ಒಬ್ಬಳಿಗಾಗಿ ಮೂವರು ಬಲಿ, ಇದೆಂಥ ವಿಚಿತ್ರ ಪ್ರೀತಿ?

ಮಧ್ಯ ಪ್ರದೇಶ: ಶಾಲೆಗೆ ಬಂಕ್ ಮಾಡಿ ವಿಷ ಖರೀದಿ ಮಾಡಿ, ನಿರ್ಜನ ಪ್ರದೇಶಕ್ಕೆ ತೆರಳಿ, ಅಲ್ಲಿ ಮೂವರು ವಿದ್ಯಾರ್ಥಿನಿಯರು ವಿಷ ಕುಡಿದ ಧಾರುಣ ಘಟನೆ ನಡೆದಿದೆ. ದುರದೃಷ್ಟ ಅಂದರೆ ಒಬ್ಬಳ ಪ್ರಿಯಕರ ಕೈ ಕೊಟ್ಟ ಕಾರಣದಿಂದ ಮೂವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇದಾಗಿದೆ.

 

ಈ ಪೈಕಿ ಇಬ್ಬರು ಸಾವನ್ನಪ್ಪಿದ್ರೆ ಒಬ್ಬಳು ಬಚಾವ್ ಆಗಿದ್ದಾಳೆ. ಮಧ್ಯಪ್ರದೇಶದ ಸೆಹೋರ್‌ನಿಂದ ಇಂದೋರ್‌ಗೆ ಬಂದಿದ್ದ ಮೂವರು ಶಾಲಾ ಬಾಲಕಿಯರು ಈ ರೀತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಬಾಲಕಿಯರನ್ನು ಪೂಜಾ, ಆರತಿ ಮತ್ತು ಪಾಲಕ್ ಎಂದು ಗುರುತಿಸಲಾಗಿದೆ.

ಈ ಬಾಲಕೀಯರು ವಿಷ ಸೇವಿಸಿರುವ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಇದಾದ ಬಳಿಕ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ವಿಷ ಸೇವನೆಗೆ ಕಾರಣ ತಿಳಿದುಕೊಂಡಿದ್ದಾರೆ ಎನ್ನಲಾಗಿದೆ. ತನಿಖೆಯ ವೇಳೆ ಸ್ಫೋಟಕ ಮಾಹಿತಿ ಪೊಲೀಸರಿಗೆ ಲಭ್ಯ ಆಗಿದೆ.

ಮಧ್ಯ ಪ್ರದೇಶದ ಅಷ್ಟಾ ಪಟ್ಟಣ ಎಂಬಲ್ಲಿನ ಮೂವರು 16 ವರ್ಷದ ಬಾಲಕಿಯರು ಶುಕ್ರವಾರ ಶಾಲೆಗೆ ಬಂಕ್ ಮಾಡಿದ್ದಾರೆ. ನಂತರ 120 ಕಿಮೀ ದೂರದ ಇಂದೋರ್‌ಗೆ ಬಸ್‌ನಲ್ಲಿ ಬಂದಿದ್ದಾರೆ. ಬಳಿಕ ಪಕ್ಕದ ಊರಿನ ಅಂಗಡಿಗೆ ಹೋಗಿ ವಿಷ ಖರೀದಿಸಿದ್ದಾರೆ. ಇಲ್ಲಿನ ನಿರ್ಜನ ಪ್ರದೇಶವೊಂದಕ್ಕೆ ತೆರಳಿ ಅಲ್ಲಿ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಓರ್ವಾಕೆ ರಾತ್ರಿ ಸಾವನ್ನಪ್ಪಿದ್ದು, ಬೆಳಗ್ಗೆ ಮತ್ತೊಬ್ಬಳು ಸಾವನ್ನಪ್ಪಿದ್ದಾಳೆ. ಇನ್ನು ಒಬ್ಬಳ ಸ್ಥಿತಿ ಚಿಂತಾಜನಕವಾಗಿದೆ.

ಇಲ್ಲಿನ 3 ಬಾಲಕಿಯರಲ್ಲಿ ಒಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದಳು ಎನ್ನಲಾಗಿದೆ. ಆದರೆ ಆತ ಅದ್ಯಾಕೋ ಅವಳನ್ನು ಭೇಟಿಯಾಗಲು ನಿರಾಕರಿಸಿದ್ದನಂತೆ. ಇದೇ ಕಾರಣಕ್ಕೆ ನೊಂದ ಆಕೆ ಮೊದಲಿಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಆದರೆ  ಅದೇನಾಯಿತೋ ಅಲ್ಲಿ ಈಗ ತಿಳಿದಿಲ್ಲ,  ಯಾಕೋ ಈ ಮೂವರೂ ಹುಡುಗಿಯರೂ ಒಮ್ಮೆಲೇ ವಿಷ ಕುಡಿದು, ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದ್ದಾರೆ.

ಅಲ್ಲೇ ಸುತ್ತಮುತ್ತ ಸ್ವಲ್ಪ ಕಾಲ ತಿರುಗಾಡಿ, ಬಳಿಕ ವಿಷ ಸೇವನೆ ಮಾಡಿದ್ದಾರೆ. ಈ ಘಟನೆಯಲ್ಲಿ ಮೂವರು ಸ್ನೇಹಿತೆಯರು ಒಟ್ಟಿಗೆ ವಿಷ ಸೇವಿಸಿದ್ದಾರೆ ಎನ್ನುವುದು ತನಿಖಾಧಿಕಾರಿಗಳು ಈಗ ಕಂಡುಕೊಂಡ ಸತ್ಯ.
ಇನ್ನು ಸ್ಥಳೀಯರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಅವರನ್ನು ಅಲ್ಲಿನ ದೊಡ್ಡ ಆಸ್ಪತ್ರೆಗೆ ಕರೆದೊಯ್ದಲಾಗಿದ್ದು, ಅಲ್ಲಿ ಅವರಲ್ಲಿ ಇಬ್ಬರು ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದರು ಎಂದು.ಅಲ್ಲಿನ ಹೆಚ್ಚುವರಿ ಡಿಸಿಪಿ ಪ್ರಶಾಂತ್ ಚೌಬೆ ಹೇಳಿದ್ದಾರೆ.

Leave A Reply

Your email address will not be published.