ರುಪೇ,ವೀಸಾ,ಮಾಸ್ಟರ್ ಕಾರ್ಡ್ ನಡುವಿನ ವ್ಯತ್ಯಾಸ ತಿಳಿಯಿರಿ!!!
ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಹಳ ಮುಂದುವರೆದಿದೆ. ಅಲ್ಲದೆ ಕೋಟಿ ಕೋಟಿ ವ್ಯವಹಾರಗಳು ನಡೆಯುತ್ತಲೇ ಇರುತ್ತವೆ. ಜೊತೆಗೆ ಸರ್ಕಾರಗಳು ನಿಯಮ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ವ್ಯವಹಾರಗಳನ್ನು ನಗದು ಮೂಲವಾಗಿ ನಡೆಸಲು ಸಾಧ್ಯವಿಲ್ಲ. ಅದರ ಬದಲಾಗಿ ಡೆಬಿಟ್ ಕಾರ್ಡ್, ವೀಸಾ ಕಾರ್ಡ್, ಮಾಸ್ಟರ್ ಕಾರ್ಡ್, ರುಪೇ ಕಾರ್ಡ್ ಮುಂತಾದವಗಳನ್ನು ನಗದಿನ ಬದಲಾಗಿ ಇಂತಹ ಕಾರ್ಡ್ ಗಳನ್ನು ಬಳಸಲಾಗುತ್ತದೆ.
ಮುಖ್ಯವಾಗಿ ನಗದುರಹಿತ ವಹಿವಾಟಿಗಾಗಿ ಹಾಗೂ ಸುಲಭವಾಗಿ ಹಣವನ್ನು ನಮ್ಮ ಖಾತೆಯಿಂದ ವಿತ್ಡ್ರಾ ಮಾಡಿಕೊಳ್ಳಲು ವಿಶ್ವದಾದ್ಯಂತ ಡೆಬಿಟ್ ಕಾರ್ಡ್ ಅನ್ನು ಬಳಕೆ ಮಾಡಲಾಗುತ್ತದೆ. ಡೆಬಿಟ್ ಕಾರ್ಡ್ ಅನ್ನು ರೆಸ್ಟೋರೆಂಟ್, ಮಾಲ್ಗಳಲ್ಲಿ ಶಾಪಿಂಗ್ ಮಾಡುವಾಗ, ಆನ್ಲೈನ್ ಶಾಪಿಂಗ್ ವೇಳೆಯು ಬಳಕೆ ಮಾಡಲಾಗುತ್ತದೆ. ಆದರೆ ನಿಮ್ಮ ಡೆಬಿಟ್ ಕಾರ್ಡ್ನಲ್ಲಿ ರುಪೇ, ವೀಸಾ ಕಾರ್ಡ್, ಮಾಸ್ಟರ್ ಕಾರ್ಡ್ ಎಂಬುದನ್ನು ನೋಡಬಹುದು.
ಈ ಲೋಗೋಗಳು ಪಾವತಿ ನೆಟ್ವರ್ಕ್ ಆಗಿದ್ದು ಇದು ನಮ್ಮ ವಹಿವಾಟು ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.
ನಾವು ವಹಿವಾಟುಗಳನ್ನು ನಡೆಸಲು ಪಾವತಿ ನೆಟ್ವರ್ಕ್ ಲೋಗೋಗಳ ಆಧಾರದಲ್ಲಿ ವಹಿವಾಟು ನಡೆಯುತ್ತದೆ.
ರುಪೇ ಕಾರ್ಡ್ ಭಾರತದ ಮೊದಲ ಸ್ಥಳೀಯ ಪಾವತಿ ನೆಟ್ವರ್ಕ್ ಆಗಿದೆ. ಆದರೆ ಮಾಸ್ಟರ್ ಹಾಗೂ ವೀಸಾ ಕಾರ್ಡ್ಗಳು ಅಂತಾರಾಷ್ಟ್ರೀಯ ಪಾವತಿ ನೆಟ್ವರ್ಕ್ ಆಗಿದೆ.
