ನಿಮಗೆ ತಿಳಿದಿದೆಯೇ ಜಗತ್ತಿನಲ್ಲಿ ಅತಿ ದೊಡ್ಡ ಉದ್ಯೋಗದಾತ ಯಾರೆಂದು?
ನಾವು ನಮ್ಮ ದೇಶದಲ್ಲಿ ನೆಮ್ಮದಿಯಾಗಿ ಬದುಕುತ್ತಿದ್ದೇವೆ ಅಂದರೆ ಭಾರತೀಯ ಸೇನೆಯೇ ಕಾರಣ ಹೌದು ಹಾಗಾದರೆ ನಮ್ಮ ಸೇನೆಯ ಬಗ್ಗೆ ನಾವು ತಿಳಿದು ಕೊಳ್ಳಲೇ ಬೇಕು.
ಈಗಾಗಲೇ ಭಾರತೀಯ ಸೇನೆಯಲ್ಲಿ ಮಹತ್ತರ ಬೆಳವಣಿಗೆ ತರಲು ಸರ್ಕಾರ ಪ್ರಯತ್ನಿಸುತ್ತಲೇ ಇದೆ. ವಿಧದ ಸೇನೆಯಲ್ಲಿ ಅಂದರೆ ಭೂಸೇನೆ, ವಾಯುಪಡೆ, ನೌಕಾಪಡೆ ಯಲ್ಲಿ ಸಾವಿರಾರು ಸೈನಿಕರನ್ನು ಈಗಾಗಲೇ ನೇಮಕ ಮಾಡಿಕೊಂಡಿದೆ. ಮುಂದಿನ ಭವಿಷ್ಯದ ಸವಾಲಿನಲ್ಲಿ ಈ ಸೈನಿಕರ ಪಾತ್ರ ಮಹತ್ವವಾದದ್ದು.
ಪ್ರಸ್ತುತ ಪ್ರತಿಯೊಬ್ಬ ಸೈನಿಕನು ಮುಂದಿನ ನಮ್ಮ ದೇಶದ ಭವಿಷ್ಯದ ಸವಾಲುಗಳನ್ನು ಯಶಸ್ವಿ ಗೊಳಿಸುವಲ್ಲಿ ಸದಾ ಸಿದ್ಧರಾಗಿದ್ದಾರೆ.
ಅದಲ್ಲದೆ ಜಗತ್ತಿನಲ್ಲೇ ಅತಿ ದೊಡ್ಡ ಉದ್ಯೋಗದಾತ ಮತ್ತು ನಮ್ಮ ದೇಶದ ರಕ್ಷಣ ಸಚಿವಾಲಯವು ಒಟ್ಟಾರೆಯಾಗಿ ಬರೋಬ್ಬರಿ 29.2 ಲಕ್ಷ ಮಂದಿಗೆ ಉದ್ಯೋಗ ನೀಡಿದೆ ಎಂಬ ಕೀರ್ತಿಗೆ ಸಾಕ್ಷಿ ಆಗಿದೆ.
ಜರ್ಮನಿ ಮೂಲದ ಖಾಸಗಿ ಕಂಪೆನಿ ಸ್ಟಾಟಿಸ್ಟಾ ವರದಿ ಪ್ರಕಾರ 29.2 ಲಕ್ಷ ಸೈನಿಕರ ಈ ಪೈಕಿ ಸಕ್ರಿಯ ಯೋಧರು, ಮೀಸಲು ಸಿಬಂದಿ, ಇತರೆ ಅಧಿಕಾರಿ ಸಿಬಂದಿ ವರ್ಗವೂ ಸೇರಿದೆ ಎಂದು ತಿಳಿಸಿದೆ.
ಪ್ರಮುಖವಾಗಿ ಜಗತ್ತಿನ ಅತಿ ಹೆಚ್ಚು ಸಿಬಂದಿ ಯನ್ನು ಹೊಂದಿರುವ ಸಂಸ್ಥೆಗಳ ಸಾಲಿನಲ್ಲಿ ಭಾರತ ರಕ್ಷಣ ಇಲಾಖೆ ಮೊದಲ ಸ್ಥಾನ ಪಡೆದಿದೆ ಎಂದು ದಾಖಲೆ ಆಗಿದೆ ಮತ್ತು ಅಮೆರಿಕ ರಕ್ಷಣ ಇಲಾಖೆಯು ಎರಡನೇ ಸ್ಥಾನ ಗಳಿಸಿದೆ ಎಂದು ಮಾಹಿತಿ ದೊರೆತಿದೆ.