ಸಿಗರೇಟು ಸೇದೋಕೆ ಕಾರಿನಿಂದ ಇಳಿದ ಮಾಲೀಕ  | 75 ಲಕ್ಷ ಹಣದೊಂದಿಗೆ ಕಾರಿನ ಚಾಲಕ ಎಸ್ಕೇಪ್ ; ಹಣದ ಬ್ಯಾಗ್‍ನೊಂದಿಗೆ ತೀರ್ಥಯಾತ್ರೆ- ಗರಿ ಗರಿ ನೋಟಿನ ಬ್ಯಾಗ್’ನೇ ಆತನ ತಲೆದಿಂಬು !!!

ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕಾರಿನ ಚಾಲಕ 75 ಲಕ್ಷ ರೂಪಾಯಿ ಹಣದ ಜತೆಗೆ, ಕಾರಿನಲ್ಲಿ ಎಸ್ಕೇಪ್ ಆಗಿದ್ದಾನೆ. ನಗರದ ಬ್ಯಾಟರಾಯನಪುರ ಪೊಲೀಸರಿಗೆ ಅವರು ತಡವಾಗಿ ದೂರು ನೀಡಿದ್ದು, ಈ ರೋಚಕ ಪ್ರಕರಣ ಈಗ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

ಎಷ್ಟೋ ಸಿನಿಮಾಗಳಲ್ಲಿ ತೋರಿಸಿದ ರೀತಿಯಲ್ಲಿ, ಇಲ್ಲಿ ಚಾಲಕನೊಬ್ಬ, ಆತನದೇ ಮಾಲೀಕನ ಬೃಹತ್ ಮೊತ್ತವನ್ನು, ಮಾಲೀಕನ ಕಣ್ಣಿದುರಿಗೇ ಕಾರು ಸಮೇತ ಹೊತ್ತೊಯ್ದಿದ್ದಾನೆ. ಅದರ ರೋಚಕ ಸ್ಟೋರಿ ಇಲ್ಲಿದೆ ನೋಡಿ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಹರೀಶ್ ಅವರ ಕಾರು ಬ್ಯಾಟರಾಯನಪುರದ ಕಡೆ ಹೊರಟಿತ್ತು. ಅದರ ಕಾರು ಚಾಲಕ ಸಂತೋಷ್ ಕಾರು ಚಲಾಯಿಸುತ್ತಿದ್ದ. ಅಲ್ಲಿಂದ ಕಾರು ನಗರದ ಕಡೆಗೆ ಹೊರಟಿತ್ತು. ಆಗ ಉದ್ಯಮಿ ಹರೀಶ್ ಅವರ ಬಳಿ ವ್ಯವಹಾರ ಸಂಬಂಧ 75 ಲಕ್ಷ ನೆಟ್ ಕ್ಯಾಶ್ ಉಳ್ಳ ಹಣದ ಬ್ಯಾಗ್ ಇತ್ತು. ಹಣದ ಬ್ಯಾಗ್ ಅನ್ನು ಕಾರಿನಲ್ಲಿಟ್ಟುಕೊಂಡು ಅವರು ಹೊರಟಿದ್ದರು. ಅಷ್ಟರಲ್ಲಿ ಕಾರು ಬ್ಯಾಟರಾಯನಪುರ ತಲುಪಿತು. ಆಗ ಮಾಲೀಕ ಹರೀಶ್ ಅವರು ಸಿಗರೇಟು ಸೇದುವುದಕ್ಕೆ ಅಂತ ಕೆಳಗೆ ಇಳಿದಿದ್ದಾರೆ. ಅಷ್ಟೇ, ನಂತ್ರ ನಡೆದದ್ದು ಯಾವ ಸಿನಿಮಾಕ್ಕೂ ಕಮ್ಮಿ ಇಲ್ಲದ ಹಣದ ಜತೆಗಿನ ಧೌಡ್ ಧೌಡ್ !!

ಮಾಲೀಕ ಸಿಗರೇಟಿಗೆ ಬೆಂಕಿ ತಾಗಿಸುವಶ್ಟರಲ್ಲಿ ಮಿಂಚಿನಂತೆ ಪೋರ್ಡ್ ಕಾರು ಚಲಿಸಿ ಹೋಗಿತ್ತು. ಸಮಯಕ್ಕಾಗಿ ಕಾಯುತ್ತಿದ್ದ ಅವರದೇ ಕಾರಿನ ಚಾಲಕ ಸಂತೋಷ್, ಕ್ಷಣಮಾತ್ರದಲ್ಲೇ ಕಾರಿನ ಸಮೇತ 75 ಲಕ್ಷದ ಹಣದ ಬ್ಯಾಗ್ ಸಮೇತ ಎಸ್ಕೇಪ್ ಆಗಿದ್ದಾನೆ. ದುಡ್ಡಿನ ಮೂಟೆಯ ಜತೆಗೆ ಕಾರು ಓಟ ಶುರು ಮಾಡಿದೆ. ಕೆಲವೇ ಹೊತ್ತಿನಲ್ಲಿ ಕಾರು ಬೆಂಗಳೂರು ಬಿಟ್ಟು ಹೊರಕ್ಕೆ ಬಂದಿದೆ.

