Target goal : ಸೇಲ್ಸ್ ಟಾರ್ಗೆಟ್ ರೀಚ್ ಆಗದೇ ಇದ್ದುದ್ದಕ್ಕೆ ನೌಕರನ ಮೇಲೆ ಮ್ಯಾನೇಜರ್ ಮಾಡಿದ್ದೇನು? ನೋಡಿ!!!

ನೌಕರರು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇದ್ದಾಗ ಮೇಲಧಿಕಾರಿಗಳು ಕುಪಿತರಾಗಿ ಬೈಯುದು ಸಾಮಾನ್ಯ. ಆದರೆ , ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ದೊಡ್ದ ಪ್ರಹಸನ ಮಾಡುವ ಪರಿಪಾಠ ಹೆಚ್ಚಾಗಿ ನಡೆಯುತ್ತಿದೆ. ಇದರಿಂದ ಮಾತಿನಲ್ಲಿ ಮುಗಿಯುವ ವಿಚಾರ ಕತ್ತಿ ದೊಣ್ಣೆ ಹೀಗೆ ನಾನಾ ಉಪಕರಣದ ಮೂಲಕ ಕೊನೆಗೊಂಡು ಜೀವಕ್ಕೆ ಕುತ್ತು ಬಂದರೂ ಅಚ್ಚರಿಯಿಲ್ಲ.

 

ಇದೇ ರೀತಿಯ ಘಟನೆಯೊಂದು ನಡೆದಿದ್ದು, ಆರೋಗ್ಯ ವಿಮಾ ಯೋಜನೆಗಳನ್ನು ಮಾರಾಟ ಮಾಡುವ ಉದ್ಯೋಗಿ ತನ್ನ ಮಾಸಿಕ ಗುರಿಯನ್ನು ತಲುಪಲು ವಿಫಲವಾದ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಮುಖ್ಯಸ್ಥನೊಬ್ಬ ತಲೆಯ ಮೇಲೆ ಟೇಬಲ್ ಗಡಿಯಾರದಿಂದ ಹೊಡೆದ ಘಟನೆ ನಡೆದಿದೆ.

ಬೊರಿವಲಿ ವೆಸ್ಟ್‌ನ ಎಸ್‌ವಿ ರಸ್ತೆಯಲ್ಲಿರುವ ಭಂಡಾರ್ಕರ್ ಬಿಲ್ಡಿಂಗ್‌ನಲ್ಲಿರುವ ಕಂಪನಿಯ ಶಾಖೆಯಲ್ಲಿ ಆನಂದ್ ಅವರು ಕಳೆದ ವರ್ಷದಿಂದ ಆರೋಗ್ಯ ವಿಮಾ ಕಂಪನಿಯಲ್ಲಿ ಅಸೋಸಿಯೇಟ್ ಕ್ಲಸ್ಟರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.

ಬ್ಯಾಂಕ್‌ನ ಆರೋಗ್ಯ ವಿಮಾ ಯೋಜನೆಗಳನ್ನು ಮಾರಾಟ ಮಾಡಲು ಹೇಳಲಾಗಿತ್ತು. ಆದರೆ ಅವರು ಸೆಪ್ಟೆಂಬರ್‌ನಲ್ಲಿ 5 ಲಕ್ಷಕ್ಕೆ ಮಾರಾಟ ಮಾಡುವ ಗುರಿಯನ್ನು ಮುಟ್ಟಲಾಗಲಿಲ್ಲ. ಹಾಗಾಗಿ, ಅಸೋಸಿಯೇಟ್ ಏರಿಯಾ ಹೆಡ್ ಅಮಿತ್‌ಗೆ ಈ ಬಗ್ಗೆ ವರದಿ ಮಾಡಿದ್ದಾರೆ.

ಕಳೆದ ತಿಂಗಳು ತನ್ನ ಗುರಿ ಸಾಧಿಸಲು ಸಾಧ್ಯವಾಗದೆ ಇದ್ದಾಗ ಹಾಗಾಗಿ, ಆನಂದ್ ಅಕ್ಟೋಬರ್ 9 ರಂದು ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಅಮಿತ್ ಸಿಂಗ್ ಅದನ್ನು ಅಂಗೀಕರಿಸಿಲ್ಲ.

