ರೆಸ್ಟೋರೆಂಟ್ ಲೆಕ್ಕ ಕೇಳಿ ಕೊಲೆಯಾದ ಪಾರ್ಟ್ನರ್‌ !!!

ಇಂದಿನ ದಿನಗಳಲ್ಲಿ ಸಣ್ಣ- ಪುಟ್ಟ ವಿಷಯಗಳಿಗೆ ಜಗಳ ನಡೆಯುವುದು ಸರ್ವೇ ಸಾಮಾನ್ಯ. ಆದರೆ ಆ ಜಗಳ ಕೊಲೆಯ ತನಕ ತಲುಪುತ್ತದೆ ಎಂದರೆ ವಿಷಾದವೇ ಸರಿ. ಹಾಗೇ ಇಲ್ಲೊಂದು ಆಶ್ಚರ್ಯಕರವಾದ ದುರ್ಘಟನೆ ಸಂಭವಿಸಿದೆ. ರೆಸ್ಟೋರೆಂಟ್ ಲೆಕ್ಕ ಕೇಳಿದ್ದಕ್ಕೆ ವ್ಯಕ್ತಿಯೋರ್ವ ಪಾರ್ಟ್ನರ್‌ನನ್ನೇ ಕೊಂದಿರುವ ಭಯಾನಕವಾದ ಘಟನೆ ನಡೆದಿದೆ.

 

ಹಿರಿಸಾವೆ ಮೂಲದ ಸೋಮೇಗೌಡ(ಮೃತ), ಹರೀಶ್ , ಆರೋಪಿ ಮುತ್ತುರಾಜ್ ಈ ಮೂವರು ಸ್ನೇಹಿತರು ಸೇರಿಕೊಂಡು ಕುಂಬಳಗೋಡು ಬಳಿಯ ಅಮರಾವತಿ ರೆಸ್ಟೋರೆಂಟ್ ತೆರೆದಿದ್ದರು. ಎರಡು ತಿಂಗಳ ಹಿಂದಷ್ಟೇ ರೆಸ್ಟೋರೆಂಟ್ ಆರಂಭಿಸಲಾಗಿತ್ತು .

ಹಾಗೇ ಹೋಟೆಲ್ ಅನ್ನು ಮುತ್ತುರಾಜ್ ನೋಡಿಕೊಳ್ಳುತ್ತಿದ್ದ , ಹರೀಶ್ ಮತ್ತು ಸೋಮೇಗೌಡ ಹೆಚ್ಚಾಗಿ ಹೋಟೆಲ್ ಕಡೆಗೆ ಬರುತ್ತಿರಲಿಲ್ಲ. ಆದರೆ ಎರಡು ತಿಂಗಳ ನಂತರ ಹೋಟೆಲ್ ಕಡೆ ಮುಖ ಮಾಡಿದ ಸೋಮೆಗೌಡ ಹೋಟೆಲ್ ನ ಬಗ್ಗೆ ಲೆಕ್ಕ ಕೇಳಿದ್ದಾನೆ. ಆಗ ಐದು ಲಕ್ಷ ಲಾಸ್ ಆಗಿರುವುದಾಗಿ ಮುತ್ತುರಾಜ್ ಲೆಕ್ಕ ತೋರಿಸಿದ್ದಾನೆ.

ಹೋಟೆಲ್ ಚೆನ್ನಾಗಿಯೇ ನಡೆಯುತ್ತಿದೆಯಲ್ಲಾ ಇಷ್ಟೊಂದು ಲಾಸ್ ಹೇಗಾಯಿತು ಎಂದು ಸೋಮೇಗೌಡ ಪ್ರಶ್ನೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಮತ್ತೊಬ್ಬ ಪಾರ್ಟ್ನರ್ ಹರೀಶ್‍ಗೂ ಕಾಲ್ ಮಾಡಿ ವಿಷಯ ತಿಳಿಸಿದ್ದಾನೆ.

ಅಷ್ಟು ಹೊತ್ತಿಗಾಗಲೇ ಸೋಮೇಗೌಡ ಮತ್ತು ಮುತ್ತುರಾಜ್ ಇಬ್ಬರ ಮಧ್ಯೆ ಮಾತುಕತೆಗಳು ಮಿತಿ ಮೀರಿದ್ದು ಜಗಳವಾಗಿ ಮಾರ್ಪಟ್ಟಿದೆ.

ಇದರಿಂದ ಕೋಪಗೊಂಡ ಮುತ್ತುರಾಜ್ ಅಲ್ಲಿಯೇ ಇದ್ದ ತರಕಾರಿ ಕಟರ್‌ನಿಂದ ಸೋಮೇಗೌಡರ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಗಾಯಾಳು ಸೋಮೇಗೌಡನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮೇಗೌಡ ಸಾವನ್ನಪ್ಪಿದ್ದಾರೆ. ಈ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಮುತ್ತುರಾಜ್ ವಿರುದ್ಧ ದೂರು ದಾಖಲಾಗಿದೆ.

Leave A Reply

Your email address will not be published.