Chandrashekar Bhandari: RSS ನ ಹಿರಿಯ ಪ್ರಚಾರಕ, ಲೇಖಕ, ಚಂದ್ರಶೇಖರ ಭಂಡಾರಿ ನಿಧನ

ಆರ್ ಎಸ್ ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) (RSS) ನ ಹಿರಿಯ ಪ್ರಚಾರಕ, ಲೇಖಕ ಚಂದ್ರಶೇಖರ ಭಂಡಾರಿ ಅವರು ಇಂದು (ಅ.30 ರಂದು) ದೈವಾಧೀನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

 

ಡಾ. ಬಿಆರ್ ಅಂಬೇಡ್ಕರ್ ಕುರಿತು ಚಂದ್ರಶೇಖರ್ ಭಂಡಾರಿ ಅವರು ಅನುವಾದಿಸಿದ್ದ ಕೃತಿ 2011 ರಲ್ಲಿ ಪ್ರಕಟವಾಗಿತ್ತು. ಕುವೆಂಪು ಭಾಷಾ ಭಾರತಿ, ಚಂದ್ರಶೇಖರ ಭಂಡಾರಿ ಅವರಿಗೆ ಉತ್ತಮ ಅನುವಾದಕ ಪ್ರಶಸ್ತಿ ನೀಡಿ ಗೌರವಿಸಿತ್ತು.

ಚಂದ್ರಶೇಖರ ಭಂಡಾರಿ ಅವರು ಸತತ 6 ದಶಕಗಳ ಕಾಲ ಆರ್. ಎಸ್ ಎಸ್ ( RSS) ನ ಪ್ರಚಾರಕರಾಗಿ ದುಡಿದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ಚಂದ್ರಶೇಖರ ಭಂಡಾರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಅಗಲಿದ ಗಣ್ಯರು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ವಿಶ್ವಸಂವಾದ ಕೇಂದ್ರ ಕರ್ನಾಟಕದ ಸಂಸ್ಥಾಪಕ ಟ್ರಸ್ಟಿ ಆಗಿದ್ದರು.

ಆರ್ ಎಸ್ಎಸ್ ನ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಹಲವು ಹೊಣೆಗಾರಿಕೆಯನ್ನು ನಿಭಾಯಿಸಿದ್ದರು. ಇವರು ಲೇಖಕರು ಮಾತ್ರವಲ್ಲದೇ ಕನ್ನಡ ಭಾಷೆಗೆ ಅನೇಕ ಕೃತಿಗಳನ್ನು ಅನುವಾದ ಕೂಡಾ ಮಾಡಿದ್ದರು. ಚಂದ್ರಶೇಖರ ಭಂಡಾರಿ ‘ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು, ಸೇರಿದಂತೆ ಅನೇಕ ದೇಶಭಕ್ತಿಗೀತೆಗಳನ್ನು ರಚಿಸಿದ್ದರು.

Leave A Reply

Your email address will not be published.