ಸಭೆಯಲ್ಲಿ ಪಾಲ್ಗೊಂಡ ಒಂದೇ ಹೆಸರಿನ 178 ಜನರು | ಗಿನ್ನಿಸ್ ದಾಖಲೆಗೆ ಪಾತ್ರರಾದರು ‘ಹಿರೋಕಾಜು ತನಕಾ’

ಸಾಮಾನ್ಯವಾಗಿ ಒಂದೇ ರೀತಿಯ ಏಳು ಜನರು ಇರುತ್ತಾರೆ ಎಂಬುದನ್ನು ಕೇಳಿದ್ದೇವೆ. ಆದ್ರೆ, ಎಲ್ಲರನ್ನೂ ಒಟ್ಟಿಗೆ ಕಾಣಿರುವುದು ಕಡಿಮೆ. ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಜೊತೆಗಿರುವಾಗಲೇ ಯಾರನ್ನು ಕರೆಯುತ್ತಿರುವುದು ಎಂದು ಗೊಂದಲ ಪಡುವ ಜನರಿದ್ದಾರೆ. ಆದ್ರೆ, ಇಲ್ಲೊಂದು ಕಡೆ ಒಂದೇ ಹೆಸರಿನ 178 ಜನರು ಒಂದೇ ಕಡೆ ಸೇರಿದ್ದಾರೆ. ಅಷ್ಟೇ ಅಲ್ಲದೆ ಗಿನ್ನಿಸ್ ದಾಖಲೆಯನ್ನೂ ಮಾಡಿದ್ದಾರೆ.

 

ಇಂತಹದೊಂದು ಅಪರೂಪದ ದಾಖಲೆ ಟೋಕಿಯೊದ ಶಿಬುಯಾ ಜಿಲ್ಲೆಯ ಸಭಾಂಗಣದಲ್ಲಿ ನಡೆದಿದೆ. ಅಷ್ಟಕ್ಕೂ ಈ ಸಭೆಗೆ ಮತ್ತಷ್ಟು ಕಲೆ ತುಂಬಿದ್ದೇ ‘ಹಿರೋಕಾಜು ತನಕಾ’ರವರು. ಇವರ್ಯಾರು ಅಂದ್ರೆ ಇವರು ಒಬ್ಬರಲ್ಲ, ‘ಹಿರೋಕಾಜು ತನಕಾ’ ಎಂದು ಕರೆಯಲ್ಪಡುವ 178 ಜನರು.

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವಿಡಿಯೋವನ್ನು ಜಪಾನ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತೀರ್ಪುಗಾರರು ಹೊಸ ದಾಖಲೆ ಎಂದು ಘೋಷಿಸಿದ ನಂತರ ಜನರು ಚಪ್ಪಾಳೆ ತಟ್ಟುತ್ತಿರುವುದನ್ನು ಕಾಣಬಹುದು.

ಟೋಕಿಯೊದ ಕಾರ್ಪೊರೇಟ್ ಉದ್ಯೋಗಿ ಹಿರೋಕಾಜು ಇಂತಹದೊಂದು ದಾಖಲೆ ಪಡೆಯಲು ಸತತ ಪ್ರಯತ್ನ ನಡೆಸುತ್ತಿದ್ದರು. ಇದೀಗ ಮೂರನೇ ಪ್ರಯತ್ನದಲ್ಲಿ ಈ ದಾಖಲೆ ಸಾಧಿಸಲು ಯಶಸ್ವಿಯಾಗಿದ್ದಾರೆ. “ಹಿರೋಕಾಜು ತನಕಾ” ಅಭಿಯಾನ ಆರಂಭಿಸಿದ ಅವರು, ಎಲ್ಲರನ್ನೂ ಒಟ್ಟುಗೂಡಿಸಲು ಸಾಕಷ್ಟು ಬೆವರು ಹರಿಸಿದ್ದರು‌. “ನಾವು ಇಂತಹ ಹಾಸ್ಯಾಸ್ಪದ ದಾಖಲೆಯನ್ನು ಸಾಧಿಸುತ್ತೇವೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ,” ಎಂದು ಅವರು ಹೇಳಿದ್ದಾರೆ.

ದಾಖಲೆಯಲ್ಲಿ ಭಾಗವಹಿಸಿದವರ ಹೆಸರು ಒಂದೇ ಆಗಿದ್ದರು ಸಭೆಯಲ್ಲಿ ಇದ್ದವರ ವರ್ಗಗಳು ಮಾತ್ರ ಬೇರೆ. ವಿಯೆಟ್ನಾಂನ ಹನೋಯಿಯಿಂದ ಜಪಾನ್‌ಗೆ ತೆರಳಿದ್ದ ಮೂರು ವರ್ಷದ ಅಂಬೆಗಾಲಿಡುವ ಮಗು ಸೇರಿದಂತೆ 80 ವರ್ಷದ ವೃದ್ಧರೂ ಅಲ್ಲಿ ಇದ್ದರು. ಇಂತಹದ್ದೇ ದಾಖಲೆಯನ್ನು ಈ ಹಿಂದೆ 2005 ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾರ್ಥಾ ಸ್ಟೀವರ್ಟ್ಸ್ ಎಂಬ ಹೆಸರಿನ 164 ಜನರು ಈ ದಾಖಲೆ ಮಾಡಿದ್ದಾರೆ.

Leave A Reply

Your email address will not be published.