ದ.ಕ.ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ರವಿಕುಮಾರ್ ಎಂ.ಆರ್ ನೇಮಕ!!!

ದ.ಕ.ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ರವಿಕುಮಾರ್ ಎಂ.ಆರ್. ಅವರನ್ನು ನೇಮಕಗೊಳಿಸಲಾಗಿದೆ ಎಂದು ಅ.31 ರಂದು ರಾಜ್ಯ ಸರಕಾರವು ಆದೇಶವನ್ನು ಹೊರಡಿಸಿದೆ. ಹಿಂದೆ ದಕ್ಷ ಆಡಳಿತ ಜಿಲ್ಲಾಧಿಕಾರಿಯಾಗಿದ್ದ ಡಾ.ರಾಜೇಂದ್ರ ಕೆ.ವಿ ಇವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಡಾ. ರಾಜೇಂದ್ರ ಕೆ.ವಿ ವರ್ಗಾಣೆಯ ಬಳಿಕ ದ. ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಡಾ. ಕುಮಾರ್ ಅವರನ್ನು ಪ್ರಭಾರ ಜಿಲ್ಲಾಧಿಕಾರಿಯಾಗಿ ಜವಾಬ್ದಾರಿ ನೀಡಲಾಗಿತ್ತು. ಕುಮಾರ್ ಅವರು ದಾಖಲಾ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿದ ಮೂರು ದಿನದ ಒಳಗೆ ಜವಾಬ್ದಾರಿಯನ್ನು ರವಿಕುಮಾರ್ ಎಂ ಆರ್ ಅವರಿಗೆ ಹಸ್ತಾಂತರಿಸಿ ಸರಕಾರ ಆದೇಶವನ್ನು ಹೊರಡಿಸಿದೆ.


Ad Widget

ರವಿಕುಮಾರ್ ಅವರು 2012ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದರು. ಸಿಲ್ಕ್ ಮಾರ್ಕೇಟಿಂಗ್ ಬೋರ್ಡ್ ನ ಎಂಡಿ ಯಾಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ರಾಜೀವ್ ಗಾಂಧಿ ಆರೋಗ್ಯ ವಿವಿಯ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ದ.ಕ ಜಿಲ್ಲಾಧಿಕರಿಯಾಗಿ ನೇಮಿಸಿ ಬೆಂಗಳೂರಿನಿಂದ ವರ್ಗಾವಣೆಗೊಳಿಸಲಾಗಿದೆ.

Ad Widget

Ad Widget

Ad Widget
error: Content is protected !!
Scroll to Top
%d bloggers like this: