ಶಿವಮೊಗ್ಗದಲ್ಲಿ ಮತ್ತೆ ರಕ್ತಪಾತ | ಓರ್ವನಿಗೆ ಚಾಕು ಇರಿತ |

ಶಿವಮೊಗ್ಗದ ಜನತೆ ಹರ್ಷ ಕೊಲೆ ಪ್ರಕರಣದ ಛಾಯೆಯಿಂದ ಹೊರ ಬರುವ ಪ್ರಯತ್ನದಲ್ಲಿರುವಾಗಲೆ ನಗರದಲ್ಲಿ ಮತ್ತೊಂದು ಮತ್ತೆ ರಕ್ತಪಾತದ ಘಟನೆ ನಡೆದಿದ್ದು, ಜನರಲ್ಲಿ ಮತ್ತಷ್ಟು ಭಯದ ವಾತಾವರಣ ಹುಟ್ಟುಹಾಕಿದೆ.

 


ಶಿವಮೊಗ್ಗ ನಗರದ ರಾಯಲ್ ಆರ್ಕೆಡ್‌ ಹೋಟೆಲ್ ಹಿಂಭಾಗದಲ್ಲಿ ನಿನ್ನೆ ರಾತ್ರಿ ಅಶೋಕ್ ಪ್ರಭು ಎಂಬುವರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಪ್ರಕರಣ ವರದಿಯಾಗಿದೆ.

ನಡೆದುಕೊಂಡು ಹೋಗುತ್ತಿದ್ದ ಅಶೋಕ ಪ್ರಭು ಮೇಲೆ ನಾಲ್ವರು ಹಲ್ಲೆ ಮಾಡಿದ್ದು, ದುಷ್ಕರ್ಮಿಗಳು ಅಶೋಕ ಬಳಿಯಿದ್ದ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಇದಕ್ಕೆ ಅಶೋಕ್ ವಿರೋಧ ವ್ಯಕ್ತಪಡಿಸಿದ್ದರಿಂದ ಕುಪಿತರಾದ ತಂಡ ಹರಿತವಾದ ವಸ್ತುವಿನಿಂದ ಅಶೋಕನ ಮುಖ ಮತ್ತು ಕತ್ತಿನ ಭಾಗ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಗಾಯಾಳು ಅಶೋಕ್​ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಸ್ಪಿ ಮಿಥುನ್ ಕುಮಾರ್ ಅವರ ತಂಡ ಈ ಪ್ರಕರಣದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಸದ್ಯದಲ್ಲೇ ಅಪರಾಧಿಗಳ ಹೆಡೆಮುರಿ ಕಟ್ಟಲು ಖಾಕಿ ಪಡೆ ಮುಂದಾಗಿದೆ.

Leave A Reply

Your email address will not be published.