ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್!
ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಫ್ಲಿಪ್ ಕಾರ್ಟ್ ಹಲವು ಆಕರ್ಷಕ ಆಫರ್ ಗಳೊಂದಿಗೆ ಗ್ರಾಹಕರಿಗೆ ಹತ್ತಿರವಾಗುತ್ತ ಬಂದಿದೆ. ಆದರೆ, ಇದೀಗ ಕ್ಯಾಶ್ ಆನ್ ಡೆಲಿವರಿಯಲ್ಲಿ ಬದಲಾವಣೆಯನ್ನು ತರುವ ಮೂಲಕ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ.
ಹೌದು. ಫ್ಲಿಪ್‌ಕಾರ್ಟ್ ಮೂಲಕ ಕ್ಯಾಶ್ ಆನ್ ಡೆಲಿವರಿ (COD) ಆಯ್ಕೆ ಮಾಡುವವರು 5 ರೂ. ಹೆಚ್ಚಿನ ಮೊತ್ತವನ್ನು ಪಾವತಿಸಬೇಕು ಎಂದು ಹೇಳಿದೆ. ಈ ಹಿಂದೆ ಫ್ಲಿಪ್ಕಾರ್ಟ್ನಲ್ಲಿ ಆರ್ಡರ್ ಮಾಡಿ ಪೇಮೆಂಟ್ ಆಯ್ಕೆಯಲ್ಲಿ ಕ್ಯಾಶ್ ಆನ್ ಡೆಲಿವರಿ ಸೆಲೆಕ್ಟ್ ಮಾಡಿದರೆ ನಿಗದಿತ ಬೆಲೆಗಿಂತ ಕೆಳಗಿನ ಉತ್ಪನ್ನಗಳಿಗೆ ವಿತರಣಾ ಶುಲ್ಕವನ್ನು ವಿಧಿಸುತ್ತಿತ್ತು. ಫ್ಲಿಪ್‌ಕಾರ್ಟ್ ಪ್ಲಸ್ ಎಂದು ಪಟ್ಟಿ ಮಾಡಲಾದ ಉತ್ಪನ್ನವನ್ನು ಆರ್ಡರ್ ಮಾಡಿ ಅದರ ಬೆಲೆ 500 ರೂ. ಗಿಂತ ಕಡಿಮೆಯಿದ್ದರೆ 40 ರೂ. ಡೆಲಿವರಿ ಚಾರ್ಜ್ ಮತ್ತು 500 ರೂ. ಗಿಂತ ಅಧಿಕವಾದರೆ ಯಾವುದೇ ಡೆಲಿವರಿ ಚಾರ್ಜ್ ಇರುವುದಿಲ್ಲ.
ಇದೀಗ ಬದಲಾವಣೆ ತರಲಾಗಿದ್ದು, ಫ್ಲಿಪ್‌ಕಾರ್ಟ್ ಎಲ್ಲಾ ಕ್ಯಾಶ್ ಆನ್ ಡೆಲಿವರಿ ಆರ್ಡರ್‌ಗಳಿಗೆ 5 ರೂ. ನಿರ್ವಹಣೆ ಶುಲ್ಕವನ್ನು ವಿಧಿಸುತ್ತದೆ. ನೀವು ಆನ್ಲೈನ್ನಲ್ಲೇ ಹಣವನ್ನು ಪಾವತಿಸಿದರೆ ಯಾವುದೆ ಶುಲ್ಕ ಇರುವುದಿಲ್ಲ. ಈ ಮೂಲಕ ಕ್ಯಾಶ್ ಆನ್ ಡೆಲಿವರಿ ಗ್ರಾಹಕರಿಗೆ ಶಾಕಿಂಗ್ ಸುದ್ದಿ ದೊರಕಿದೆ.