ಬರ್ತಾ ಇದೆ ಅಭಿಮಾನಿಗಳ ಎದೆಬಡಿತ ಹೆಚ್ಚಿಸಲು ಪುಷ್ಪಾ -2 ಸಿನಿಮಾ | ಚಿತ್ರತಂಡದಿಂದ ಗುಡ್ ನ್ಯೂಸ್!!!

ಪುಷ್ಪಾ ಫ್ಲವರ್ ನಹೀ ಫೈರ್ ಎಂಬ ಡೈಲಾಗಿನಿಂದಲೇ ಕಿಚ್ಚು ಹಬ್ಬಿಸಿದ ಸಿನಿಮಾವೇ ‘ಪುಷ್ಪಾ ದಿ ರೈಸ್’. ಅಭಿಮಾನಿಗಳ ಮನಸ್ಸಿನಲ್ಲಿ ಬಾಯಲ್ಲಿ ಈ ಡೈಲಾಗ್ ಇನ್ನೂ ಮಾಸಿಲ್ಲ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿದ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ.

 

ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪಾ ದಿ ರೈಸ್’ ಸಿನಿಮಾ ಭಾರೀ ಸದ್ದು ಮಾಡಿ, ಭರ್ಜರಿ ಯಶಸ್ಸು ಕಂಡು, ತೆಲುಗು, ಹಿಂದಿ ಮಾತ್ರವಲ್ಲದೆ ಹಲವಾರು ಭಾಷೆಗಳಲ್ಲೂ ಸಿನಿಮಾ ಭರ್ಜರಿ ಸದ್ದು ಮಾಡಿ ಮನೆಮಾತಾಗಿತ್ತು. ಈಗ ಅಭಿಮಾನಿಗಳಿಗೆ ಇನ್ನೊಂದು ಸಿಹಿ ಸುದ್ದಿ ದೊರಕಿದೆ. ಹೌದು, ‘ಪುಷ್ಪಾ 2’ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ.

ಬಹುನಿರೀಕ್ಷಿತ ಪುಷ್ಪಾ -2 ಚಿತ್ರೀಕರಣ ಈಗಾಗಲೇ ಆರಂಭಗೊಂಡಿದ್ದು, ಸಿನಿಮಾದ ಎರಡನೇ ಭಾಗ ‘ ಪುಷ್ಪಾ – ದಿ ರೂಲ್ ‘ ಆಗಿದೆ. ಸಿನಿಮಾಟೋಗ್ರಾಫರ್ ಕುಬ ಬ್ರೊಜೆಕ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಲ್ಲು ಅರ್ಜುನ್ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ಈ ಫೋಟೋದಲ್ಲಿ ಅಲ್ಲು ಅರ್ಜುನ್ ಗಡ್ಡದಾರಿಯಾಗಿ, ಬಿಳಿ ಟೀ-ಶರ್ಟ್ ಧರಿಸಿ ಸಿನಿಮಾಟೋಗ್ರಾಫರ್ ಕುಬ ಬ್ರೊಜೆಕ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋ ಹಂಚಿಕೊಳ್ಳುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳಿಗೆ ಪುಷ್ಪಾ -2 ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

https://www.instagram.com/p/CkU7BCiLxMT/?igshid=YmMyMTA2M2Y=

Leave A Reply

Your email address will not be published.