Paleo Diet : ಡಯೆಟ್ ಪ್ಲಾನ್ ನಿಂದಲೇ ಸಾವು ಕಂಡಳೇ ತಮಿಳು ಕಿರುತೆರೆ ನಟನ ಪತ್ನಿ?!! ಈ ಪ್ಯಾಲಿಯೋ ಡಯೆಟ್ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ!

ತಮಿಳಿನ ಕಿರುತೆರೆ ನಟ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ ಸಾವಿನ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಅದರಲ್ಲೂ ಅವರ ಸಾವಿಗೆ ಕಾರಣವಾದ ವಿಚಾರ ಈಗ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಪ್ಯಾಲಿಯೋ ಡಯಟ್ ನಲ್ಲಿದ್ದ ಪ್ರಿಯಾಗೆ ಮಧುಮೇಹ ಕಾಣಿಸಿಕೊಂಡಿದ್ದು, ಕೆಲ ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.

 

ಹಾಗಾದರೆ, ಪ್ಯಾಲಿಯೋ ಡಯೆಟ್ ಎಂದರೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಆದರೆ, ಅನುಸರಿಸುವ ಕ್ರಮಗಳ ಬಗ್ಗೆ ನಿಖರ ಮಾಹಿತಿ ಇಲ್ಲದೇ ಹೋದರೆ, ಇಲ್ಲದ ಪ್ರಮಾದಗಳಿಗೆ ಎಡೆ ಮಾಡಿಕೊಟ್ಟು ಜೀವಕ್ಕೆ ಕುತ್ತು ಬಂದರೂ ಅಚ್ಚರಿಯಿಲ್ಲ.

ಇಂದಿನ ಜೀವನ ಶೈಲಿ ಮೊದಲಿನಂತೆ ಇಲ್ಲ. ದಿನ ಬೆಳಿಗ್ಗೆ ಎದ್ದ ಕೂಡಲೇ ತರಾತುರಿಯ ಓಡಾಟ, ಒತ್ತಡದ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದ ತೂಕ ಹೆಚ್ಚಳದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿವೆ. ಅಧಿಕ ತೂಕದಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುವ ಭಯದಿಂದ ತೂಕ ಇಳಿಸಿಕೊಳ್ಳುವ ಮಾರ್ಗಗಳ ಮೊರೆ ಹೋಗುವುದು ಸಾಮಾನ್ಯ.

ಇಂದಿನ ದಿನಚರಿಯಲ್ಲಿ ಕೆಲಸದ ಒತ್ತಡದ ನಡುವೆ ವ್ಯಾಯಾಮ ಮಾಡಲು ಸಮಯ ಸಿಗದ ಅನೇಕ ಜನರು ಪ್ಯಾಲಿಯೊ ಡಯಟ್, ಲೋ ಕಾರ್ಬ್ ಡಯಟ್, ಕೀಟೊ ಡಯಟ್, ವೆಗಾನ್ ಡಯಟ್ ಮುಂತಾದ ಡಯಟ್ ಗಳನ್ನು ಅನುಸರಿಸಿ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ. ಆದರೆ ಅನೇಕ ಬಾರಿ ಮಾರಕವಾಗಿ ಪರಿಣಮಿಸುತ್ತದೆ.

ಪ್ಯಾಲಿಯೊ ಆಹಾರದಲ್ಲಿರುವ ಜನರು ಹೆಚ್ಚು ಒಟ್ಟು ಕೊಬ್ಬನ್ನು ಸೇವಿಸುತ್ತಾರೆ. ಇದರಿಂದ ಹೆಚ್ಚಿನ ಕ್ಯಾಲೋರಿ ಸಂಗ್ರಹ ವಾಗುತ್ತದೆ. ಇಲ್ಲಿ ಭರತ್ ಕಲ್ಯಾಣ್ ಅವರ ಪತ್ನಿ ಪ್ರಿಯಾ ವಿಚಾರದಲ್ಲಿ ಅವರ ಶುಗರ್ ಲೆವೆಲ್‌ಗಳಲ್ಲಿ ಸಮಸ್ಯೆ ಕಂಡುಬಂದಿದ್ದು, ಕೀಟೋಸಿಸ್ ಎಂಬ ಸ್ಥಿತಿಗೆ ತಲುಪಿದೆ.

ಶೇಖರಿಸಿದ ಕೊಬ್ಬನ್ನು ಶಕ್ತಿಯಾಗಿ ಬಳಸಲು ದೇಹಕ್ಕೆ ಕೀಟೋನ್‌ಗಳು ಮುಖ್ಯವಾಗಿದ್ದು, ಆ ಕೀಟೋನ್‌ಗಳು ಹೆಚ್ಚಾದಂತೆ, ನಿರ್ಜಲೀಕರಣವು ಸಂಭವಿಸುವ ಸಾಧ್ಯೆತೆಗಳಿವೆ. ಹಾಗಾಗಿ, ದೇಹವು ಕ್ರಮೇಣ ಬಳಲಿಕೆ, ಗೊಂದಲ, ಕೋಮಾದ ಮುಂದಿನ ಸ್ಥಿತಿಯನ್ನು ತಲುಪಬಹುದು.

ಇದರ ಹೊರತಾಗಿ ಬೆಳವಣಿಗೆಯನ್ನು ಬದಲಾಯಿಸಲು ಹಲವು ಮಾರ್ಪಾಡುಗಳಿರುತ್ತವೆ. ಇದು ಅಂತಿಮವಾಗಿ ಜೀವಕ್ಕೆ ಅಪಾಯಕಾರಿಯಾಗಬಹುದು.

ಹೀಗಾಗಿ ಯಾವುದೇ ಮಾಹಿತಿ ಅಥವಾ ವೈದ್ಯರ ಸಲಹೆ ಪಡೆಯದೆ ತೂಕ ಇಳಿಸಿಕೊಳ್ಳುವ ಮಾರ್ಗಗಳನ್ನು ಅನುಸರಿಬಾರದು. ಅರೋಗ್ಯದ ವಿಚಾರದಲ್ಲಿ ಮುಂಜಾಗ್ರತೆ ಕ್ರಮ ವಹಿಸುವುದು ಅತ್ಯವಶ್ಯಕ.

Leave A Reply

Your email address will not be published.