Caviar iPhone 14 Pro Max : ಅಬ್ಬಾ!!! ಒಂದು ಕೋಟಿ ಮೌಲ್ಯದ Apple ಮೊಬೈಲ್ ನ ಅದ್ಧೂರಿ ವಿನ್ಯಾಸ | ವಿಶೇಷತೆಗಳ ಆಗರ!!!

ಆ್ಯಪಲ್‌ ಮೊಬೈಲ್‌ಗಳು ತಮ್ಮದೇ ಬ್ರಾಂಡ್ ನಿರ್ಮಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಅದರ ಬೆಲೆ ದುಬಾರಿಯಾದರೂ ಕೂಡ ಅದನ್ನು ಕೊಳ್ಳುವ ಕ್ರೇಜ್ ಕಡಿಮೆಯಾಗಿಲ್ಲ.

 

Apple Mobile Phones ದುಬಾರಿ ಎನ್ನುವಾಗ, ವಜ್ರಗಳನ್ನು (Diamond) ಅಳವಡಿಸಿರುವ ಸುಂದರವಾದ ಆ್ಯಪಲ್‌ ಮೊಬೈಲ್‌ ಒಂದನ್ನು ಐಷಾರಾಮಿ ವಸ್ತುಗಳಿಗೆ ಖ್ಯಾತಿ ಹೊಂದಿರುವ ರಷ್ಯಾದ ಕೇವಿಯರ್‌ (caviar) ಕಂಪನಿ ಮಾರುಕಟ್ಟೆಗೆ ಲಗ್ಗೆ ಇಡಲು ಮುಂದಾಗಿದೆ.

ಇದರ ಬೆಲೆ ಕೇಳಿದರೆ ಬೆರಗಾಗುವುದು ಖಚಿತ. ಇದರ ಬೆಲೆ ಬರೋಬ್ಬರಿ 1 ಕೋಟಿ ರುಪಾಯಿ ಎಂದು ನಿಗದಿ ಮಾಡಲಾಗಿದೆ. ರೋಲೆಕ್ಸ್‌ ಡೆಟೋನಾ ವಾಚ್‌ಗಳ (Rolex Daytona Watch) ವಿನ್ಯಾಸ ಮಾಡಿದ್ದ ಮಾಲ್ಕಂ ಕ್ಯಾಂಪ್‌ಬೆಲ್‌ (Malcolm Campbell) ಈ ಮೊಬೈಲ್‌ನ ಹೊರ ವಿನ್ಯಾಸ ಮಾಡಿದ್ದು, ಈ ಮೊಬೈಲ್‌ನ ಹಿಂಭಾಗದಲ್ಲಿ 8 ವಜ್ರದ ಹರಳುಗಳನ್ನು ಒಳಗೊಂಡಿರುವ ರೋಲೆಕ್ಸ್‌ ಡೇಟೋನಾ ವಾಚ್‌ ಅಳವಡಿಸಲಾಗಿದೆ.

ಈ ಮಾದರಿಯ ಸೀಮಿತ ಸಂಖ್ಯೆಯ ಮೊಬೈಲ್‌ಗಳನ್ನು ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಕೇವಿಯರ್‌ ಕಂಪನಿ ಹೇಳಿಕೊಂಡಿದೆ.ಆ್ಯಪಲ್‌ ಅಧಿಕೃತ ವೆಬ್‌ಸೈಟ್‌ನಲ್ಲಿ 1 ಟಿಬಿ ಸ್ಟೋರೇಜ್‌ ಹೊಂದಿರುವ ಆ್ಯಪಲ್‌ 14 ಪ್ರೋ ಮ್ಯಾಕ್ಸ್‌ನ ಟಾಪ್‌ ಮಾಡೆಲ್‌ಗೆ 1,89,900 ರೂ. ವೆಚ್ಚ ತಗಲುತ್ತದೆ. ಇತರೆ, ಫೋನ್‌ಗಳಿಗೆ ಹೋಲಿಸಿದರೆ ಈ ಫೋನ್‌ ದರ ಹೆಚ್ಚು ಎಂದೆನಿಸಿದರೂ , ಕೇವಿಯರ್‌ ಆ್ಯಪಲ್‌ ಐಫೋನ್‌ 14 ಪ್ರೋ ಮ್ಯಾಕ್ಸ್‌ ಡೇಟೋನಾ ಮೊಬೈಲ್‌ಗೆ ಹೋಲಿಸಿದರೆ ಈ ಬೆಲೆ ತೀರಾ ಕಡಿಮೆ ಎಎನ್ನಬಹುದು.

