Shocking Video | ಮಲೆನಾಡಲ್ಲಿ ಶುರುವಾದ ಹೋರಿ ಬೆದರಿಸುವ ಹಬ್ಬ; ರೊಚ್ಚಿಗೆದ್ದ ಗೂಳಿ ದಾಳಿಗೆ ಇಬ್ಬರು ಬಲಿ !

ಜನಪದ ಕ್ರೀಡೆ, ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ಮಲೆನಾಡಿನಲ್ಲಿ ಆರಂಭವಾಗಿದ್ದು, ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಗೂಳಿ ಮಾಡಿದ ಅವಂತಾರದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಇದೀಗ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಬಹಳ ಮಹತ್ವ ಪಡೆದಿದ್ದು, ಯಾರ ಕೈಗೂ ಸಿಗದೇ ಓಡುವ ಹೋರಿಯ ದೃಶ್ಯ ನೋಡುಗರ ಮೈನವಿರೇಳಿಸುತ್ತದೆ. ಈ ಸ್ಪರ್ಧೆ ಎಷ್ಟು ರೋಚಕವಾಗಿರುತ್ತದೆ ಅಷ್ಟೇ ಅಪಾಯಕಾರಿ ಕೂಡ.

ಸದ್ಯ ಮಲೆನಾಡನಲ್ಲಿ ಶುರುವಾಗಿರುವ ಹೋರಿ ಬೆದರಿಸುವ ಹಬ್ಬದ ಸಮಯದಲ್ಲಿ ಇಬ್ಬರು ವ್ಯಕ್ತಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಗಾಮ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಪ್ರಶಾಂತ್ (36) ಮತ್ತು ಸೊರಬ ತಾಲೂಕಿನ ಜಡೆ ಗ್ರಾಮದ ಚಗಟೂರು ನಿವಾಸಿ ಆದಿ (20) ಮೃತ ದುರ್ದೈವಿಗಳಾಗಿದ್ದಾರೆ.

ಅದು ಹೋರಿ ಬೆದರಿಸುವ ಸಂದರ್ಭ. ಆಗ ಬೆದರಿದ ಮತ್ತು ರೊಚ್ಚಿಗೆದ್ದ ಹೋರಿ ಮೊದಲು ಗೋಡೆ ಕಡೆಗೆ ತಿರುಗಿ ಸರಕ್ಕನೆ ಹಿಂದಕ್ಕೆ ವಾಪಸ್ ನುಗ್ಗಿದೆ. ಈ ವೇಳೆ ಪ್ರಶಾಂತ್ ಎಂಬ ಹುಡುಗನ ಮೈಮೇಲೆ ಹಾರಿ ಸೀದಾ ಎದೆಯ ಮೇಲೆ ಕಾಲಿಟ್ಟು ನಿಂತಿದೆ. ನಂತರ ಹೋರಿ ಮುಂದಕ್ಕೆ ಹೋಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಪ್ರಶಾಂತ್‍ರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ ಪ್ರಶಾಂತ್ ಮೃತಪಟ್ಟಿದ್ದಾನೆ.
ಇನ್ನೊಂದು ಘಟನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಆದಿ ಎಂಬ ಯುವಕನನ್ನು ಹೋರಿ ತಿವಿದು ಹಾಕಿದೆ. ತೀವ್ರ ತಿವಿತಕ್ಕೊಳಗಾಗಿ ಹುಡುಗ ಮೃತಪಟ್ಟಿದ್ದಾನೆ.

Leave A Reply

Your email address will not be published.