ಮದುವೆಯಾಗಿ ಹಲವು ವರ್ಷಗಳಾದರೂ ಪ್ರೀತಿ ಮಾಸದಿರಲು ಇಲ್ಲಿದೆ ಕೆಲವೊಂದು ಲವ್ ಟಿಪ್ಸ್ !!!
ಮದುವೆ ಅನ್ನೋದು ಒಂದು ಪ್ರೀತಿಯ ಸಂಕೇತ ಆಗಿದೆ. ಗಂಡು ಹೆಣ್ಣು ಸದಾಕಾಲ ಜೊತೆಗಿದ್ದು ಪ್ರೀತಿಯಿಂದ ಜೀವನ ನಡೆಸುವುದು ಕೆಲವರಿಗೆ ಕಷ್ಟ, ಇನ್ನು ಕೆಲವರಿಗೆ ಇಷ್ಟ. ಈ ಇಷ್ಟ ಕಷ್ಟಗಳ ನಡುವೆ ಹೇಗಿರಬೇಕು ಅನ್ನೋದು ಕೆಲವರಿಗೆ ಪ್ರಶ್ನೆಯಾಗಿ ಉಳಿದಿರಬಹುದು.
ಮದುವೆಯಾದ ಆರಂಭದಲ್ಲಿ ಲವ್, ರೊಮ್ಯಾನ್ಸ್ ಎಲ್ಲಾ ಇರುತ್ತೆ , ಆದ್ರೆ ಈವಾಗ ಎನೂ ಇಲ್ಲ…. ಅವ್ರೂ ಫುಲ್ ಬ್ಯುಸಿ, ನಾನು ಕೂಡ ಕೆಲಸ, ಮಕ್ಕಳು, ಮನೆ ಅಂತಾ ಬ್ಯುಸಿಯಾಗಿದ್ದೇನೆ…. ಇದು ನಮ್ಮಲ್ಲಿ ಹೆಚ್ಚಿನ ಜನ ಹೇಳುವಂತಹ ಮಾತಾಗಿರುತ್ತೆ.
ಹಾಗಿದ್ದರೆ ಇಲ್ಲಿದೆ ಉತ್ತರ. ಹೌದು ಮದುವೆ ನಂತರ ಜೀವನ ಎಲ್ಲಾ ಖುಷಿಯಾಗಿ ಇರಲು ಕೆಲವೊಂದು ಸಲಹೆ ಇಲ್ಲಿದೆ. ಅಂದರೆ ಮದುವೆಯಾಗಿ ಒಂದು ವರ್ಷ ಎಲ್ಲವೂ ಚೆನ್ನಾಗಿಯೇ ಇರುತ್ತೆ. ಆದರೆ ಸಮಯ ಕಳೆದಂತೆ ಅನೇಕ ಜನರು ಮದುವೆಯಿಂದ ಬೇಸರಗೊಳ್ಳುತ್ತಾರೆ. ಮದುವೆಯ ನಂತರದ ಜೀವನವು ನಿಜವಾಗಿಯೂ ಅಷ್ಟು ಸುಲಭವಲ್ಲ. ಆದರೆ ಸುಲಭ ಮಾಡಿಕೊಳ್ಳುವ ಬುದ್ಧಿವಂತಿಕೆ ನಮ್ಮಲ್ಲಿ ಇರಬೇಕು.