ಏಕೆಂದರೆ, ರಷ್ಯಾದ ಲಕ್ಷುರಿ ಬ್ರ್ಯಾಂಡ್‌ ಕೇವಿಯರ್‌ನ ಆ್ಯಪಲ್‌ ಐಫೋನ್‌ 14 ಪ್ರೋ ಮ್ಯಾಕ್ಸ್‌ ಡೇಟೋನಾದ ಬೆಲೆ ಸುಮಾರು 1.1 ಕೋಟಿ ಆಗಿದೆ. iPhone 14 Pro ಗ್ರ್ಯಾಂಡ್ ಕಾಂಪ್ಲಿಕೇಶನ್ಸ್ 128GB ಸ್ಕೆಲಿಟನ್ ಬೂಸ್ಟರ್‌ನ ಮಾಡೆಲ್‌ಗಳ ಬೆಲೆ 10,320 ಡಾಲರ್‌ ನಿಂದ ಪ್ರಾರಂಭವಾಗುತ್ತದೆ. ಆದರೆ, ರೋಲೆಕ್ಸ್‌ನೊಂದಿಗೆ ಮಾಡಿಫೈ ಮಾಡಿದ ಮೊಬೈಲ್‌ ದುಬಾರಿಯಾಗಿದೆ.

ಅಂದರೆ, iPhone 14 Pro Max Grand Complications Daytona 1TB ಅನ್ನು $134,250 ಅಂದರೆ 1.1 ಕೋಟಿ ರೂ. ಗೆ ಮಾರಾಟ ಮಾಡಲಾಗುತ್ತದೆ.

ರಷ್ಯಾದ ಕೇವಿಯರ್‌ ಇತ್ತೀಚೆಗೆ ಆ್ಯಪಲ್‌ 14ನ ಇತ್ತೀಚಿನ ಮಾಡೆಲ್‌ನ ಲಿಮಿಟೆಡ್‌ ಎಡಿಷನ್‌ ಅನ್ನು ಬಿಡುಗಡೆ ಮಾಡಿತ್ತು. ಈ ಮೊಬೈಲ್‌ ಫೋನ್‌ ಸುವಾಸನೆಯ ವೈಶಿಷ್ಟ್ಯಗಳ ಜೊತೆಗೆ ರೋಲೆಕ್ಸ್‌ ವಾಚೊಂದನ್ನು ಒಳಗೊಂಡಿದೆ.

ಕೇವಿಯರ್ ಬ್ರ್ಯಾಂಡ್‌ನ ಈ ಐಫೋನ್‌ 14 ಪ್ರೋ ಮೊಬೈಲ್‌ನ ಇತ್ತೀಚಿನ ಕಲೆಕ್ಷನ್‌ ಅನ್ನು ಗ್ರ್ಯಾಂಡ್‌ ಕಾಂಪ್ಲಿಕೇಷನ್ಸ್‌ ಎಂದು ಕರೆಯಲಾಗುತ್ತದೆ. ಕೇವಿಯರರ್‌ ಬ್ರ್ಯಾಂಡ್‌ ಬಿಡುಗಡೆ ಮಾಡುವ ಪ್ರತಿ ಸ್ಮಾರ್ಟ್‌ಫೋನ್‌ ಸಂಪೂರ್ಣ ಯಾಂತ್ರಿಕ ಕ್ರೋನೋಗ್ರಾಫ್‌ನೊಂದಿಗೆ ಸಂಕೀರ್ಣವಾಗಿದೆ.

ಗ್ರ್ಯಾಂಡ್ ಕಾಂಪ್ಲಿಕೇಶನ್ ನವೀಕರಣವು ಡೇಟೋನಾ ಮತ್ತು ಸ್ಕೆಲಿಟನ್ ಬೂಸ್ಟರ್ ಎಂಬ ಎರಡು ವಿಶಿಷ್ಟ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಹೊಸ 2022 ಫ್ಲ್ಯಾಗ್‌ಶಿಪ್ ರೇಸ್ ಕಾರ್ ಕಂಟ್ರೋಲ್ ಪ್ಯಾನೆಲ್‌ನ ಅಲಂಕಾರಿಕ ಸಂವೇದಕಗಳ ಜೊತೆಗೆ ಫೋನ್ ಬಾಡಿಯಲ್ಲಿ ರೋಲೆಕ್ಸ್ ವಾಚ್ ಅನ್ನು ಸಹ ಒಳಗೊಂಡಿದೆ.

