PF : ಪಿಎಫ್ ಸದಸ್ಯರಿಗೆ ಭರ್ಜರಿ ಗುಡ್ ನ್ಯೂಸ್ | ನಿವೃತ್ತಿಯ 6 ತಿಂಗಳ ಮೊದಲೇ ಪಿಂಚಣಿ ಹಣ ಪಡೆಯಿರಿ!!!

ಭವಿಷ್ಯ ನಿಧಿ ಯೋಜನೆಯ ನೀತಿಗಳು ಬದಲಾಗಿದ್ದು, ನಿವೃತ್ತಿ ಅಂಚಿನಲ್ಲಿರುವ ನೌಕರರಿಗೂ ಪಿಂಚಣಿ ಹಣ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

 

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಅನುಸಾರ ಕೆಲಸ ನೀಡಿರುವ ಉದ್ಯೋಗದಾತ ನಿರ್ದಿಷ್ಟ ಮೊತ್ತದ ಹಣವನ್ನು ತನ್ನ ವಂತಿಗೆಯಾಗಿ ಭರಿಸಲಾಗುತ್ತದೆ. ಉದ್ಯೋಗಿಯ ವಂತಿಗೆಗೆ ಸಮನಾದ ಮೊತ್ತದ ವಂತಿಗೆಯನ್ನು ಉದ್ಯೋಗದಾತ ಇಪಿಎಫ್ ಖಾತೆಗೆ ಸಲ್ಲಿಸಬೇಕಾಗಿದ್ದು,ಈ ಎರಡೂ ಮೊತ್ತಗಳಿಗೆ ಸರಕಾರ ತಾನು ನಿಗದಿಪಡಿಸಿದ ಬಡ್ಡಿಯನ್ನು ನೀಡುತ್ತದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಚಂದಾದಾರರಿಗೆ ಇ-ನಾಮನಿರ್ದೇಶನವನ್ನು ಕಡ್ಡಾಯಗೊಳಿಸಿತ್ತು.

ಇದರ ನಡುವೆ ನಿವೃತ್ತಿಯ ಅಂಚಿನಲ್ಲಿರುವ ನೌಕರರಿಗೆ ಪಿಂಚಣಿ ನಿಧಿ ಸಂಘಟನೆಯು (ಇಪಿಎಫ್​ಒ) ಸಿಹಿ ಸುದ್ದಿ ನೀಡಿದೆ. ನೌಕರರ ಪಿಂಚಣಿ ಯೋಜನೆ 1995ಕ್ಕೆ ತಿದ್ದುಪಡಿ ತರಲಾಗಿದ್ದು, ನಿವೃತ್ತಿಗೆ 6 ತಿಂಗಳಿಗಿಂತ ಕಡಿಮೆ ಇದ್ದಲ್ಲಿ ಅವರು ಭವಿಷ್ಯ ನಿಧಿ ಖಾತೆಯಲ್ಲಿರುವ ಠೇವಣಿ ಪಡೆಯಲು ಅನುಮತಿ ನೀಡಿದೆ.

ಇಪಿಎಫ್‌ಒದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳು (ಸಿಬಿಟಿ) ಇಪಿಎಸ್ 95 ಯೋಜನೆಗೆ ಮಾಡಿರುವ ತಿದ್ದುಪಡಿಗಳನ್ನು ಸರ್ಕಾರಕ್ಕೆ ಆದೇಶ ನೀಡಿದೆ.

ಇದರಲ್ಲಿ ಪ್ರಮುಖವಾಗಿ ಯಾವುದೇ ಕಂಪನಿಯಲ್ಲಿ ಕೆಲಸ ಮಾಡುವ ನೌಕರರು ನಿವೃತ್ತಿಗೆ 6 ತಿಂಗಳ ಅವಧಿ ಉಳಿದಿರುವಾಗ ಇಪಿಎಸ್​ ಖಾತೆಯಲ್ಲಿ ಠೇವಣಿ ಇರುವ ಹಣವನ್ನು ಪಡೆಯಲು ಅವಕಾಶ ಕಲ್ಪಿಸುವ ಕುರಿತು ಪ್ರಸ್ತಾಪ ಮಾಡಲಾಗಿದೆ.

ಈ ಮೊದಲು ನಿವೃತ್ತಿಯ ಬಳಿಕ ಮಾತ್ರ ಪಡೆಯಲು ಅವಕಾಶವಿದ್ದ ಇಪಿಎಫ್​ ಹಣವನ್ನು ನಿವೃತ್ತಿಗೆ 6 ತಿಂಗಳು ಮೊದಲೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಬಗ್ಗೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಸಂಸತ್ತಿನಲ್ಲಿ ಮಂಡಿಸಲು ಇಪಿಎಫ್​ಒ ಸಂಘಟನೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. 34 ವರ್ಷಗಳಿಂದ ಭವಿಷ್ಯ ನಿಧಿ ಯೋಜನೆ ಬಳಕೆ ಮಾಡುತ್ತಿರುವ ಸದಸ್ಯರಿಗೆ ಅನುಪಾತದ ಆಧಾರದ ಮೇಲೆ ಪಿಂಚಣಿ ಪ್ರಯೋಜನಗಳನ್ನು ನೀಡಬೇಕು ಎಂದು ಶಿಫಾರಸಿನಲ್ಲಿ ಉಲ್ಲೇಖಿಸಲಾಗಿದೆ.

ಇಪಿಎಫ್​ಒ ಸಂಘಟನೆಯ ಈ ನಿರ್ಧಾರದ ಫಲವಾಗಿ, ಆರೂವರೆ ಕೋಟಿ ಪಿಂಚಣಿದಾರರಿಗೆ ಇದರ ಪ್ರಯೋಜನ ದೊರೆಯಲಿದೆ.

Leave A Reply

Your email address will not be published.