Kantara : ‘ವರಾಹ ರೂಪಂ’ ಹಾಡಿನ ವಿವಾದ ; ಬೇಡಿಕೆ ಮುಂದಿಟ್ಟ ತೈಕ್ಕುಡಂ ಬ್ರಿಡ್ಜ್!!!
ಕಾಂತಾರ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ನಲ್ಲಿ ದೊಡ್ದ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಸಿನಿಮಾವಾಗಿದ್ದು, kgf 2 ರ ದಾಖಲೆಯನ್ನು ಕೂಡ ಪುಡಿ ಮಾಡಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಂತಾರ ಸಿನಿಮಾ ಕರಾವಳಿ ಸೊಗಡನ್ನು ಬಿಂಬಿಸುವ ಸಿನಿಮಾವಾದರು ಕೂಡ ದೇಶ ದಲ್ಲಿ ಮಾತ್ರವಲ್ಲದೇ ಪರ ದೇಶದಲ್ಲೂ ಸಹ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಿನಿಮಾ ವಿಚಾರದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಕಾಂತಾರ ಸಿನಿಮಾ ಜನರ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವ ಕಾಂತಾರ ಸಿನಿಮಾ ತಂಡಕ್ಕೆ ವರಾಹ ಹಾಡಿನ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸಿನಿಮಾವನ್ನು ನೋಡಿದ ಪ್ರತಿಯೊಬ್ಬರೂ ಕೂಡ ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದು, ಭಾಷಾ, ಪರಭಾಷಾ ಅನೇಕ ನಟ, ನಟಿಯರು, ನಿರ್ದೇಶಕರು ಸಿನಿಮಾದ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಸದ್ದು ಮಾಡಿದ್ದ ಕಾಂತಾರ ಸಿನಿಮಾಕ್ಕೆ ಸಂಕಷ್ಟವೊಂದು ಎದುರಾಗಿದ್ದು, ವರಾಹ ರೂಪಂ ಹಾಡಿಗೆ ಕೇರಳ ಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಸಿನಿಮಾದಲ್ಲಿರುವ ವರಾಹ ರೂಪಂ ಹಾಡು ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ‘ವರಾಹ ರೂಪಂ..’ಹಾಡು ವಿವಾದದ ‘ತೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ನ ‘ನವರಸಂ..’ ಹಾಡಿನ ಟ್ಯೂನ್ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಆರೋಪ ಹಲವಾರು ಬಾರಿ ಕೇಳಿಬಂದಿತ್ತು. ಜೊತೆಗೆ ಈ ಹಾಡಿನ ರಾಗ ಮತ್ತು ಇದರಲ್ಲಿ ಬಳಸಲಾಗಿರುವ ಸಂಗೀತ ಒರಿಜಿನಲ್ ಅಲ್ಲವೆಂದು ಈ ತಂಡ ಹೇಳಿಕೊಂಡಿತ್ತು. ಆದರೆ, ಕಾಂತಾರ ಚಿತ್ರ ತಂಡ ಕೂಡ ಆರೋಪವನ್ನು ತಳ್ಳಿ ಹಾಕುತ್ತಲೇ ಬಂದಿದೆ.
ಈ ಚಿತ್ರತಂಡದ ವಿರುದ್ಧ ಇತ್ತೀಚೆಗೆ ಮಲಯಾಳಂ ಸಂಗೀತ ತಂಡವೊಂದು ಕೇಸ್ ದಾಖಲಿಸಿ ಈ ಪ್ರಕರಣದ ವಿಚಾರಣೆ ನಡೆಸಿದ ಕೇರಳ ಕೋರ್ಟ್ ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿತ್ತು. ಈ ಬಗ್ಗೆ ತೈಕ್ಕುಡಂ ಬ್ರಿಡ್ಜ್ ತನ್ನ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿತ್ತು.ಈ ವಿವಾದದ ಬಗ್ಗೆ ‘ತೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ನ ವಿಯಾನ್ ಫರ್ನಾಂಡಿಸ್ ಪ್ರತಿಕ್ರಿಯೆ ನೀಡಿದ್ದಾರೆ.
‘ತೈಕ್ಕುಡಂ ಬ್ರಿಡ್ಜ್’ ಹಣಕ್ಕಾಗಿ ಇಷ್ಟೆಲ್ಲ ಮಾಡುತ್ತಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ. ಆದರೆ, ಈ ಆರೋಪವನ್ನು ವಿಯಾನ್ ತಳ್ಳಿಹಾಕಿದ್ದಾರೆ.
