದ್ದು ತಯಾರಿಸಬಹುದು. ಹೇಗೆಂದು ತಿಳಿದುಕೊಳ್ಳೋಣ ಬನ್ನಿ.

 

ಹಾಲು, ಜೇನುತುಪ್ಪ ಹಾಗೂ ಅರಶಿನ:
1 ಚಮಚ ಅರಿಶಿಣಕ್ಕೆ ಜೇನುತುಪ್ಪ ಮತ್ತು 2 ಚಮಚ ಹಾಲು ಹಾಕಿ ಚೆನ್ನಾಗಿ ಕಲಸಿದ ಪೇಸ್ಟ್ ಅನ್ನು ಗಾಢವಾದ ಅಥವಾ ಒರಟಾದ ಮೊಣಕೈಗಳು ಮತ್ತು ಮೊಣಕಾಲಿನ ಮೇಲೆ ಹಚ್ಚಬೇಕು. ಈ ಪೇಸ್ಟ್ ಕನಿಷ್ಠ 30 ನಿಮಿಷಗಳ ಕಾಲ ಇರಬೇಕು. ನಂತರ ಅದನ್ನು ತಣ್ಣೀರಿನಿಂದ ತೊಳೆದು ಒಣಗಲು ಬಿಡಿ. ಅರಶಿನದಲ್ಲಿ ನೈಸರ್ಗಿಕವಾದ ಆಂಟಿಸೆಪ್ಟಿಕ್ ಗುಣವಿರುವುದರಿಂದ ಕಪ್ಪು ಕಲೆಗಳು ಮಾಯವಾಗುತ್ತದೆ. ಈ ರೀತಿಯಾಗಿ ವಾರಕ್ಕೊಮ್ಮೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ತೆಂಗಿನಕಾಯಿ, ಬಾದಾಮಿ, ಅಥವಾ ಎಳ್ಳಿನ ಎಣ್ಣೆ:
ಈ ತೈಲಗಳು ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಇವು ಕೀಲುಗಳ ಪೋಷಣೆಯ ಕೊರತೆಯಿಂದಾಗಿ ಉಂಟಾದ ಒರಟಾದ ಮೊಣಕೈ ಮತ್ತು ಮೊಣಕಾಲುಗಳಿಗೆ ಮಲಗುವ ಮುನ್ನ ಎಣ್ಣೆಯನ್ನು ಹಚ್ಚಿ, ಆ ಜಾಗವನ್ನು ಚೆನ್ನಾಗಿ ಮಸಾಜ್ ಮಾಡಬೇಕು. ಆಗ ಜಾಗಕ್ಕೆ ಪೋಷಣೆಯನ್ನು ಒದಗಿಸುತ್ತದೆ ಮತ್ತು ಒರಟುತನವನ್ನು ಕಡಿಮೆ ಮಾಡುತ್ತದೆ.

ಅಲೋವೆರಾ ಜೆಲ್:
ಅಲೋವೆರಾ ಜೆಲ್ ಅನ್ನು ಕೀಲುಗಳಿಗೆ ಸರಿಯಾದ ಪೋಷಣೆ ಮತ್ತು ಆರೈಕೆಯು ಬೇಕಾಗುವ ಸಂದರ್ಭದಲ್ಲಿ ಹಚ್ಚಿ. ಪೇಸ್ಟ್ ಅನ್ನು 30ರಿಂದ 35 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ನೈಸರ್ಗಿಕ ಅಲೀವೆರಾ ಜೆಲ್ ಅನ್ನು ನಿಯಮಿತವಾಗಿ ಬಳಸುವುದರಿಂದ ಮೊಣಕೈ ಮತ್ತು ಮೊಣಕಾಲುಗಳನ್ನು ಸುತ್ತಲಿನ ಕಪ್ಪು ಹೋಗುತ್ತದೆ. ತಾಜಾ ಅಲೋವೆರಾ ಪೇಸ್ಟ್ ಅನ್ನು ಹಚ್ಚಿದರೆ ಇನ್ನಷ್ಟು ಉತ್ತಮ ಫಲಿತಾಂಶ ಕಾಣಬಹುದು.

