WhatsApp ; ಈ ಹೊಸ ಫೀಚರ್ ಇನ್ಮುಂದೆ ವಾಟ್ಸಪ್ ನಲ್ಲಿ | ನೀವಂತೂ OMG ಅನ್ನೋದು ಖಂಡಿತಾ ಪಕ್ಕಾ!!!

ವಾಟ್ಸಾಪ್ ಎಂದರೆ ಗೊತ್ತಿಲ್ಲದವರು ಇಲ್ಲ. ವಾಟ್ಸಾಪ್ ನಲ್ಲಿ ಟೆಕ್ಸ್ಟ್ ಮೆಸೆಜ್,ಫೋಟೊ, ವಿಡಿಯೋ, ಫೈಲ್, ಲೊಕೇಶನ್ ಶೇರಿಂಗ್ ಮುಂತಾದವನ್ನು ಶೇರ್ ಮಾಡುತ್ತ ಟೈಮ್ ಹೋಗೋದೇ ಗೊತ್ತಾಗಲ್ಲ. ಅದಲ್ಲದೆ ಮೆಟಾ ಮಾಲೀಕತ್ವದ ವಾಟ್ಸಾಪ್ ಅಪ್ಲಿಕೇಶನ್ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದ್ದು, ಲೀಡಿಂಗ್ ಇನ್‌ಸ್ಟಂಟ್ ಮೆಸೆಜ್ ಪ್ಲಾಟ್‌ಫಾರ್ಮ್ ಆಗಿದೆ.
ವಾಟ್ಸಾಪ್ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ.

 

ವಾಟ್ಸಾಪ್ ದಿನದಿಂದ ದಿನಕ್ಕೆ ಒಂದಲ್ಲ ಒಂದು ಫೀಚರ್‌ಗಳನ್ನು ನೀಡುತ್ತಾ ಬರುತ್ತಿದೆ. ಈ ರೀತಿ ಮಾಡುವುದರಿಂದಲೇ ವಾಟ್ಸಾಪ್ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಹೌದು ಜನಪ್ರಿಯ ಇನ್‌ಸ್ಟಂಟ್ ಮೆಸೆಜ್‌ ಆಪ್ ವಾಟ್ಸಾಪ್‌ ಇತ್ತೀಚಿಗೆ ಬಳಕೆದಾರರಿಗೆ ಮತ್ತೆ ಕೆಲವು ಬಹು ಉಪಯುಕ್ತ ಫೀಚರ್ ಪರಿಚಯಿಸಿದೆ.

ಅದರ ಬೆನ್ನಲ್ಲೇ ಈಗಾಗಲೇ ಬಳಕೆದಾರರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಹೊಸ ಅಪ್‌ಡೇಟ್‌ ಒಂದನ್ನು ಸೇರ್ಪಡೆ ಮಾಡಿದೆ. ಅದುವೇ (Messages with yourself) ಮೆಸೆಜ್ ವಿತ್ ಯುವರ್ಸೆಲ್ಫ್ ಆಗಿದೆ.

ಮೆಸೆಜ್ ವಿತ್ ಯುವರ್ಸೆಲ್ಫ್ ಎಂಬ ಹೊಸ ಫೀಚರ್‌ನಲ್ಲಿ ವಾಟ್ಸಾಪ್ ಬಳಕೆದಾರರು ತಮ್ಮ ನಂಬರ್‌ಗೆ ತಾವೇ ಮೆಸೆಜ್ ಮಾಡಲು ಸಾಧ್ಯವಾಗುತ್ತದೆ. ಈ ನೂತನ ಫೀಚರ್ ಪ್ರಾಯೋಗಿಕ ಹಂತದಲ್ಲಿದ್ದು, ಸದ್ಯದಲ್ಲೇ ಎಲ್ಲ ಬಳಕೆದಾರರಿಗೆ ತಲುಪಲಿದೆ.

ಮುಖ್ಯವಾಗಿ ಮೆಸೆಜ್ ವಿತ್ ಯುವರ್ಸೆಲ್ಫ್ ಈ ಆಯ್ಕೆಯು ಆಯ್ದ ಕೆಲವು ಆಂಡ್ರಾಯ್ಡ್‌ ಮತ್ತು ಐಓಎಸ್‌ ಬೀಟಾ ಆವೃತ್ತಿಯ ಬಳಕೆದಾರರಿಗೆ ಲಭ್ಯವಿದೆ. ಹಾಗೆಯೇ ಮತ್ತಷ್ಟು ಅಪ್‌ಡೇಟ್‌ನೊಂದಿಗೆ ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ ಎನ್ನಲಾಗಿದೆ.

