ಬಂಡೆ ಮಠ ಸ್ವಾಮಿಯ ಡೆತ್ ಪ್ರಕರಣ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಬಂಧನ!!!
ಬೆಕ್ಕಿಗೆ ಆಟ… ಇಲಿಗೆ ಪ್ರಾಣಸಂಕಟ.. ಎಂಬ ಮಾತಿನಂತೆ ಮತ್ತೊಬ್ಬರ ಜೀವನದಲ್ಲಿ ಆಟ ಆಡಲು ಹೋಗಿ..ಅವರ ಜೀವಕ್ಕೆ ಕುತ್ತು ತರುವ ಪ್ರಕರಣಗಳು ಸಾಮಾನ್ಯ… ಆದರೆ ತನ್ನ ಜನಪರ ಕಾರ್ಯಕ್ರಮಗಳ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿದ್ದ ವ್ಯಕ್ತಿಯ ಮೇಲೆ ಕಳಂಕ ತರಲು ಪ್ರಯತ್ನ ನಡೆಸುವುದು ಸರ್ವೇ ಸಾಮಾನ್ಯ…
ಸಮಾಜದಲ್ಲಿ ಗೌರವಾನ್ವಿತ ಹುದ್ದೆಯಲ್ಲಿದ್ದ ವ್ಯಕ್ತಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರ ಹೆಸರಿಗೆ ಮಸಿ ಬಳಿಯುವ ಯತ್ನವನ್ನು ನಡೆಸಿ , ಸುರಿಯುವ ಬೆಂಕಿಗೆ ತುಪ್ಪ ಹಚ್ಚಿ ತಮ್ಮ ಚಳಿ ಕಾಯಿಸಿಕೊಳ್ಳುವ ಚಾಳಿ ಅನೇಕರಿಗೆ ಇದೆ. ಇದೇ ರೀತಿಯ ಘಟನೆಯೊಂದು ಮುನ್ನಲೆಗೆ ಬಂದಿದೆ.
ಹನಿ ಟ್ರ್ಯಾಪ್ ಬಲೆಗೆ ಬಿದ್ದ ಕಂಚುಗಲ್ ಬಂಡೆ ಮಠದ ಬಸವಲಿಂಗ ಶ್ರೀಗಳು ಈಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮನ್ನು ಇದರಲ್ಲಿ ಸಿಲುಕಿಸಿದವರ ಬಗ್ಗೆ ವಿವರವನ್ನು ಬಿಚ್ಚಿಟ್ಟಿದ್ದಾರೆ.
ಶ್ರೀಗಳ ಡೆತ್ ನೋಟ್ ಬಹಿರಂಗವಾದ ಬಳಿಕ ಸ್ಫೋಟಕ ಸಂಗತಿಗಳು ಬಹಿರಂಗವಾಗುತ್ತಿದ್ದು, ಇಬ್ಬರು ಸ್ವಾಮೀಜಿಗಳು ಹಾಗೂ ಓರ್ವ ಪ್ರಭಾವಿ ನಾಯಕ ಇದರಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಾಹಿತಿ ಸದ್ದು ಮಾಡುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕೆ ಉರ್ಫ್ ಚಂದು ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಹಾಗಾಗಿ,ಅವರ ದಾಯಾದಿ ಮೃತ್ಯುಂಜಯ ಸ್ವಾಮಿ ಜೊತೆಗೆ ತುಮಕೂರಿನ ವಕೀಲ ಮಹಾದೇವಯ್ಯ ಹಾಗೂ ದೊಡ್ಡಬಳ್ಳಾಪುರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಲಾಂಬಿಕೆಯನ್ನು ಬಂಧಿಸಲಾಗಿದೆ.
ನೀಲಾಂಬಿಕೆ ತಂದೆ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಆಕೆಯ ಅಜ್ಜಿ ಮನೆ ತುಮಕೂರು ಎನ್ನಲಾಗಿದೆ. ಹೀಗಾಗಿ ರಜೆ ದಿನಗಳಲ್ಲಿ ತುಮಕೂರಿಗೆ ಬರುತ್ತಿದ್ದ ಆಕೆ, ತನ್ನ ಮಾವ ಮಠದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಸಲೀಸಾಗಿ ಪ್ರವೇಶ ಪಡೆದುಕೊಂಡಿದ್ದು, ಅಲ್ಲದೆ ಈಕೆಯ ತಂದೆ – ತಾಯಿಯೂ ಸಹ ದೈವ ಭಕ್ತರಾಗಿದ್ದ ಕಾರಣ ಮಗಳೊಂದಿಗೆ ಆಗಾಗ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸ್ವಾಮೀಜಿ ಆತ್ಮೀಯರಾಗಿದ್ದ ವೇಳೆ ಅವರಿಂದ ಹಣ ಪಡೆದುಕೊಳ್ಳಲು ತನ್ನ ಸಂಕಷ್ಟದ ಕಥೆಯನ್ನು ಹೆಣೆದಿದ್ದಾಳೆ. ಇವಳ ಯಶೋಗಾಥೆಯ ಕೇಳಿ ಮರುಗಿದ ಬಂಡೆ ಮಠದ ಸ್ವಾಮೀಜಿ ಆರಂಭದಲ್ಲಿ ಐನೂರು ರೂಪಾಯಿ, ಸಾವಿರ ರೂಪಾಯಿ ನೀಡಿದ್ದಾರೆ.
ಆಗಾಗ, ವಿಡಿಯೋ ಕಾಲ್ ಮಾಡುವ ಮೂಲಕ ಕಾಮದ ಮಾತುಗಳನ್ನಾಡಿದ್ದಾಳೆ. ಇದನ್ನು ನಿಜವೆಂದು ನಂಬಿದ ಬಂಡೆ ಮಠದ ಶ್ರೀಗಳು ವಿಡಿಯೋ ಕಾಲ್ ನಲ್ಲಿ ಅರೆಬೆತ್ತಲಾಗಿದ್ದು, ಇದನ್ನು ಆಕೆ ರೆಕಾರ್ಡ್ ಮಾಡಿಕೊಂಡಿದ್ದಾಳೆ . ಇದೇ ವಿಡಿಯೋದಿಂದ ಸ್ವಾಮೀಜಿಗೆ ಬ್ಲಾಕ್ ಮೇಲ್ ಮಾಡಿದ್ದಾಳೆ.
ಇದು ಬಹಿರಂಗವಾದರೆ ತನ್ನ ಮರ್ಯಾದೆಯ ಜೊತೆಗೆ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ ಎಂಬ ಕಾರಣಕ್ಕೆ ಶ್ರೀಗಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತಿದ್ದು, ಈ ಪ್ರಕರಣದ ಕುರಿತಾಗಿ ತನಿಖೆಯ ಬಳಿಕವಷ್ಟೆ ಸತ್ಯಾಂಶ ಹೊರಬೀಳಬೇಕಾಗಿದೆ.