ಮಕ್ಕಳೊಂದಿಗೆ ಹಾಯಾಗಿ ಇಲ್ಲಿಗೆ ಪ್ರವಾಸ ಹೋಗಿ
ಮಕ್ಕಳಿಗೆ ರಜೆ ಬಂತು ಅಂದ್ರೆ ಎಲ್ಲಾದ್ರೂ ಹೋಗುವ ಹಾಗೆ ಪೀಡಿಸುತ್ತಾರೆ. ಎಷ್ಟು ದಿವಸ ಅಂತ ಹತ್ತಿರದ ಸ್ಥಳಕ್ಕೆ ಕರೆದು ಕೊಂಡು ಹೋಗಿ ಸುಮ್ಮನೆ ಇರಿಸುತ್ತೀರಾ. ‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎಂಬ ಮಾತೇ ಇದೆ ಅಲ್ವಾ. ಹಾಗಾಗಿ ಒಂದಷ್ಟು ಸೂಪರ್ ಡೂಪರ್ ಪ್ಲೇಸ್ ಗಳಿಗೆ ರಜೆ ಸಮಯದಲ್ಲಿ ಫ್ಯಾಮಿಲಿ ಟ್ರಿಪ್ ಹೋಗಿ.
ಕಡಿಮೆ ಬಜೆಟ್ ನಲ್ಲಿ ಜೈಪುರ್ / ಜೈಪುರ ಹೋಗಿ. ಪ್ರಾಚೀನ ರಚನೆಗಳು, ಕಲ್ಪನೆಯನ್ನು ಹಾಗೂ ಇತಿಹಾಸದ ಕಥೆಗಳನ್ನು ಹುಟ್ಟು ಹಾಕಿದ ಊರು. ಎಲ್ಲ ವಯಸ್ಸಿನ ಜನರಿಗೆ, ಮಕ್ಕಳಿಗೆ ಇಷ್ಟ ಆಗುವ ಸ್ಥಳ. ನೋಡುವುದರ ಜೊತೆಗೆ ಒಂದಷ್ಟು ವಿಷಗಳನ್ನು ಅರಿತುಕೊಳ್ಳಬಹುದು.
ಸಿಕ್ಕಿಂ
ಕಚ್ಛಾ ನೈಸರ್ಗಿಕ ಸೌಂದರ್ಯ, ದಟ್ಟವಾದ ಹಿಮಾಲಯ, ಇದರ ಜೊತೆಗೆ ಹಲವಾರು ಕಥೆಗಳನ್ನು ಸಾರುವ ಮಠಗಳನ್ನು ಕಾಣಬಹುದು. ಚೀನಾದೊಂದಿಗಿನ ಭಾರತದ ಗಡಿಯ ಸ್ಥಳವಾಗಿದೆ. ಹೀಗಾಗಿ ಇಲ್ಲಿನ ಗೈಡ್ಗಳು ಕೂಡ ಉಸ್ತುಕರಾಗಿ ಕಥೆಗಳನ್ನು ಹೇಳುತ್ತಾರೆ. ಮಕ್ಕಳಿಗೆ ಸಾಕಷ್ಟ ಇಷ್ಟವಾಗುವಂತಹ ವಿಷಯಗಳನ್ನು ತಿಳಿಸಲಾಗುತ್ತದೆ. ಪ್ರತಿಯೊಂದು ಕಡಿಮೆ ಖರ್ಚಿನಲ್ಲಿ ಸಿಕ್ಕಿಂ ಗೆ ಹೋಗಿ ಬರಬಹುದು.
ಮುನ್ನಾರ್
ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯಲ್ಲಿ ಇರುವ ಗ್ರೀನ್ ಲ್ಯಾಂಡ್ ಅದುವೇ ಮುನ್ನಾರ್. ಹಲವಾರು ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನು ಹೊಂದಿರುವ ಬ್ಯೂಟಿಫುಲ್ ಸ್ಥಳ. ತುಂಬಾ ತಂಪು ಜಾಗ. ಮನಸ್ಸಿಗೆ ನೆಮ್ಮದಿ ಕೊಡುವ ಜಾಗ ಅಂದ್ರೆ ತಪ್ಪಂತು ಆಗೋಲ್ಲ. ಮುನ್ನಾರ್ ಅಲ್ಲಿ ನೋಡಬಹುದಾದ ಜಾಗಗಳು ಹಲವಾರು ಇದೆ. ಕಡಿಮೆ ಬಜೆಟ್ ಗಳನ್ನು ಕಾಣಬಹುದು ಮತ್ತು ಹೈ ಬಜೆಟ್ ಗಳಲ್ಲೂ ಸ್ಥಳಗಳನ್ನು ಕಾಣಬಹುದು.
ಮನಾಲಿ
ಅದೆಷ್ಟೋ ಜನರಿಗೆ ಮನಾಲಿ ದೊಡ್ಡ ಕನಸು ಆಗಿರುತ್ತೆ. ತಂಪಾದ ಹಿಮಾಚಲ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡೋದು ಅಂದ್ರೆ ಸಖತ್ ಮಜಾ ಅಲ್ವಾ. ಇದಂತೂ ಮಕ್ಕಳ ಸ್ನೇಹಿ ಸ್ಥಳ ಅಂತ ಹೇಳಬಹುದು. ಅದ್ರಲ್ಲೂ ಒಂದಷ್ಟು ಪ್ಯಾಕೆಜ್ ಟ್ರಿಪ್ ಇರುತ್ತೆ. ಇದರಲ್ಲಿ ಕೂಡ ಹೋಗಬಹುದು.
ಒಟ್ಟಿನಲ್ಲಿ ರಜೆಗಳನ್ನು ಹಾಳು ಮಾಡದೆ ಮಕ್ಕಳಿಗೆ ಖುಷಿಯ ಜೊತೆಗೆ ಒಂದಷ್ಟು ಪಾಠಗಳನ್ನು ಕಲಿಯಬೇಕು.