WaBetaInfo ವರದಿಯ ಪ್ರಕಾರ ಬಳಕೆದಾರರು ಅವರ ಫೋನ್ ನಂಬರ್‌ನೊಂದಿಗೆ ಚಾಟ್‌ಗೆ ಮೆಸೆಜ್‌ ಕಳುಹಿಸಿದರೆ, ಮಲ್ಟಿ ಡಿವೈಸ್‌ಗಳನ್ನು ಬಳಸುವಾಗ ಅದು ಇನ್ನು ಮುಂದೆ ಬೆಂಬಲಿಸದ ಫೀಚರ್‌ ಆಗಿರುವುದರಿಂದ ಅದನ್ನು ಯಾವಾಗಲೂ ಬಳಕೆದಾರರ ಇತರ ಲಿಂಕ್ ಮಾಡಲಾದ ಡಿವೈಸ್‌ನೊಂದಿಗೆ ಸಿಂಕ್ ಮಾಡಲಾಗುತ್ತದೆ’. ಇನ್ನು ಕೆಲವು ಬೀಟಾ ಆವೃತ್ತಿಯ ಬಳಕೆದಾರರಿಗೆ ವಿಭಿನ್ನ ಹೆಡ್‌ಲೈನ್‌ ಅನ್ನು ಬಳಸುವ ಮೂಲಕ ನಿಮ್ಮೊಂದಿಗೆ ಚಾಟ್ ಫೀಚರ್‌ ಅನ್ನು ಹೈಲೈಟ್ ಮಾಡಲಾಗುತ್ತದೆ.

ಮೆಸೆಜ್ ವಿತ್ ಯುವರ್ಸೆಲ್ಫ್ ಮಾಡುವ ಕ್ರಮಗಳು :
ಬಳಕೆದಾರರು ಸ್ವಂತ ಅವರ ಮೊಬೈಲ್ ನಂಬರ್‌ಗೆ ಅವರೇ ಮೆಸೆಜ್‌ ಕಳುಹಿಸುವುದು ಸಾಧ್ಯ, ಆದರೆ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಯಾವುದೇ ಮೀಸಲಾದ ಚಾಟ್ ವಿಂಡೋ ಲಭ್ಯವಿರಲಿಲ್ಲ. ಆದರೆ ಹೊಸ ಅಪ್‌ಡೇಟ್‌ನೊಂದಿಗೆ, ಬಳಕೆದಾರರು ಸ್ವಂತ ನಂಬರ್‌ನ ವಾಟ್ಸಾಪ್ ಚಾಟ್ ಅನ್ನು ತೆರೆದಾಗ, ಚಾಟ್ ಹೆಡ್‌ಲೈನ್‌ನಲ್ಲಿ ಮೆಸೆಜ್ ಯುವರ್ಸೆಲ್ಫ್ (Message yourself) ಎಂದು ಕಾಣಿಸಲಿದೆ. ಇನ್ನು ವಾಟ್ಸಾಪ್‌ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿಯೂ ಮೆಸೆಜ್ ಯೂವರ್‌ಸೆಲ್ಫ್ ಹೆಸರಿನಿಂದ ಕಾಣಿಸಿಕೊಳ್ಳಲಿದೆ.

ಹಾಗೆಯೇ ಹೆಡ್‌ಲೈನ್ ಫೀಚರ್ಸ್‌ಗಳೊಂದಿಗೆ ಮೀಡಿಯಾ ಫಾರ್ವರ್ಡ್ ಮಾಡುವ ಬೀಟಾ ಪರೀಕ್ಷಾ ಸಾಮರ್ಥ್ಯವನ್ನು ವಾಟ್ಸಾಪ್ ಪ್ರಾರಂಭಿಸಿದೆ. ಈ ಹೊಸ ಅಪ್‌ಡೇಟ್‌ ಹೆಡ್‌ಲೈನ್ ನೊಂದಿಗೆ ಫೋಟೋ, ವೀಡಿಯೊಗಳು, GIF ಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಸಹ ಫಾರ್ವರ್ಡ್ ಮಾಡಲು ಬಳಕೆದಾರರನ್ನು ಅನುಮತಿಸುತ್ತದೆ. ಈ ಮೊದಲು ಮೀಡಿಯಾ (ಫೋಟೊ/ ವಿಡಿಯೋ) ಅನ್ನು ಮಾತ್ರ ಫಾರ್ವರ್ಡ್ ಮಾಡಲು ಸಾಧ್ಯ ಇದ್ದು, ಫೋಟೊ/ ವಿಡಿಯೋ ಜೊತೆಗೆ ಬರೆದ ಪದಗಳನ್ನು ಪುನಃ ಬರೆಯಬೇಕಾಗಿತ್ತು. ಆದರೆ ಸದ್ಯದಲ್ಲೇ ಈ ತೊಂದರೆ ಸಹ ಸರಿಯಾಗಲಿದೆ.

Leave A Reply

Your email address will not be published.