ಮೊಸರು ಮತ್ತು ವಿನೆಗರ್:
1 ಚಮಚ ಮೊಸರನ್ನು 1 ಚಮಚ ವಿನೆಗರ್ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಉತ್ತಮವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಮೊಣಕೈ ಮತ್ತು ಮೊಣಕಾಲು ಪ್ರದೇಶದಲ್ಲಿ ಈ ನೈಸರ್ಗಿಕ ಸ್ಕೃಬ್ ಬಳಸಿ. ಈ ಸ್ಕೃಬ್ ಹಚ್ಚಿ 30 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದು ಒಣಗಲು ಬಿಡಿ.

ಸಕ್ಕರೆ, ನಿಂಬೆ, ಮತ್ತು ಜೇನುತುಪ್ಪದ ಸ್ಕೃಬ್ :
ಪುಡಿ ಮಾಡಿದ ಸಕ್ಕರೆ 1 ಚಮಚ, 1 ಚಮಚ ನಿಂಬೆ ಮತ್ತು 1 ಚಮಚ ನೈಸರ್ಗಿಕ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿ. ಈ ಪೇಸ್ಟ್ ಅನ್ನು ಮೊಣಕೈ ಮತ್ತು ಮೊಣಕಾಲುಗಳ ಮೇಲೆ ಹಚ್ಚಿ. ಈ ಪದಾರ್ಥಗಳು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಈ ಪ್ರದೇಶಗಳಲ್ಲಿನ ಕಪ್ಪು ಕಲೆಯನ್ನು ಹೋಗಲಾಡಿಸುತ್ತದೆ.

ಸಕ್ಕರೆ ಮತ್ತು ಆಲಿವ್ ಆಯಿಲ್ ಸ್ಕೃಬ್:
ಸಕ್ಕರೆಯು ಉತ್ತಮ ನೈಸರ್ಗಿಕ ಚರ್ಮದ ಎಕ್ಸ್ಫೋಲಿಯಂಟ್(Exfoliation) ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆಲಿವ್ ಎಣ್ಣೆಯು ಎಲ್ಲಾ ಪೋಷಣೆಯ ಗುಣಗಳನ್ನು ಹೊಂದಿದೆ. ಪುಡಿ ಮಾಡಿದ ಸಕ್ಕರೆ 1 ಚಮಚ, 1 ಚಮಚ ಆಲಿವ್ ಎಣ್ಣೆಯನ್ನು ಚೆನ್ನಾಗಿ ಮಿಶ್ರಣ ಮಾಡಿ, ಪೀಡಿತ ಪ್ರದೇಶಕ್ಕೆ ಹಚ್ಚಿಕ್ಕೊಳ್ಳಿ. ಈ ಸ್ಕೃಬ್ ಕನಿಷ್ಠ 30-35 ನಿಮಿಷಗಳ ಹಾಗೆ ಇರಲಿ. ನಂತರ ತಣ್ಣೀರಿನಿಂದ ತೊಳೆಯಿರಿ. ಸಕ್ಕರೆಯು ಉತ್ತಮ ನೈಸರ್ಗಿಕ ಚರ್ಮದ ಎಕ್ಸ್ಫೋಲಿಯಂಟ್(Exfoliation) ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆಲಿವ್ ಎಣ್ಣೆಯು ಎಲ್ಲಾ ಪೋಷಣೆಯ ಗುಣಗಳನ್ನು ಹೊಂದಿದೆ.

ಮೊಣಕಾಲುಗಳಲ್ಲಿ ಆದಂತಹ ಕಪ್ಪು ಕಲೆಗಳನ್ನು ತೆಗೆದುಹಾಕಲು ಅಡುಗೆಮನೆಯಲ್ಲಿನ ಪದಾರ್ಥಗಳನ್ನು ಬಳಸಿ ಸ್ಕೃಬ್ ತಯಾರಿಸಿ ಹಚ್ಚುವುದರಿಂದ ಕೇವಲ ಒರಟುತನವನ್ನು ಹೋಗಲಾಡಿಸುವುದಲ್ಲದೆ, ಬೇಕಾದ ಪೋಷಣೆಯನ್ನು ಒದಗಿಸುತ್ತದೆ.

Leave A Reply

Your email address will not be published.