ಇಬ್ಬರೂ ಜೊತೆಯಾಗಿ ಸಮಯ ಕಳೆದಂತೆಲ್ಲಾ, ಇಬ್ಬರ ನಡುವಿನ ಪ್ರೀತಿ, ಬಾಂಧವ್ಯ, ಅನ್ಯೋನ್ಯತೆ ಹೆಚ್ಚಾಗಬೇಕೆ ವಿನಃ… ಈ ಕೆಲಸ, ಮನೆ, ಮಕ್ಕಳ, ವಿಚಾರದಿಂದಾಗಿ ಆ ಪ್ರೀತಿ ಕಡಿಮೆಯಾಗಬಾರದು. ಇಲ್ಲಿ ಹಿರಿಯ ದಂಪತಿಗಳೊಬ್ಬರು ತಮ್ಮ ದೀರ್ಘ ಕಾಲದ ವೈವಾಹಿಕ ಜೀವನದ ಅನ್ಯೋನ್ಯತೆಯ ಗುಟ್ಟು ಏನು ಎಂಬುದನ್ನು ತಿಳಿಸಿದ್ದಾರೆ. ಅವುಗಳನ್ನು ನೀವು ತಿಳಿದು ಅದರಂತೆ ನಡೆದರೆ, ಖಂಡಿತವಾಗಿಯೂ ನಿಮ್ಮ ಮ್ಯಾರೀಡ್ ಲೈಫ್ ಐದು, ಹತ್ತಲ್ಲ, ಎಷ್ಟು ವರ್ಷ ಕಳೆದರೂ ಚೆನ್ನಾಗಿರುತ್ತೆ.
• ಸಂಬಂಧ ದೀರ್ಘ ಕಾಲ ಚೆನ್ನಾಗಿರಬೇಕು ಎಂದಾದರೆ ನೀವು ಮೊದಲು ಮಾಡಬೇಕಾದ್ದು, ನಿಮ್ಮ ಸಂಗಾತಿಗೆ ಸಮಯ ಕಳೆಯೋದು. ಹೌದು, ಸಂಗಾತಿಗೆ ಸಮಯ ನೀಡಿದಾಗ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಾಧ್ಯವಾಗುತ್ತೆ. ಅದೆಷ್ಟೇ ಬಿಜಿಯಾಗಿದ್ದರೂ, ದಿನದಲ್ಲಿ ಒಂದಿಷ್ಟು ಸಮಯ ಅವರಿಗಾಗಿ ಮೀಸಲಿಟ್ಟರೆ, ಅದಕ್ಕಿಂತ ಉತ್ತಮವಾದುದು ಬೇರೊಂದಿರೋದಿಲ್ಲ.
• ನೀವು ವಿವಾಹಿತರಾಗಿದ್ದರೆ ಅಥವಾ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ರೆ, ನಿಮ್ಮ ಸಂಗಾತಿಯೊಂದಿಗೆ ದಿನದಲ್ಲಿ ಒಂದು ಬಾರಿಯಾದರೂ ಜೊತೆಯಾಗಿ ಆಹಾರ ಸೇವಿಸಿ. ಒಂದೇ ತಟ್ಟೆಯಲ್ಲಿ ಪ್ರೀತಿಯಿಂದ ಆಹಾರ ಬಡಿಸಿ ಮತ್ತು ಅದನ್ನು ಇಬ್ಬರೂ ಜೊತೆಯಾಗಿ ತಿನ್ನಿ. ಇದು ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯನ್ನು ತುಂಬುವಂತೆ ಮಾಡುತ್ತೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚುತ್ತದೆ. ಸಂಬಂಧ ಸುಮಧುರವಾಗಿರುತ್ತೆ.
• ಕೆಲವೊಮ್ಮೆ ಮೌನವಾಗಿರೋದೆ ಬೆಸ್ಟ್
ಈ ಸಂಬಂಧದ ಸಲಹೆಗಳನ್ನು ಉತ್ತಮ ಅನುಭವಿ ವಿವಾಹಿತ ದಂಪತಿಗಳು ಮಾತ್ರ ನೀಡಬಹುದು. ವೈವಾಹಿಕ ಜೀವನದಲ್ಲಿ ಚರ್ಚೆ ಮತ್ತು ಅಶಾಂತಿಯನ್ನು ತಪ್ಪಿಸಲು ನೀವು ಬಯಸಿದರೆ, ನೀವು ಈ ನಿಯಮವನ್ನು ಅನುಸರಿಸಬೇಕು. ಕೆಲವೊಮ್ಮೆ ನಾವು ಕೆಲವೊಂದು ವಿಷ್ಯ, ಘಟನೆಗಳನ್ನು ಅವಾಯ್ಡ್ ಮಾಡಬೇಕು. ಮತ್ತು ಕೆಲವೊಮ್ಮೆ ನಾವು ಸ್ವತಃ ಮೌನವಾಗಿರಬೇಕು. ಹೀಗೆ ಮಾಡೋದರಿಂದ ಯಾವುದೇ ಜಗಳವೂ ಹೆಚ್ಚಾಗೋದಿಲ್ಲ.
