37 ವರ್ಷವಾದರೂ ಮದುವೆಯಾಗದ ಚಿಂತೆ | ತಂತ್ರಿಯ ಮಾತು ನಂಬಿ ಶಿಕ್ಷಕನೋರ್ವ ಮಾಡಿದ ಹೀನಾಯ ಕೆಲಸ- ಏನದು ಗೊತ್ತೇ? ಇಲ್ಲಿದೆ ಕಂಪ್ಲೀಟ್ ಸ್ಟೋರಿ!!!

ಜೀವನವೆಂಬ ನೌಕೆಯಲ್ಲಿ ಏನೇ ಸಮಸ್ಯೆಗಳು ಎದುರಾದರೂ ಕೂಡ ಸ್ವಾಮೀಜಿಗಳ ಇಲ್ಲವೆ ಪಂಡಿತರ ಮೊರೆ ಹೋಗುವ ಪರಿಪಾಠ ಹೆಚ್ಚಿನವರಿಗಿದೆ.

 

ಐಶ್ವರ್ಯ ವೃದ್ಧಿಗೆ ಪೂಜೆ, ಪುನಸ್ಕಾರ ಮಾಡುವ ಇಲ್ಲವೇ ಯಾವುದೇ ಕಂಟಕ ಎದುರಾಗದಂತೆ ಪರಿಹಾರೋಪಾಯ ನಡೆಸುವುದು ವಾಡಿಕೆ. ಇದರಂತೆ ಮದುವೆಗೆ ಇರುವ ಸಮಸ್ಯೆಗಳನ್ನು ಪರಿಹರಿಸಲು ತಂತ್ರಿಯ ಮೊರೆ ಹೊಕ್ಕ ಶಿಕ್ಷಕ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ವಿಚಿತ್ರ ಘಟನೆಯೊಂದು ಮುನ್ನಲೆಗೆ ಬಂದಿದೆ.

ಮದುವೆಗೆ ಇರುವ ಅಡೆತಡೆಗಳನ್ನು ಹೋಗಲಾಡಿಸಲು ತಂತ್ರಿಯ ಮೊರೆ ಹೋಗಿದ್ದ 37 ವರ್ಷದ ವ್ಯಕ್ತಿಯೊಬ್ಬ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ 37 ವರ್ಷದ ಶಿಕ್ಷಕನೊಬ್ಬನಿಗೆ ಪ್ರಾಯ ಕಳೆದರೂ ಮದುವೆಯಾಗಿಲ್ಲ ಚಿಂತೆ ಕಾಡಿದ್ದು, ಹಾಗಾಗಿ, ಇದರ ಪರಿಹಾರಕ್ಕಾಗಿ ತನ್ನ ಮದುವೆಗೆ ಇರುವ ಅಡೆತಡೆಗಳನ್ನು ಹೋಗಲಾಡಿಸಲು ತಂತ್ರಿಯ ಮೊರೆ ಹೋಗಿದ್ದಾನೆ.

ಈ ಕಷ್ಟಗಳು ದೂರವಾಗಬೇಕಾದರೆ, ಅಪ್ರಾಪ್ತೆಯ ಖಾಸಗಿ ಅಂಗದಿಂದ ಬಂದ ರಕ್ತವನ್ನು ತೊಯ್ದ ಬಟ್ಟೆಯಲ್ಲಿ ತಂದರೆ ಅಡೆತಡೆಗಳನ್ನು ನಿವಾರಿಸಲು ಸಹಾಯವಾಗುತ್ತದೆ ಎಂದು ತಂತ್ರಿ ಹೇಳಿದ್ದಾನೆ.

ಮೂರ್ಖತನದ ಪರಮಾವಧಿ ಎಂದರೂ ತಪ್ಪಾಗಲಾರದು. ವೃತ್ತಿಯಲ್ಲಿ ಶಿಕ್ಷಕನಾಗಿ ಜ್ಞಾನದ ಬೆಳಕನ್ನು ಪಸರಿಸಬೇಕಾದ ಶಿಕ್ಷಕ ಮೂಢನಂಬಿಕೆಯನ್ನು ಅನುಸರಿಸಿ ಶಿಕ್ಷಕ 2ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.

ತಂತ್ರಿಯ ಮಾತನ್ನು ನಂಬಿ ಬಾಲಿಕಿಯ ಮೇಲೆ ದೌರ್ಜನ್ಯ ವೆಸಗಿ ಆಕೆಯ ಖಾಸಗಿ ಅಂಗದಿಂದ ಬಂದ ರಕ್ತವನ್ನು ತಂದಿದ್ದಾನೆ. ಈ ವಿಷಯ ಬೆಳಕಿಗೆ ಬಂದಿದ್ದು, ಶಿಕ್ಷಕನನ್ನು ಕಳೆದ ವಾರ ಬಂಧಿಸಲಾಗಿದೆ.

ತಂತ್ರಿಯನ್ನೂ ಕೂಡ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೆಲವೊಮ್ಮೆ ಯಾರೋ ಹೇಳಿದ ಮಾತನ್ನು ಕಣ್ಣು ಮುಚ್ಚಿ ನಂಬಿ ಅವಾಂತರ ಮಾಡಿಕೊಳ್ಳುವ ಬದಲು ಸತ್ಯಾಸತ್ಯತೆಯ ಬಗ್ಗೆ ಪರಾಮರ್ಶೆ ನಡೆಸುವುದು ಉತ್ತಮ.

Leave A Reply

Your email address will not be published.