ಕ್ಯಾವಿಯರ್‌ನ ಡೇಟೋನಾ ಒಂದೇ ಕಾಪಿಯಲ್ಲಿ ಮಾಡಿದ ಅದ್ಭುತ ಮಾಡೆಲ್‌ ಆಗಿದ್ದು, ಫೋನ್ ಕೇಸ್ ಅನ್ನು ಕ್ಯಾಂಪ್‌ಬೆಲ್ಸ್ ಬ್ಲೂ ಬರ್ಡ್ ನಂತಹ 1930 ರ ದಶಕದ ರೇಸಿಂಗ್ ಕಾರುಗಳ ಶೈಲಿಯಲ್ಲಿ ಮಾಡಲಾಗಿದೆ.

ಅದೇ ಕಾರು ಡೇಟೋನಾ ವಿಶ್ವ ವೇಗದ ದಾಖಲೆಯನ್ನು ಸ್ಥಾಪಿಸಿತ್ತು. ಚಿನ್ನದಿಂದ ನಿರ್ಮಾಣವಾದ ಅಲಂಕಾರಿಕ ಸ್ಪೀಡೋ ಮೀಟರ್‌ಗಳು ಮತ್ತು ಸ್ವಿಚ್‌ಗಳು ಸೂಪರ್‌ಕಾರ್‌ನ ಡ್ಯಾಶ್‌ಬೋರ್ಡ್‌ನ ಚಿತ್ರವನ್ನು ರಚಿಸುತ್ತವೆ. ಅಲ್ಲದೆ ರೋಲೆಕ್ಸ್ ಡೇಟೋನಾ ಎಂಬ ಶ್ರೇಷ್ಠ ಗಡಿಯಾರ ಸಂಗ್ರಹ ಮಾಡಲು ಇದು ಕಾರಣವಾಗಿದೆ.

ಡೇಟೋನಾ ಬೀಚ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಫ್ಲೋರಿಡಾದಲ್ಲಿರುವ ರೋಡ್ ಕೋರ್ಸ್‌ನ ನಂತರ ರೋಲೆಕ್ಸ್‌ನ ಕಾಸ್ಮೋಗ್ರಾಫ್ ಡೇಟೋನಾ ಎಂದು ಹೆಸರಿಸಲಾಗಿದೆ.

ಫೆಬ್ರವರಿ 22, 1933 ರಂದು 272.465 mph ವೇಗದ ಚಾಲನೆ ಮೂಲಕ ಮಾಲ್ಕಮ್ ಕ್ಯಾಂಪ್‌ಬೆಲ್‌ ವಿಶ್ವ ದಾಖಲೆ ಸೃಷ್ಟಿಸುವ ಮೂಲಕ ಇದು ಜಗತ್ಪ್ರಸಿದ್ಧವಾಗಿದೆ. ರೋಲೆಕ್ಸ್ ಸಂಸ್ಥಾಪಕ ಹ್ಯಾನ್ಸ್ ವಿಲ್ಸ್‌ಡೋರ್ಫ್, ಇವರೊಂದಿಗೆ ಪಾಲುದಾರಿಕೆಯನ್ನು ಪ್ರಸ್ತಾಪಿಸಿದ್ದಾರೆ . ಆದ್ದರಿಂದ 1962 ರಲ್ಲಿ ರೋಲೆಕ್ಸ್ ಅಧಿಕೃತವಾಗಿ ಡೇಟೋನಾ ಕಾರು ರೇಸಿಂಗ್‌ ಅನ್ನು ಪ್ರಾಯೋಜಿಸಿದ್ದರು ಮತ್ತು ಅದೇ ಹೆಸರಿನ ಗಡಿಯಾರವನ್ನು ತಯಾರಿಸಲು ಮುಂದಾಗಿದ್ದಾರೆ.

Leave A Reply

Your email address will not be published.