ಇನ್ನು ರುಪೇ ಕಾರ್ಡ್, ಮಾಸ್ಟರ್ ಕಾರ್ಡ್ , ವೀಸಾ ಕಾರ್ಡ್ ಈ ಮೂರು ಕಾರ್ಡ್ಗಳ ಬಗ್ಗೆ ಮಾಹಿತಿ :
ರುಪೇ ಕ್ರೆಡಿಟ್ ಕಾರ್ಡ್ :
ಇದು ಭಾರತದಲ್ಲಿ ಬಳಕೆ ಮಾಡಲಾಗುವ ಸ್ಥಳೀಯ ಕಾರ್ಡ್ ಆಗಿದೆ. ಇದು ಇಂಡಿಯನ್ ಪೇಮೆಂಟ್ ನೆಟ್ವರ್ಕ್ನೊಂದಿಗೆ ಲಿಂಕ್ ಹೊಂದಿರುವ ಕಾರಣದಿಂದಾಗಿ ಇದನ್ನು ಸ್ಥಳೀಯವಾಗಿ ಭಾರತದಲ್ಲಿ ಬಳಕೆ ಮಾಡಲು ಮಾತ್ರ ಸಾಧ್ಯವಿದೆ. 2012ರಲ್ಲಿ ಎನ್ಪಿಸಿಐ ರುಪೇ ಕಾರ್ಡ್ ಅನ್ನು ಪರಿಚಯಿಸಿದೆ. ಇದು ವೀಸಾ ಹಾಗೂ ಮಾಸ್ಟರ್ ಕಾರ್ಡ್ ನಂತೆಯೇ ಕಾರ್ಯ ನಿರ್ವಹಣೆ ಮಾಡುತ್ತದೆ. ಆದರೆ ಇದನ್ನು ಸ್ಥಳೀಯವಾಗಿ ಮಾತ್ರ ಬಳಕೆ ಮಾಡಲು ಸಾಧ್ಯ. ಹಾಗೆಯೇ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಗಿಂತ ರುಪೇ ಕಾರ್ಡ್ ವೇಗವಾಗಿ ಕಾರ್ಯನಿರ್ವಹಿಸುತ್ತದೆ.
ಮಾಸ್ಟರ್ ಕಾರ್ಡ್:
ವೀಸಾ ಬಳಿಕ ಮಾಸ್ಟರ್ ಕಾರ್ಡ್ ವಿಶ್ವದಲ್ಲೇ ಎರಡನೇ ಅತೀ ದೊಡ್ಡ ಪಾವತಿ ನೆಟ್ವರ್ಕ್ ಆಗಿದೆ. ಡಿಸ್ಕವರ್ ಮತ್ತು ಅಮೇರಿಕನ್ ಎಕ್ಸ್ಪ್ರೆಸ್ ಎರಡು ಹೆಚ್ಚುವರಿ ಪ್ರಮುಖ ಪಾವತಿ ನೆಟ್ವರ್ಕ್ ಆಗಿದೆ. ವೀಸಾದಂತೆಯೇ ಮಾಸ್ಟರ್ ಕಾರ್ಡ್ ಅನ್ನು ಆ ಸಂಸ್ಥೆಯೇ ಒದಗಿಸುವುದಿಲ್ಲ. ಇದನ್ನು ಪಾಲುದಾರಿಕೆ ಹೊಂದಿರುವ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಒದಗಿಸುತ್ತದೆ.
