ಕೆಸುವಿನ ಗೆಡ್ಡೆ ಆರೋಗ್ಯಕ್ಕೆ ಒಳಿತು
ಆಧುನಿಕ ಕಾಲದಲ್ಲಿ ಆರೋಗ್ಯಕ್ಕೆ ಯಾವುದು ಒಳಿತು ತರಕಾರಿ ಎಂಬುದು ತಿಳಿಯುವುದು ಬಲು ಕಷ್ಟಕರ. ಹೀಗಾಗಿ ಆದಷ್ಟು ಸಂಶೋಧಿಸಿ, ಪರಿಶೀಲಿಸಿ ಸೇವಿಸಿದರೆ ಉತ್ತಮ. ಅದರಲ್ಲೂ ಹಸಿ ತರಕಾರಿಯನ್ನು ಹಾಗೆ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವ ಸಂಗತಿ. ಏಕೆಂದರೆ ಇದರಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರುತ್ತದೆ. ಅದರಲ್ಲಿ ಕೆಸುವಿನ ಗೆಡ್ಡೆಯನ್ನು ಸೇವಿಸಿದರೆ ಎಷ್ಟು ಉತ್ತಮ ಎಂಬುದರ ಬಗ್ಗೆ ತಿಳಿಯೋಣ.
ಸಾಮಾನ್ಯವಾಗಿ ಕೆಸುವಿನ ಗಡ್ಡೆಯನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಅಂತ ಕೇಳಿರುತ್ತೇವೆ. ಆದರೆ ಇದರ ಸತ್ಯಾಂಶ ಇಲ್ಲಿದೆ. ರಕ್ತಕ್ಕೆ ಕಬ್ಬಿಣದ ಅಂಶ ಮತ್ತು ನಾರಿನ ಅಂಶ ಹೆಚ್ಚಾಗಿ ಬೇಕಾಗಿರುತ್ತದೆ. ಇದರಿಂದ ಹಿಮೋಗ್ಲೋಬಿನ್ ಹೆಚ್ಚಾಗುತ್ತದೆ. ಹಾಗಾಗಿ ವೀಕ್ನೆಸ್ ಎಂಬ ಕಾರಣದಿಂದ ವೈದ್ಯರ ಬಳಿ ಹೋದಾಗ ಅವರು ಹೆಚ್ಚಾಗಿ ಸೂಚಿಸುವುದು ಹಿಮೋಗ್ಲೋಬಿನ್ಯುಕ್ತ ಆಹಾರವನ್ನು ಸೇವಿಸಿ ಎಂದು. ಇದಕ್ಕೆ ಉತ್ತಮ ಹಸಿ ತರಕಾರಿಯಲ್ಲಿ ಒಂದಾಗಿರುವುದು ಕೆಸು ಗೆಡ್ಡೆ. ಇದನ್ನು ಹಾಗೇ ತಿನ್ನುವುದು ಕೊಂಚ ಕಷ್ಟ. ಆದರೆ ತುಂಬಾ ಒಳಿತು.
ಇದರಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಎ ಇರುವುದರಿಂದ ಚರ್ಮದ ಕಾಂತಿ ಇನ್ನಷ್ಟು ಹೆಚ್ಚಿಸುತ್ತದೆ. ಸುಕ್ಕು ಕಟ್ಟುವುದು ಮತ್ತು ಮೊಡವೆಗಳ ನಿವಾರಣೆಗೆ ಕೆಸುವಿನ ಗೆಡ್ಡೆ ತುಂಬಾ ಉತ್ತಮ. ಮುಖದ ಚರ್ಮದ ಕಾಂತಿ ಕಾಗಿ ಜನರು ನಾನಾ ರೀತಿಯ ಔಷಧಿ ಗಳನ್ನು ಉಪಯೋಗಿಸುತ್ತಾರೆ. ಹಾಗೆಯೇ ಇದರಿಂದ ಅಡ್ಡ ಪರಿಣಾಮಗಳನ್ನು ಕೂಡ ಎದುರಿಸುವಂತಾಗುತ್ತದೆ. ಇದೆಲ್ಲದರ ಸಮಸ್ಯೆಯೇ ಬೇಡ ಕೆಸುಗೆಡ್ಡೆಯನ್ನು ಬಳಸಿ.
ಫೈಬರ್ ಯುಕ್ತ ಅಥವಾ ಜಂಕ್ ಫುಡ್ ಅನ್ನು ಹೆಚ್ಚಾಗಿ ತಿಂದಾಗ ಹೊಟ್ಟೆ ನೋವಾಗುವುದು ಸಾಮಾನ್ಯ. ಅಂತಹ ಸಮಯದಲ್ಲಿ ಈ ಗೆಡ್ಡೆಯನ್ನು ಸೇವಿಸುವುದರಿಂದ ಸುಲಭವಾಗಿ ಹೊಟ್ಟೆ ನೋವು ನಿವಾರಣೆ ಆಗುತ್ತದೆ. ಕೆಸುಗಟ್ಟೆ ಮಧುಮೇಹ ಉಳ್ಳವರಿಗೂ ಕೂಡ ತುಂಬಾ ಉಪಯುಕ್ತವಾದಂತಹ ತರಕಾರಿ. ಎಂದರೆ ಇದರಲ್ಲಿ ನಾರಿನಾಂಶ ಮತ್ತು ಅಷ್ಟೊಂದು ಸಿಹಿ ಇಲ್ಲದೆ ಇರುವ ಕಾರಣದಿಂದ ಒಳಿತು.
ಈ ಗೆಟಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚಿಸುತ್ತದೆ. ಈಗಾಗಲೇ ತಿಳಿಸಿದ ಹಾಗೆ ಹಿಮೋಗ್ಲೋಬಿನ್ ಕಡಿಮೆ ಇದ್ದವರಿಗೆ ಈ ಗೆಡ್ಡಿಯನ್ನು ತಿನ್ನಲು ಸೂಚಿಸುತ್ತಾರೆ. ಡೆಂಗ್ಯೂ ಬಂದು ಕಾಲು ಸಂಧಿ ಮತ್ತು ಮೂಳೆಯ ಸಂಧಿಗಳಲ್ಲಿ ಭಾದೆ ಉಂಟಾಗುವವರು ಈ ಗೆಡ್ಡೆಯನ್ನು ತಿನ್ನುವುದರ ಮೂಲಕ ನೋವನ್ನು ಓಡಿಸಬಹುದು.