ಗುಜರಾತ್ ನಲ್ಲೊಂದು ‘ ಜುಲ್ಟೋ ಪೂಲ್ ‘ ಟ್ರಾಜೆಡಿ | ಕೇಬಲ್ ಸೇತುವೆ ಕುಸಿದು ನೂರಾರು ಮಂದಿ ನದಿಗೆ !

ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ಭಾರೀ ದೊಡ್ಡ ಅನಾಹುತವೊಂದು ಸಂಭವಿಸಿದ್ದು, ಅಲ್ಲಿನ ತೂಗು ಸೇತುವೆ ಕುಸಿದು ಬಿದ್ದಿದೆ.

ಗುಜರಾತ್ ನ ಇಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೇಬಲ್ ಸೇತುವೆ ಕುಸಿದಿದ್ದರಿಂದ ನೂರಾರು ಜನರು ನದಿಗೆ ಬಿದ್ದಿದ್ದಾರೆ. ಹಲವಾರು ಕಣ್ಮರೆ ಆಗಿದ್ದಾರೆ.

ಸ್ಥಳೀಯ ಶಾಸಕರ ಪ್ರಕಾರ, ಅಲ್ಲಿನ ಮಚ್ಚು ನದಿಗೆ ನಿರ್ಮಿಸಲಾದ ಈ ಕೇಬಲ್ ಸೇತುವೆ ಸಾಕಷ್ಟು ಹಳೆಯದಾಗಿದ್ದು ಅದನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನಿರ್ಮಿಸಿದ್ದರು. ಜುಲ್ಟೋ ಪೂಲ್ ಎಂದು ಕರೆಯುತ್ತಿದ್ದ ಈ ಸೇತುವೆ ಪ್ರೇಕ್ಷಣೀಯ ಸ್ಥಳವಾಗಿತ್ತು. ಇದನ್ನು ಪಾರಂಪರಿಕ ಕಟ್ಟಡ ಎಂದು ಸೇರಿಸಲಾಗಿತ್ತು. ದೀಪಾವಳಿಯ ನಂತರ, ಗುಜರಾತಿ ಹೊಸ ವರ್ಷದಂದು ರಿಪೇರಿ ಮಾಡಿದ ನಂತರ ಅದನ್ನ ಮತ್ತೆ ಸೇತುವೆಯನ್ನು ಜನರ ಉಪಯೋಗಕ್ಕೆ ತೆರೆಯಲಾಗಿತ್ತು. ಸದ್ಯ ಈ ಸೇತುವೆ ಕುಸಿತ ಕಂಡಿದ್ದು, ಹಲವಾರು ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯದ ಮಾಹಿತಿಗಳ ಪ್ರಕಾರ 100ಕ್ಕೂ‌ ಹೆಚ್ಚು ಮಂದಿಯನ್ನು ಪತ್ತೆಹಚ್ಚಲಾಗಿದ್ದು, ಕಾರ್ಯಾಚರಣೆ ಭರದಲ್ಲಿ ಸಾಗುತ್ತಿದೆ. ಈ ಬಗ್ಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಟ್ರೀಟ್ ಮಾಡಿದ್ದು ಗಾಯಾಳುಗಳ ಮತ್ತು ಸಂತ್ರಸ್ಥರ ತಕ್ಷಣದ ರೆಸ್ಕ್ಯೂಗಾಗಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದೆ.

Leave A Reply

Your email address will not be published.