ಖಗ್ರಾಸ ಚಂದ್ರಗ್ರಹಣ : ಧರ್ಮಸ್ಥಳ – ದರ್ಶನದ ಸಮಯದಲ್ಲಿ ಬದಲಾವಣೆ!!!
ಮೊನ್ನೆಯಷ್ಟೇ ಸೂರ್ಯಗ್ರಹಣ ನಡೆದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಖಗ್ರಾಸ ಚಂದ್ರ ಗ್ರಹಣ ಸಂಭವಿಸಲಿದೆ.
ಸಾಮಾನ್ಯವಾಗಿ ಗ್ರಹಣ ಸಮಯದಲ್ಲಿ ದೇವಾಲಯ ಇಲ್ಲವೇ ಯಾವುದೇ ದೈವಿಕ ಆಚರಣೆ ನಡೆಸುವುದಿಲ್ಲ. ಗ್ರಹಣ ಮುಗಿದ ಬಳಿಕ ಶುಚಿ ಕಾರ್ಯ ನಡೆಸಿ ಪೂಜೆ ಪುನಸ್ಕಾರ ನಡೆಸುವುದು ವಾಡಿಕೆ.
ಸೂರ್ಯಗ್ರಹಣದ ಬಳಿಕ ಇದೀಗ ನ.8 ರಂದು ಮಂಗಳವಾರ ಸಂಭವಿಸಲಿರುವ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ ಇರುವುದರಿಂದ ಅಂದು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಧ್ಯಾಹ್ನ 01.30 ರಿಂದ ರಾತ್ರಿ 7 ಗಂಟೆಯವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ಮತ್ತು ಯಾವುದೇ ಪೂಜೆಗೆ ಅವಕಾಶ ದೊರೆಯುವುದಿಲ್ಲ.
ಅಂದು ಮಧ್ಯಾಹ್ನ 1.30 ರವರೆಗೆ ಭೋಜನಾ ವ್ಯವಸ್ಥೆ ಇರಲಿದ್ದು ಇದರ ಬಳಿಕ ಸಂಜೆ 7 ರ ಬಳಿಕ ಅನ್ನಪೂರ್ಣ ಅನ್ನಛತ್ರದಲ್ಲಿ ಭೋಜನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಹಾಗಾಗಿ, ಊರಿನ ಹಾಗೂ ದೂರದ ಊರಿಂದ ಆಗಮಿಸುವ ಭಕ್ತರು ಈ ಕುರಿತು ದೇವರ ದರ್ಶನದ ಸಮಯ ಬದಲಾವಣೆಯನ್ನು ತಿಳಿದುಕೊಂಡು ದೇವರ ದರ್ಶನ ಮಾಡುವುದು ಒಳ್ಳೆಯದು.