ರಾಜ್ಯವೇ ಬೆಚ್ಚಿ ಬೀಳಿಸೋ ಘಟನೆ | ದೇವಸ್ಥಾನಕ್ಕೆ ಹೋದ ವಿದ್ಯಾರ್ಥಿಯನ್ನು ಎಳೆದೊಯ್ದ ಚಿರತೆ | ವಿದ್ಯಾರ್ಥಿ ಸಾವು!!!

ಮನುಷ್ಯನ ಪ್ರಾಣ ಪಕ್ಷಿ ಯಾವ ರೀತಿ ಹೇಗೆ ಹಾರಿ ಹೋಗುತ್ತೆ ಅನ್ನೋದು ಊಹಿಸೋಕೆ ಆಗಲ್ಲ. ಹೌದು
ದೇವಸ್ಥಾನಕ್ಕೆ ಹೋಗಿದ್ದ ಯುವಕನೋರ್ವ ಚಿರತೆ ದಾಳಿಗೆ ಬಲಿಯಾದ ಘಟನೆ ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದಲ್ಲಿ ನಡೆದಿದೆ.

 

ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಬೆಟ್ಟದ ಮೇಲಿದ್ದು, ಕಲ್ಲು ಬಂಡೆಗಳ ನಡುವೆ ಹಾದು ಹೋಗಬೇಕು. ಈ ವೇಳೆ ಹೊಂಚು ಹಾಕಿದ್ದ ಚಿರತೆ ಯುವಕನ ಕುತ್ತಿಗೆಯನ್ನು ಹಿಡಿದು ಎಳೆದುಕೊಂಡು ಹೋಗಿದೆ. ನಂತರ ಸ್ವಲ್ಪ ದೂರದಲ್ಲಿ ಬಿಟ್ಟು ಹೋಗಿದೆ. ಅಷ್ಟರಲ್ಲೇ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ದೇವಾಲಯಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಈ ವಿಷಯವನ್ನು ಮನೆಯವರಿಗೆ ಮುಟ್ಟಿಸಿದ್ದಾರೆ ಎನ್ನಲಾಗಿದೆ.

ಚಿರತೆ ದಾಳಿಗೆ ಒಳಗಾದ ಯುವಕ ನರಸೀಪುರ ತಾಲೂಕಿನ ಹುಂಡಿ ಗ್ರಾಮದ ಮಂಜುನಾಥ್ (20) ಎಂದು ಗುರುತಿಸಲಾಗಿದೆ. ಮೈಸೂರಿನಲ್ಲಿ ಪದವಿ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ ಇಂದು ಮಲ್ಲಿಕಾರ್ಜುನ ದೇವಾಲಯಕ್ಕೆ ತೆರಳುವ ವೇಳೆ ಚಿರತೆ ದಾಳಿ ನಡೆಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

Leave A Reply

Your email address will not be published.