ಕೋರ್ಟ್ನ ಆದೇಶದ ಪ್ರತಿ ಕೈ ಸೇರಿದ ನಂತರದಲ್ಲಿ ಕಾಂತಾರ ತಂಡದವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗಿದ್ದು, ನಮಗೆ ಕ್ರೆಡಿಟ್ ಕೊಟ್ಟರೆ ಈ ಹಾಡನ್ನು ಅವರು ಪ್ಲೇ ಮಾಡಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ವಿಯಾನ್ ಹೇಳಿದ್ದಾರೆ. ಈ ಮೂಲಕ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಕೆಲವು ಹಾಡುಗಳ ಮಧ್ಯೆ ಹೋಲಿಕೆ ಇರುವುದು ಸಹಜ. ಹೀಗಾಗಿ, ಆರಂಭದಲ್ಲಿ ಈ ವಿಚಾರದಲ್ಲಿ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಕಮೆಂಟ್ಗಳು, ಮೆಸೇಜ್ಗಳು, ದೂರವಾಣಿ ಕರೆಗಳು ನಿಲ್ಲದೆ ಹೋದಾಗ ಅನಿವಾರ್ಯವಾಗಿ ಕೇಸ್ ಹಾಕಿದ್ದೇವೆ. ಇದರ ಜೊತೆಗೆ ಯೂಟ್ಯೂಬ್ ಚಾನೆಲ್ನಲ್ಲಿ ‘ವರಾಹ ರೂಪಂ..’ ಹಾಡಿಗೆ ಬಂದ ಅನೇಕ ಕಮೆಂಟ್ಗಳನ್ನು ಡಿಲೀಟ್ ಮಾಡಲಾಗಿದೆ’ ಎಂಬ ಆರೋಪವನ್ನು ಕೂಡ ವಿಯಾನ್ ಮಾಡಿದ್ದಾರೆ.
‘ಕಾಂತಾರ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಬಿ. ಅಜನೀಶ್ ಲೋಕನಾಥ್ ಅವರು ನಮ್ಮ ಬ್ಯಾಂಡ್ನ ಸ್ಥಾಪಕರಲ್ಲೊಬ್ಬರಾದ ಗೋವಿಂದ್ ವಸಂತ್ ಅವರನ್ನು ಸಂಪರ್ಕಿಸಿದ್ದಾಗ ನಮ್ಮ ಮ್ಯಾನೇಜ್ಮೆಂಟ್ ನವರು ಕಾಂತಾರ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಚಿತ್ರ ರಿಲೀಸ್ಗೂ ಮೊದಲು ಅವರು ನಮ್ಮ ಜತೆ ಮಾತನಾಡಿ, ಹಾಡಿನಲ್ಲಿ ನಮ್ಮ ಬ್ಯಾಂಡ್ನ ಉಲ್ಲೇಖ ಮಾಡಿದ್ದರೆ ನಾವೇನು ಕೇಸು ಹಾಕುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ದೊಡ್ಡ ನಿರ್ಮಾಣ ಸಂಸ್ಥೆ ವಿರುದ್ಧ ಸ್ವತಂತ್ರ ಬ್ಯಾಂಡ್ ಹೋರಾಟ ನಡೆಸುತ್ತಿದ್ದು ,ತಮ್ಮಲ್ಲಿರುವ ಹಣ, ಅಧಿಕಾರದಿಂದ ಪಾರಾಗಬಹುದು ಎಂಬ ಭ್ರಮೆಯಲ್ಲಿ ಚಿತ್ರ ತಂಡದವರಿದ್ದಾರೆ. ಆದರೆ, ಸಂಗೀತ ಲೋಕಕ್ಕೆ ಮಾದರಿ ಆಗಬೇಕು ಎಂಬ ಉದ್ದೇಶವನ್ನು ಹೊತ್ತು ನಾವು ಸಾಗುತ್ತಿದ್ದೇವೆ.
ಈ ಪ್ರಕರಣದಲ್ಲಿ ಮುಂದೇನಾದಾರು ಕೂಡ ನಮಗೆ ಖುಷಿಯೇ!! ಏಕೆಂದರೆ ನಾವು ಸುಮ್ಮನೆ ಕೂತಿಲ್ಲ ದಿಟ್ಟ ಹೆಜ್ಜೆ ತೆಗೆದುಕೊಂಡಿದ್ದೇವೆ ಎಂಬ ತೃಪ್ತಿ ನಮ್ಮಲ್ಲಿರುತ್ತದೆ’ ಎಂದು ವಿಯಾನ್ ಪ್ರತಿಕ್ರಿಯೆ ನೀಡಿದ್ದಾರೆ.
Wow, wonderful blog format! How long have you been running
a blog for? you made blogging glance easy. The total glance of your site is fantastic, as well as the content!
You can see similar here sklep internetowy