ಬೇರೆ ಜಾತಿಯ ವ್ಯಕ್ತಿಯೊಂದಿಗೆ ಲವ್ ಮಾಡಿದ ಮಗಳನ್ನು ಕತ್ತು ಸೀಳಿ ಕೊಂದ ತಂದೆ!!!

ಆಧುನಿಕತೆಯಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೆಲವು ಜನರು ಆಚಾರ-ವಿಚಾರ, ಜಾತಿ-ಸಂಪ್ರದಾಯಗಳಿಗೆ ಒಗ್ಗಿಕೊಂಡು ಇರುತ್ತಾರೆ. ಅದಲ್ಲದೆ ಅವರದ್ದೇ ಮೂಢನಂಬಿಕೆಗಳನ್ನು ಸರಿ ಎಂದು ವಾದಿಸುತ್ತಾರೆ.

 

ಕಳೆದ ಕೆಲವು ದಿನಗಳಿಂದ, ಆರೋಪಿ 10 ನೇ ತರಗತಿ ಓದುತ್ತಿರುವ ತನ್ನ ಕಿರಿಯ ಮಗಳು, ಅದೇ ಗ್ರಾಮದ ಬೇರೆ ಜಾತಿಯ ಯುವಕನೊಂದಿಗೆ ಕ್ಲೋಸ್ ಆಗಿರುವುದನ್ನು ಗಮನಿಸಿದ ತಂದೆ, ತನ್ನ ಮಗಳು ಅವನನ್ನು ಪ್ರೀತಿಸುತ್ತಿರಬಹುದೆಂದು ಶಂಕಿಸಿದ್ದಾರೆ’ ಎಂದು ತಿಳಿದುಬಂದಿದೆ. ಇನ್ನು, ಈ ಬಗ್ಗೆ ಮಗಳನ್ನು ತಂದೆ ಪ್ರಶ್ನೆ ಮಾಡಿದಾಗ, ಯುವಕನೊಂದಿಗಿನ ಯಾವುದೇ ಸಂಬಂಧವನ್ನು ನಿರಾಕರಿಸಿದಳು ಮತ್ತು ಅದು ಕೇವಲ ಸ್ನೇಹ ಎಂದು ತಿಳಿಸಿದ್ದಳು. ಆದರೂ, ತಂದೆ ತನ್ನ ಕಿರಿಯ ಮಗಳನ್ನು ಅನುಮಾನಿಸುವುದನ್ನು ಮುಂದುವರೆಸಿದರು ಮತ್ತು ಯುವಕನೊಂದಿಗೆ ಬೆರೆಯುವುದನ್ನು ಮುಂದುವರಿಸದಂತೆ ಎಚ್ಚರಿಕೆ ನೀಡಿದ್ದರು. ಆದರೆ, ಮಂಗಳವಾರ ಬೆಳಗ್ಗೆ ತಂದೆ ಮತ್ತು ಮಗಳ ನಡುವೆ ತೀವ್ರ ಜಗಳ ನಡೆದಿದೆ. ಕೋಪದ ಭರದಲ್ಲಿ ತಂದೆ ಕೊಡಲಿಯನ್ನು ಎತ್ತಿಕೊಂಡು ಮಗಳನ್ನು ಕತ್ತರಿಸಿದ್ದಾನೆ.

ಹೌದು ಜಾತಿಯ ಕಟ್ಟುಪಾಡುಗಳ ಸಲುವಾಗಿ 15 ವರ್ಷದ ಮಗಳನ್ನು ಅದೇ ಗ್ರಾಮದ 20 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಅನುಮಾನದ ಮೇಲೆ 45 ವರ್ಷದ ತಂದೆ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ತೆಲಂಗಾಣದ ವನಪರ್ತಿ ಜಿಲ್ಲೆಯ ಪೊಲೀಸರು 45 ವರ್ಷದ ವ್ಯಕ್ತಿಯನ್ನು ಮಂಗಳವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೆಬ್ಬೆರ್ ಬ್ಲಾಕ್‌ನ ಪಾತಪಲ್ಲಿ ಗ್ರಾಮದಲ್ಲಿ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬುಧವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಮಾಹಿತಿ ನೀಡಿದ ವನಪರ್ತಿ ಪೊಲೀಸ್ ಉಪ ಅಧೀಕ್ಷಕ ಆನಂದ್ ರೆಡ್ಡಿ, ಕೃಷಿಕರಾಗಿರುವ ಆರೋಪಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ ಎಂಬ ಮಾಹಿತಿ ನೀಡಿರುತ್ತಾರೆ.

Leave A Reply

Your email address will not be published.