ಶನಿವಾರ ಬೆಳಗ್ಗೆ 9.30ಕ್ಕೆ ಅಮಿತ್ ಆನಂದ್ ಗೆ ಕರೆ ಮಾಡಿ ಕೆಲಸದ ವಿವರ ನೀಡುವಂತೆ ಕೇಳಿದ್ದಾರೆ. ಆನಂದ್ ಗುರಿಯನ್ನು ತಲುಪಿಲ್ಲದೆ ಇರುವ ಕಾರಣ ಸಂಜೆ ಸಂಪೂರ್ಣ ದಾಖಲೆಯನ್ನು ಸಲ್ಲಿಸುತ್ತೇನೆ ಎಂದು ಆನಂದ್ ಅಮಿತ್ ಅವರಿಗೆ ತಿಳಿಸಿದ್ದಾರೆ.ಅಲ್ಲದೆ, ಆನಂದ್ ಅವರನ್ನು ಸಂಜೆ ಆಫೀಸಿನಲ್ಲಿ ಭೇಟಿಯಾಗಲು ಅಮಿತ್ ಹೇಳಿದ್ದಾರೆ

ಆನಂದ್ ಬಡ್ತಿ ಕೇಳಿದಾಗ ಕೊಡದೇ ಜೊತೆಗೆ ಕೆಲಸ ಒತ್ತಡ ಮಾತ್ರ ವಿಪರೀತವಾಗಿದ್ದರಿಂದ ಕೆಲಸ ಬಿಡಲು ತೀರ್ಮಾನ ಕೈಗೊಂಡಿದ್ದಾರೆ. ಅಮಿತ್ ಆನಂದ್ ಅವರೊಂದಿಗೆ ಮೀಟಿಂಗ್ ರೂಂನಲ್ಲಿ ಚರ್ಚಿಸಲು ನಿರಾಕರಿಸಿ ಇತರ ಉದ್ಯೋಗಿಗಳ ಮುಂದೆ ಮಾತನಾಡಲು ಒತ್ತಾಯಿಸಿದ್ದಾರೆ.

ಆನಂದ್ ಮಾರಾಟದ ಗುರಿಯನ್ನು ತಲುಪದಿದ್ದಕ್ಕಾಗಿ ಅಮಿತ್ ನಿರಾಶೆಗೊಂಡು ಇದ್ದಕ್ಕಿದ್ದಂತೆ ಮೇಜಿನ ಗಡಿಯಾರವನ್ನು ಹಿಡಿದು ಆನಂದ್ ನ ತಲೆಗೆ ಜೋರಾಗಿ ಹೊಡೆದಿದ್ದಾರೆ. ಇದರಿಂದಾಗಿ ತಲೆಯಿಂದ ವಿಪರೀತವಾಗಿ ರಕ್ತಸ್ರಾವವಾಗಲು ಪ್ರಾರಂಭವಾಗಿದೆ.

ಕೂಡಲೇ ಸಹೋದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ ಅಲ್ಲಿ ವೈದ್ಯರು ನನ್ನ ತಲೆಯಲ್ಲಿ ಸಿಕ್ಕಿಕೊಂಡಿದ್ದ ಗಡಿಯಾರದ ಪ್ಲಾಸ್ಟಿಕ್ ಜೊತೆಗೆ ಗಡಿಯಾರದ ತುಂಡುಗಳನ್ನು ತೆಗೆದುಹಾಕಲಾಗಿ ತಲೆಗೆ ಹೊಲಿಗೆಗಳನ್ನು ಹಾಕಲಾಗಿದೆ ಈ ಕುರಿತು ಪೋಲಿಸ್ ಠಾಣೆಯ ಮೆಟ್ಟಿಲೇರಿರುವ ಆನಂದ್ ಅವರ 35 ವರ್ಷದ ಮ್ಯಾನೇಜರ್ ಅಮಿತ್ ಸುರಿಂದರ್ ಸಿಂಗ್ ವಿರುದ್ಧ ಬೊರಿವಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ತನ್ನ ಮಾಸಿಕ ಗುರಿ 5 ಲಕ್ಷ ಇದ್ದು, ಆದರೆ ತಾನು 1.5 ಲಕ್ಷ ಮೌಲ್ಯದ ವಿಮಾ ಯೋಜನೆಗಳನ್ನು ಮಾರಾಟ ಮಾಡಿದ್ದು, ಇದರ ಜೊತೆಗೆ ತಾನು ಕೆಲಸ ಬಿಡಲು ರಾಜೀನಾಮೆಯನ್ನೂ ನೀಡಿದ್ದರೂ ಕೂಡ ಅಮಿತ್ ಅವರು ಸ್ವೀಕರಿಸಲು ಸಿದ್ಧರಿರಲಿಲ್ಲ. ಅವರು ನನ್ನನ್ನು ನಿರಂತರವಾಗಿ ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದಾರೆ ಎಂದು ಆನಂದ್ ಆರೋಪಿಸಿದ್ದಾರೆ.

ಬೊರಿವಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ನಿನಾದ್ ಸಾವಂತ್ ಅವರು ಅಮಿತ್ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಮಿತ್ ಅವರಿಗೆ ಸೆಕ್ಷನ್ 41 ನೋಟಿಸ್ ಕಳುಹಿಸಲಾಗಿದೆ.

Leave A Reply

Your email address will not be published.