ಕುಂಬಳಕಾಯಿ ಮೇಲೆ ಕುಳಿತ ಸುಂದರಿ | ಕುಳಿತ ನಂತರ ಯುವತಿ ಪಾಡೇನಾಯ್ತು?

ಈಗಿನ ಆಧುನಿಕ ಜಗತ್ತಿನಲ್ಲಿ ಬಹುಷಃ ಜನರಿಗೆ ಫೋಟೋ ಕ್ಲಿಕ್ಕಿಸುವ ಹವ್ಯಾಸ ಇದ್ದಷ್ಟು ಬೇರೆ ಯಾವ ಹವ್ಯಾಸವೂ ಅಷ್ಟು ಇಲ್ಲವೇನೋ ಅನ್ನಿಸಿಬಿಡುತ್ತೆ. ಹೌದು ಇನ್ಸ್ಟಾಗ್ರಾಮ್, ವಾಟ್ಸಪ್, ಟ್ವಿಟ್ಟರ್, ಫೇಸ್ಬುಕ್ ಎಲ್ಲದರಲ್ಲೂ ಜನರು ಆಕ್ಟಿವ್ ಆಗಿದ್ದು ತಮ್ಮ ಫೋಟೋ ಕ್ಲಿಕ್ಕಿಸಿ ಆಪ್ ನಲ್ಲಿ ಅಪ್ಲೋಡ್ ಮಾಡಿ ಲೈಕ್ ಶೇರ್ ಅಂತಾ ಸಮಯ ಕಳೆಯೋದು ಸಾಮಾನ್ಯ ಆಗಿ ಹೋಗಿದೆ. ಹಾಗೆಯೇ ಇಲ್ಲೊಂದು ಕಡೆ ಯುವತಿಯೊಬ್ಬಳು ಫೋಟೋ ಕ್ಲಿಕ್ಕಿಸಿ ಅವಾಂತರ ಮಾಡಿಕೊಂಡಿದ್ದಾಳೆ.

 

ತೋಟಕ್ಕೆ ಹೋದ ಯುವತಿಯೊಬ್ಬಳು ತನಗೆ ಫೋಟೋ ತೆಗೆಯುವಾಗ ಕುಳಿತುಕೊಳ್ಳಲು ಏನು ಸಿಗಲಿಲ್ಲವೆಂದುಕೊಂಡು ಕುಂಬಳಕಾಯಿಯ ಮೇಲೆ ಕುಳಿತಿದ್ದಾಳೆ.

ನಿಮಗೆ ಗೊತ್ತಿದೆಯಾ ಕೆಲವು ಕಡೆಗಳಲ್ಲಿ ಕುಂಬಳಕಾಯಿಯ ಹಬ್ಬ ಹ್ಯಾಲೋವೀನ್ ಆಚರಿಸಲಾಗುತ್ತದೆ. ಅದಕ್ಕೂ ಒಂದು ದಿನ ಮುಂಚಿತವಾಗಿ, ಕುಂಬಳಕಾಯಿಯ ಶಾಪಿಂಗ್ ಮಾಡಲು ಹೋದ ಯುವತಿಯೊಬ್ಬಳು ಮಾಡುವ ವೇಳೆ ನಡೆದ ಘಟನೆ ಆಗಿದೆ.

ಕುಂಬಳ ಕಾಯಿ ಒಂದನ್ನು ಹಿಡಿದುಕೊಂಡು ಫೋಟೋಗೆ ಪೋಸ್ ಕೊಡಲು ನೋಡಿದ್ದಳು ಯುವತಿ. ಅಲ್ಲಿ ಕುಳಿತುಕೊಳ್ಳಲು ಏನೂ ಇರಲಿಲ್ಲ. ಕುಂಬಳಕಾಯಿಯನ್ನು ನೋಡಿ ಅದು ಬಹಳ ಭಾರ ಇರಬೇಕು ಎಂದುಕೊಂಡು ತನ್ನ ತೂಕವನ್ನು ಅದು ತಡೆದುಕೊಳ್ಳುತ್ತದೆ ಎಂದುಕೊಂಡಳೋ ಏನೋ. ಅದಕ್ಕಾಗಿ ಅಲ್ಲಿಯೇ ಇದ್ದ ಕುಂಬಳಕಾಯಿ ಮೇಲೆ ಕುಳಿತೇ ಬಿಟ್ಟಳು. ಮುಂದೆ ಏನಾಗಬಹುದು ಎಂದು ಊಹಿಸಿದ್ದ ಬುದ್ಧಿವಂತನೊಬ್ಬ ಇದರ ವಿಡಿಯೋ ಮಾಡುತ್ತಿದ್ದ. ಕುಂಬಳಕಾಯಿ ಹಿಡಿದು, ಇನ್ನೊಂದು ಕುಂಬಳಕಾಯಿ ಮೇಲೆ ಕುಳಿತ ಕೆಲವೇ ಸೆಕೆಂಡ್‌ಗಳಲ್ಲಿ ಕುಳಿತಿರುವ ಕುಂಬಳಕಾಯಿ ಒಡೆದು ಹೋಗಿ ಯುವತಿಯ ಪ್ಯಾಂಟ್ ಗಲೀಜಾಗಿದ್ದೂ ಅಲ್ಲದೇ ಅವಳು ಅಲ್ಲಿಯೇ ಬಿದ್ದಳು. ಯುವತಿ ಅರೆಕ್ಷಣ ಕಕ್ಕಾಬಿಕ್ಕಿಯಾಗಿದ್ದು, ಅದರ ವಿಡಿಯೋ ಮಾತ್ರ ಜನರನ್ನು ನಕ್ಕು ನಗಿಸುತ್ತಿದೆ.

https://twitter.com/buitengebieden/status/1586439447750406144?ref_src=twsrc%5Etfw%7Ctwcamp%5Etweetembed%7Ctwterm%5E1586439447750406144%7Ctwgr%5Ee8685e6397504c1dbb1d32e6bb0e2bac449df396%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadadunia-epaper-kannadad%2Fkumbalakaayimelekulitufotogeposkodaluhodhayuvatipaadenaaytunodi-newsid-n437277068%3Fs%3Dauu%3D0x0829ccde0a1fd2e6ss%3Dwsp

ಮಾರ್ಡನ್ ಡ್ರೆಸ್ ಮಾಡಿಕೊಂಡು ಪೋಸ್ ಕೊಟ್ಟರೆ ಸಾಲದು, ತಲೆಯ ಒಳಗೂ ಏನಾದರೂ ಬುದ್ಧಿ ಇಟ್ಟುಕೊಳ್ಳಬೇಕು ಎಂದು ಹಲವರು ಯುವತಿಯನ್ನು ಟೀಕಿಸುತ್ತಿದ್ದಾರೆ. ಒಟ್ಟಾರೆ ಯುವತಿ ಈ ಘಟನೆಯಿಂದ ಪೇಚಿಗೆ ಸಿಲುಕ್ಕಿದ್ದಾಳೆ. ಕೆಲವರು ಕುಂಬಳ ಕಾಯಿ ತೋಟದ ಯಜಮಾನ ಬರುವ ಮೊದಲು ಓಡಿ ಹೋಗುವುದು ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ.

Leave A Reply

Your email address will not be published.