• ಮದುವೆದಿನ ಜೊತೆಯಾಗಿ ಇರುತ್ತೇವೆ ಎಂದು ಕೈ ಹಿಡಿದಿದ್ದೀರಿ ಅಲ್ವಾ? ಇವತ್ತೂ ಕೂಡ ಅದನ್ನೇ ಮುಂದುವರೆಸಿ, ಆಗ ಮಾತ್ರ ಸಂಬಂಧದಲ್ಲಿ ಆ ಶಕ್ತಿ ಇರುತ್ತದೆ. ಮನೆಯಲ್ಲಿ ನಡೆಯುವಾಗ ಅಥವಾ ರಸ್ತೆಯಲ್ಲಿ ಹೊರಗೆ ಹೋಗುವಾಗ… ನಿಮ್ಮ ಸಂಗಾತಿಯ ಕೈಯನ್ನು ಎಲ್ಲಿಯೂ ಹಿಡಿಯಲು ಹಿಂಜರಿಯಬೇಡಿ . ಅಂತಹ ಒಂದು ಕ್ಷಣ ಬಂದಾಗ, ಕೈಕೈ ಹಿಡಿದು ನಡೆಯಿರಿ.
• ಕ್ಷಮಿಸಿ ಅಥವಾ ಕ್ಷಮೆಯಾಚಿಸುವುದು ಯಾರ ಗೌರವವನ್ನು ಕಡಿಮೆ ಮಾಡೋದಿಲ್ಲ. ಬದಲಾಗಿ, ಇದು ಸಂಬಂಧದ ಆಯಸ್ಸನ್ನು ಹೆಚ್ಚಿಸುತ್ತದೆ. ಏಕೆಂದರೆ ನಾವು ಸಾರಿ ಕೇಳಿದಾಗ ನಮ್ಮೊಳಗಿನ ಅಹಂಕಾರ ಅಥವಾ ಅಹಂ ಭಾವ ಸಂಪೂರ್ಣವಾಗಿ ಕುಸಿದು ಹೋಗುತ್ತೆ. ಆದ್ದರಿಂದ ಸಂಗಾತಿಗೆ ಕ್ಷಮೆಯಾಚಿಸಲು ಎಂದಿಗೂ ಹಿಂಜರಿಯಬೇಡಿ. ಅವರು ಯಾವಾಗಲೂ ಮೊದಲು ಸಾರಿ ಕೇಳಲಿ ಎಂದು, ಕಾಯಬೇಡಿ, ನೀವೆ ಸಾರಿ ಕೇಳಿಬಿಡಿ.
• ಭರವಸೆಯ ಮತ್ತು ವಿಶ್ವಾಸದ ಆಧಾರದ ಮೇಲೆ ಸಂಬಂಧ ಉಳಿಯುತ್ತೆ. ಇದು ಸಂಬಂಧದ ಅಡಿಪಾಯವಾಗಿದೆ. ನಾವು ಅದನ್ನು ನಮ್ಮ ಜೀವನದುದ್ದಕ್ಕೂ ದೃಢವಾಗಿ ಇಟ್ಟುಕೊಳ್ಳಬೇಕು, ಆಗ ಮಾತ್ರ ಸಂಬಂಧವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತೆ. ಆದ್ದರಿಂದ ಯಾವಾಗಲೂ ನಿಮ್ಮ ಸಂಗಾತಿಗೆ ಭರವಸೆ ನೀಡಿ. ಒಬ್ಬರಿಗೊಬ್ಬರು ಭರವಸೆ ನೀಡಿದರೆ ಆ ದಂಪತಿಗಳು ಸುಖವಾಗಿ ಬಾಳುತ್ತಾರೆ.
ಈ ರೀತಿಯಾಗಿ ಒಬ್ಬರಿಗೊಬ್ಬರು ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಖುಷಿಯಿಂದ ಬಾಳಬಹುದು.