Rape and Murder : ಬಹಿರ್ದೆಸೆಗೆ ಹೋದ 9 ನೇ ತರಗತಿ ವಿದ್ಯಾರ್ಥಿನಿ ಮೇಲೆ ರೇಪ್ ಆಂಡ್ ಮರ್ಡರ್ | ಅಪ್ರಾಪ್ತೆ ಮೇಲೆ ಅಟ್ಟಹಾಸ ಮೆರೆದು ಕೊಲೆ ಮಾಡಿದ ಪಾಪಿಗಳು!!!

15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ವರದಿಯಾಗಿದೆ. ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ಈ ಕೃತ್ಯ ನಡೆದಿದ್ದು, ಬಾಲಕಿ ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ನಡೆಸಿ ವಿಕೃತ ಮೆರೆದಿದ್ದಾರೆ.

 

ಇಷ್ಟೇ ಅಲ್ಲದೆ, ಅವಳದೇ ವೇಲ್‌ನಿಂದ ಕತ್ತಿಗೆ ಉರುಲು ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾಗಿರುವ ನತದೃಷ್ಟ ಬಾಲಕಿ ಮೂಲತಃ ಬೇರೆ ಊರಿನವಳಾಗಿದ್ದು, ತನ್ನ ಸಂಬಂಧಿಕರ ಊರಲ್ಲಿದ್ದು ಶಾಲೆಗೆ ತೆರಳುತ್ತಿದ್ದಳು.

ನಿನ್ನೆ ಎಂದಿನಂತೆ ಮಧ್ಯಾಹ್ನ ಬಹಿರ್ದೆಸೆಗೆ ಹೋಗಿದ್ದ ಸಂದರ್ಭ ವಿಕೃತ ಕಾಮಿ ದೌರ್ಜನ್ಯ ಎಸೆದಿದ್ದು, ಗ್ರಾಮಕ್ಕೆ ಹೊಂದಿಕೊಂಡಂತೆಯೇ ಇರುವ ಕಬ್ಬಿನ ಗದ್ದೆಗೆ ಬಲವಂತವಾಗಿ ಕರೆತಂದು ಅಲ್ಲಿ ರೇಪ್ ಮತ್ತು ಮರ್ಡರ್ ಮಾಡಲಾಗಿದೆ‌.

15 ವರ್ಷದ 9 ನೇ ತರಗತಿಯ ವಿದ್ಯಾರ್ಥಿನಿಯ ಶವ ನಿನ್ನೆ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದು, ಅರೆಬೆತ್ತಲೆ ಸ್ಥಿತಿಯಲ್ಲಿ ಬಾಲಕಿಯ ದೇಹ ಪತ್ತೆಯಾಗಿದೆ. ಆಕೆಯ ವೇಲ್ ನಿಂದಲೇ ಆಕೆಯ ಕೊರಳಿಗೆ ಉರುಳು ಬಿಗಿದು ಕೊಲೆ ಮಾಡಲಾಗಿದೆ.

ಈ ಪ್ರಕರಣ ಅತ್ಯಾಚಾರವೆಸಗಿ ಕೊಲೆ ಮಾಡುವಂತೆ ಕಾಣುತ್ತಿದ್ದು, ಬಾಲಕಿಯ ಕುಟುಂಬದವರು ಈ ಕುರಿತು ಆಳಂದ ಪೋಲಿಸ್ ಠಾಣೆಯ ಮೆಟ್ಟಿಲೇರಿ ರೇಪ್ & ಮರ್ಡರ್ ಪ್ರಕರಣ ದಾಖಲಿಸಿದ್ದಾರೆ.

ಈ ಭೀಭತ್ಸ ಕೃತ್ಯದಿಂದಾಗಿ ಆ ಗ್ರಾಮದ ಜನ ಬೆಚ್ಚಿ ಬಿದ್ದಿದ್ದು, ಮೃತ ಬಾಲಕಿಯ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಈ ರೇಪ್ ಆಂಡ್ ಮರ್ಡರ್ ಪ್ರಕರಣದ ಆರೋಪಿಗಳಿಗೆ ಎನ್‌ಕೌಂಟರ್ ಮಾಡಬೇಕು ಎಂದು ಆಗ್ರಹಿಸಿ ರಾಮಸೇನಾ ಸಂಘಟನೆಯ ಕಾರ್ಯ ಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಈ ಪ್ರಕರಣದ ಕುರಿತಾಗಿ ಆಳಂದನಲ್ಲೂ ಪ್ರತಿಭಟನೆ ನಡೆದಿದೆ. ಕೊಲೆ ನಡೆದ ಊರಿಗೆ ಕಲಬುರಗಿ ಎಸ್ಪಿ ಇಶಾ ಪಂಥ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಯುವಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಪ್ರಕರಣದ ತನಿಖೆ ಮುಂದುವರೆದಿದ್ದು ಎಳೆಯ ಹೆಣ್ಣು ಮಕ್ಕಳನ್ನು ಕೂಡ ಕಾಮದ ತೃಷೆ ತೀರಿಸಲು ಬಳಸಿಕೊಳ್ಳುವ ವಿಕೃತ ಕಾಮಿಯ ಬಂಧನಕ್ಕೆ ಪೊಲೀಸ್ ಪಡೆ ಮುಂದಾಗಿದೆ.

Leave A Reply

Your email address will not be published.