ಹಾಗೆ ಹಣದ ಬ್ಯಾಗ್ ಸಮೇತ ಎಸ್ಕೇಪ್ ಆದ ಚಾಲಕ ಟೂರ್ ಹೊರಟಿದ್ದಾನೆ. ರಾಜ್ಯದ ಟೆಂಪಲ್ ರನ್ ಶುರು ಮಾಡಿದ್ದಾನೆ. ರಾಜ್ಯದ ಇರೋ ಬರೋ ಎಲ್ಲಾ ದೇವಸ್ಥಾನಗಳನ್ನು ಸುತ್ತಾಡಿದ್ದಾನೆ. ದೇವಸ್ಥಾನಗಳಲ್ಲಿ ಕೊಡುವ ಪ್ರಸಾದ ತಿಂದುಕೊಂಡು, ಅಲ್ಲೇ ಸಣ್ಣ ಹೋಟೆಲ್ ಗಳಲ್ಲಿ ಊಟ ಮಾಡಿಕೊಂಡು ದೇವಸ್ಥಾನದ ಅವರಣದಲ್ಲೇ ಮಲಗಿ ಸಮಯ ಕಳೆದಿದ್ದಾನೆ.

ದೇವಾಲಯದ ಪ್ರಾಂಗಣದಲ್ಲಿ, ಕಟ್ಟೆಗಳಲ್ಲಿ ಮಲಗುವಾಗ ಆ 75 ಲಕ್ಷ ಹಣದ ಬ್ಯಾಗ್ ಅನ್ನು ತಲೆಯ ಕೆಳಗೆ ಬಿಸಾಕಿಕೊಂಡು, ದಿಂಬು ಮಾಡಿಕೊಂಡು ಮಲಗಿದ್ದಾನೆ. ಆತ ಯಾರಿಗೂ ಅನುಮಾನ ಬಾರದಂತೆ ನೆಮ್ಮದಿಯ ನಿದ್ದೆ ಮಾಡುತ್ತಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಆರೋಪಿಯನ್ನು ಶೃಂಗೇರಿಯಲ್ಲಿ ಬಂಧಿಸಿ 72 ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹಣ ಕಳೆದುಕೊಂಡ ಮರುಕ್ಷಣವೇ ಓಡಿ ಹೋಗಿ ಪೊಲೀಸರಿಗೆ ದೂರು ನೀಡುವುದು ಸಾಮನ್ಯ. ಆದರೆ ಅಷ್ಟು ದೊಡ್ಡ ಮೊತ್ತದ – 75 ಲಕ್ಷ ಹಣವನ್ನು ತನ್ನ ಡ್ರೈವರ್ ಎಷ್ಕೇಪ್ ಮಾಡಿದರೂ  ಉದ್ಯಮಿ ಹರೀಶ್ ಪೊಲೀಸರಿಗೆ ದೂರು ನೀಡಿಲ್ಲ. ಘಟನೆಯನ್ನು ತನ್ನ ಕಣ್ಣಾರೆ ನೋಡಿದರೂ ಕೂಡ, ಘಟನೆ ನಡೆದು 20 ದಿನಗಳ ಕಾಲ ಸುದ್ದಿ ಪೊಲೀಸರಿಗೆ ತಿಳಿದಿಲ್ಲ.
ಬದಲಿಗೆ, ಡ್ರೈವರನ ಪತ್ತೆಗೆ ಸ್ವತಃ ತಾನೇ ತನ್ನ ತಂಡ ರೆಡಿ ಮಾಡಿಕೊಂಡು ಅವರು ಪ್ರಯತ್ನ ಪಟ್ಟಿದ್ದಾರೆ. ಆದರೆ ತಂತ್ರಜ್ಞಾನದ ಸಹಾಯ ಇಲ್ಲದ ಕಾರಣ ಅವರಿಗೆ ಡ್ರೈವರ್ ಅನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಕೊನೆಗೆ ಆತ ದೂರು ನೀಡಿದ್ದಾರೆ.

ಈ ದೊಡ್ಡ ಮೊತ್ತ ದುಡ್ಡಿನ ವಿಷಯ ಪೊಲೀಸರಿಗೆ ಗೊತ್ತಾದರೆ ಸಮಸ್ಯೆಯಾಗಿತ್ತು ಎಂದು ಉದ್ಯಮಿ ಭಾವಿಸಿದಂತಿದೆ. ಹೀಗಾಗಿ ಅಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಪರಿಶೀಲನೆ ನಡೆಸಲು ಐಟಿ ಇಲಾಖೆಗೆ ಬ್ಯಾಟರಾಯನಪುರ ಪೊಲೀಸರು, ಪತ್ರ ಬರೆದಿದ್ದಾರೆ. ಅಲ್ಲದೆ 75 ಲಕ್ಷ ಬ್ಲಾಕ್ ಮನಿ ಇರಬಹುದು ಎಂಬುದು ಪೊಲೀಸರ ಶಂಕೆ. ಇದೆಲ್ಲಾ ಗೊತ್ತಿದ್ದೇ  ಡ್ರೈವರ್ ಹಣವನ್ನು ದೋಚಲು ಪ್ಲಾನ್ ಮಾಡಿದ್ದ ಎನ್ನುವುದು ಸದ್ಯದ ತನಿಖೆಯ ಸಾರಾಂಶ.

Leave A Reply

Your email address will not be published.