ನಿತ್ಯವೂ ನಡೆಯುತ್ತೆ ಈ ದೇಗುಲದಲ್ಲಿ ಕನ್ನಡದ ಆರಾಧನೆ | ಬನ್ನಿ ತಿಳಿಯೋಣ ‘ಕನ್ನಡ ರಾಮ’ ನ ವಿಶೇಷತೆ!!!

ಕನ್ನಡವೆಂದರೆ ಕುಣಿದಾಡುವುದೆನ್ನೆದೆ… ಕನ್ನಡವೇ ಸತ್ಯ…ಕನ್ನಡವೇ ನಿತ್ಯ….ಕನ್ನಡವೆಂದರೆ ಬರೀ ಭಾಷೆಯಲ್ಲ. ಅದು ಕನ್ನಡಿಗರಿಗೆ ರಸದೌತಣ ಉಣಬಡಿಸುವ ಸುಂದರ ನುಡಿ. ಜಲವೆಂದರೆ ಕೇವಲ ನೀರಲ್ಲ.. ಅದು ಪಾವನದ ತೀರ್ಥ..ಅನ್ನೋ ಕವಿವಾಣಿಗೆ ನಿದರ್ಶನ ಎಂಬಂತೆ ಅಪರೂಪದ ದೇವಾಲಯವೊಂದು ಕನ್ನಡದ ಹಿರಿಮೆಯನ್ನು ಪಸರಿಸುತ್ತಿದೆ.

 

ಇಲ್ಲಿ ನಿತ್ಯವೂ ಕನ್ನಡವೇ ಉಸಿರು..ದಿನನಿತ್ಯವೂ ಬರೋ ಭಕ್ತರ ಕಿವಿ ಪಾವನ ಗೊಳಿಸುವ ಕನ್ನಡದ ಮಂತ್ರ ಘೋಷ, ಕನ್ನಡದಿಂದಲೇ ವರ್ಷವೆಲ್ಲ ಪೂಜೆ ಪಡೆಯೋ ರಾಮನ ಅಪರೂಪದ ದೇಗುಲವಿದಾಗಿದೆ.

ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ರಾಮನ ದೇವಾಲಯ ಎಂದೇ ಕರೆಯಲ್ಪಡುವ ಕೊದಂಡರಾಮಚಂದ್ರನ ವಿಶೇಷ ದೇವಾಲಯವಾಗಿದೆ .ಕಾಫಿನಾಡಿನ ಹಿರೇಮಗಳೂರಿನಲ್ಲಿ ಪ್ರತಿಷ್ಠಾಪಿಲ್ಪಟ್ಟ ಈ ವಿಶೇಷ ಕೊದಂಡ ರಾಮಚಂದ್ರ ದೇವಾಲಯಕ್ಕೆ ಸಾವಿರಾರು ವರ್ಷದ ಇತಿಹಾಸದ ಕುರುಹನ್ನು ಒಳಗೊಂಡಿದೆ. ಅದರಲ್ಲಿಯೂ 4 ದಶಕಗಳಿಂದ ಇಲ್ಲಿ ನಿತ್ಯವೂ ಕನ್ನಡದ ಕಂಪನ್ನು ಬೀರಿ ಕನ್ನಡ ಭಾಷೆಯ ಶ್ರೀಮಂತಿಕೆ ಯನ್ನು ಎಲ್ಲೆಡೆ ಪಸರಿಸುವ ಉತ್ತಮ ಕಾರ್ಯ ನಡೆಯುತ್ತಿದೆ.

ಇಂದಿನ ದಿನಗಳಲ್ಲಿ ಎಲ್ಲರೂ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೇ ಮಾಡುತ್ತಿರುವ ನಡುವೆಯು ಕೂಡ ಈ ದೇವಾಲಯ ಸದ್ದಿಲ್ಲದೆ , ಯಾವುದೇ ಆಡಂಬರದ ನಾಟಕಕ್ಕೆ ಕಾರಣವಾಗದೆ, ಸಹಜವಾಗಿ ಕನ್ನಡ ಭಾಷೆಯ ಉಳಿವಿನ ಕಡೆಗೆ ಗಮನ ಹರಿಸಿ ಮಹತ್ ಕಾರ್ಯದಲ್ಲಿ ತೊಡಗಿಸಿಕೊಂಡಿದೆ .

ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯೇ ಕಲೆ, ಸಾಹಿತ್ಯ, ಸಾಂಸ್ಕೃತಿಕತೆಗೆ ಹೆಸರು ಪಡೆದಿದ್ದು, ಇದರ ಜೊತೆಗೆ ಕನ್ನಡದಿಂದಲೇ ಪೂಜೆ ಪಡೆಯೋ ಕೊದಂಡರಾಮಚಂದ್ರಸ್ವಾಮಿ ದೇವಾಲಯ ಕರುನಾಡಿನಲ್ಲಿಯೇ ಚಿರಪರಿತವಾಗಿದೆ.

ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಕನ್ನಡ ಪೂಜೆಯನ್ನು ನಡೆಸಲಾಗುತ್ತಿದ್ದು, ಈ ವರ್ಷದಿಂದ ಹಿರೇಮಗಳೂರು ಕಣ್ಣನ್ ಕೇವಲ ದೇವಸ್ಥಾನವಲ್ಲದೆ ಮನೆ ಮನೆಗಳಲ್ಲಿಯೂ ಕನ್ನಡ ಪೂಜೆ ಮಾಡಲು ಕನ್ನಡ ಮಂತ್ರ ಕಲಿಸಲು ಮುಂದಾಗಿದ್ದಾರೆ.

ಕೊದಂಡರಾಮಚಂದ್ರಸ್ವಾಮಿಗೆ ಕೈಮುಗಿದು ಬರುವ ಭಕ್ತರಿಗೆ ಇಲ್ಲಿ ಕೇಳಿಸೋದು ಕನ್ನಡ ಮಂತ್ರಘೋಷಗಳು. ವರ್ಷಪೂರ್ತಿ ಕನ್ನಡದಿಂದಲೇ ಪೂಜೆ ಪಡೆಯೋ ರಾಜ್ಯದ ಏಕೈಕ ದೇವಾಲಯ ಎಂಬ ಹಿರಿಮೆಯ ಗರಿಯನ್ನು ಪಡೆದಿದೆ.

ಇದರ ಜೊತೆಗೆ ಕನ್ನಡ ಮಂತ್ರವನ್ನು ಬಂದಿರುವ ಭಕ್ತರು ರಾಮನ ಮುಂದೆ ಜಪಿಸುತ್ತಾರೆ. ಈಗಾಗಲೇ ಮಹಿಳಾ ಸಂಘದಿಂದ ಕನ್ನಡ ಮಂತ್ರ ಪಠಣೆ ಪ್ರಾರಂಭವಾಗಿದ್ದು, ಅವರವರ ಮನೆಯಲ್ಲಿ ಕನ್ನಡದಿಂದಲೇ ಪೂಜೆ ಸಲ್ಲಿಸಲಾಗುತ್ತಿದೆ.

ಮುಂದಿನ ವರ್ಷದೊಳಗೆ ಕಾಫಿನಾಡಲ್ಲಿ ಕನ್ನಡ ಮಂತ್ರ ಜಪ ಮನೆ ಮನೆಯಲ್ಲಿ ಮೊಳಗಲಿದೆ. ಒಟ್ಟಾರೆ ವರ್ಷಪೂರ್ತಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವಂತೆ ಪ್ರತಿ ನಿತ್ಯವೂ ಕನ್ನಡದ ಮಂತ್ರಘೋಷದೊಂದಿಗೆ ಕೊದಂಡರಾಮಚಂದ್ರಸ್ವಾಮಿಗೆ ಪೂಜೆಯನ್ನು ನಡೆಸಲಾಗುತ್ತಿದೆ.

ಕನ್ನಡವನ್ನು ಉಳಿಸಿ ಎಂದು ಭಾಷಣ ಮಾಡಿ ಮತ್ತೆ ಆದರ ಬಗ್ಗೆ ಚಿಂತನೆ ಕೂಡ ನಡೆಸದ ಜನರ ನಡುವೆ ತನ್ನ ವಿಭಿನ್ನ ನಡೆಯ ಮೂಲಕ ಈ ದೇವಾಲಯ ಕನ್ನಡದ ಹಿರಿಮೆಯನ್ನು ಎತ್ತಿ ತೋರಿಸುವ ಮೂಲಕ ಕರ್ನಾಟಕ ಸಂಸ್ಕೃತಿಯ ಪ್ರತೀಕವಾಗಿ ಕನ್ನಡದ ಉಳಿವಿಗಾಗಿ ತನ್ನ ಕಾರ್ಯ ನಡೆಸುತ್ತಿದೆ.

Leave A Reply

Your email address will not be published.