ಇಂದಿನಿಂದ ಭಾರತದ ಮೊದಲ ಡಿಜಿಟಲ್ ರೂಪಾಯಿ ಆರಂಭ !!!
ಇಂದಿನಿಂದ ಭಾರತದ ಮೊದಲ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆ ಆರಂಭವಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್ಸಿ ಬ್ಯಾಂಕ್, ಐಸಿ ಐಸಿಐ ಒಳಗೊಂಡಂತೆ ಒಟ್ಟಾಗಿ 9 ಬ್ಯಾಂಕುಗಳು ಸರಕಾರಿ ಬಾಂಡುಗಳಲ್ಲಿನ ವಹಿವಾಟುಗಳಿಗಾಗಿ ವರ್ಚುವಲ್ ಕರೆನ್ಸಿಯನ್ನು ವಿತರಿಸಲಿದೆ.
ಪ್ರಸ್ತುತ ಇವುಗಳನ್ನು ಸರಕಾರಿ ಬಾಂಡುಗಳಲ್ಲಿನ ಸೆಕೆಂಡರಿ ಮಾರ್ಕೆಟ್ ವಹಿವಾಟುಗಳ ಪಾವತಿಗೆ ಮಾತ್ರ ಬಳಸಲಾಗುತ್ತದೆ. ಚಿಲ್ಲರೆ ಕ್ಷೇತ್ರದಲ್ಲಿ ಡಿಜಿಟಲ್ ರೂಪಾಯಿಗಳ ಮೊದಲ ಪ್ರಾಯೋಗಿಕ ಬಳಕೆ ಕೆಲವು ಆಯ್ಕೆ ಮಾಡಿದ ಪ್ರದೇಶಗಳಲ್ಲಿ ಆರಂಭವಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಎನ್ನುವುದು ವರ್ಚುವಲ್ ಕರೆನ್ಸಿಯಾಗಿದ್ದು, ಇದಕ್ಕೂ ಬಿಟ್‌ಕಾಯಿನ್‌ನಂಥಹ ಕ್ರಿಪ್ಟೋಕರೆನ್ಸಿಗೂ ಯಾವುದೇ ಸಂಬಂಧವಿಲ್ಲ. ಆರಂಭದ ಪ್ರಾಯೋಗಿಕ ಬಳಕೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ಭಾಗದಲ್ಲಿ ಇತರೆ ಸಗಟು ವಹಿವಾಟು ಮತ್ತು ಗಡಿಯಾಚೆಗಿನ ಪಾವತಿಯಲ್ಲೂ ಡಿಜಿಟಲ್ ರೂಪಾಯಿ ಬಳಕೆ ಆರಂಭಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.