ವೀಸಾ ಕಾರ್ಡ್ :
ಈ ವೀಸಾ ಕಾರ್ಡ್ ಸಂಸ್ಥೆ ಮೊದಲು ಕ್ರೆಡಿಟ್ ಕಾರ್ಡ್ ಮಾತ್ರ ಪರಿಚಯಿಸಿತ್ತು. ಆದರೆ ಈಗ ಡೆಬಿಟ್, ಪ್ರಿಪೇಡ್ ಕಾರ್ಡ್, ಗಿಫ್ಟ್ ಕಾರ್ಡ್ಗಳನ್ನು ಜಾರಿಗೆ ತಂದಿದೆ. ವೀಸಾ ಲೋಗೋ ಇದ್ದರೂ ಕೂಡಾ ಈ ಕಾರ್ಡುಗಳನ್ನು ವಾಸ್ತವವಾಗಿ ವೀಸಾ ಸಂಸ್ಥೆಯು ನೀಡುವುದಿಲ್ಲ. ಬದಲಾಗಿ ಪಾಲುದಾರಿಕೆ ಹೊಂದಿರುವ ಹಣಕಾಸು ಸಂಸ್ಥೆ, ಬ್ಯಾಂಕುಗಳು ಇದನ್ನು ಒದಗಿಸುತ್ತದೆ. ವೀಸಾ ನೆಟ್ವರ್ಕ್ ಹಾಗೂ ವೀಸಾ ಲೋಗೋವನ್ನು ಹೊಂದಿರುವ ಕಾರ್ಡ್ ನ್ನು ವೀಸಾ ಕಾರ್ಡ್ ಎಂದು ಕರೆಯಲಾಗುತ್ತದೆ.
ರುಪೇ ಕಾರ್ಡ್, ಮಾಸ್ಟರ್ ಕಾರ್ಡ್ , ವೀಸಾ ಕಾರ್ಡ್ ಈ ಮೂರು ಕಾರ್ಡ್ಗಳ ನಡುವೆ ಏನು ವ್ಯತ್ಯಾಸ:
• ರುಪೇ ಕಾರ್ಡ್ ಅನ್ನು ಭಾರತದಲ್ಲಿ ಮಾತ್ರ ಬಳಕೆ ಮಾಡಲು ಸಾಧ್ಯ. ಆದರೆ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಅನ್ನು ವಿಶ್ವದಾದ್ಯಂತ ಬಳಕೆ ಮಾಡಲು ಸಾಧ್ಯವಾಗುತ್ತದೆ.
• ವೀಸಾ ಹಾಗೂ ಮಾಸ್ಟರ್ ಕಾರ್ಡ್ ಗೆ ಹೋಲಿಕೆ ಮಾಡಿದಾಗ ರುಪೇ ಕಾರ್ಡ್ಗಳು ಅಧಿಕ ಸುರಕ್ಷಿತ ಕಾರ್ಡ್ ಆಗಿದೆ. ಯಾಕೆಂದರೆ ಇದು ಸ್ಥಳೀಯ ಕಾರ್ಡ್ ಭಾರತದಲ್ಲಿ ಮಾತ್ರ ಬಳಕೆ ಮಾಡಲು ಸಾಧ್ಯ. ಭಾರತದ ನೆಟ್ವರ್ಕ್ಗೆ ಮಾತ್ರ ಡೇಟಾ ಇರುತ್ತದೆ.
• ವೀಸಾ ಹಾಗೂ ಮಾಸ್ಟರ್ ಕಾರ್ಡ್ ಗೆ ಹೋಲಿಕೆ ಮಾಡಿದಾಗ ರುಪೇ ಕಾರ್ಡ್ ಕಡಿಮೆ ಸೇವಾ ಶುಲ್ಕವನ್ನು ವಿಧಿಸುತ್ತದೆ. ವೀಸಾ ಹಾಗೂ ಮಾಸ್ಟರ್ ಕಾರ್ಡ್ ಅಂತಾರಾಷ್ಟ್ರೀಯ ಕಾರ್ಡ್ ಆಗಿರುವುದರಿಂದಾಗಿ ಅದರ ಸೇವಾ ಶುಲ್ಕ ಅಧಿಕವಾಗಿರುತ್ತದೆ.
• ಮಾಸ್ಟರ್ ಹಾಗೂ ವೀಸಾ ಕಾರ್ಡ್ ಜೊತೆ ಪಾಲುದಾರಿಕೆ ಹೊಂದಿರುವ ಬ್ಯಾಂಕುಗಳು ತ್ರೈಮಾಸಿಕವಾಗಿ ಶುಲ್ಕವನ್ನು ಈ ಸಂಸ್ಥೆಗಳಿಗೆ ಪಾವತಿ ಮಾಡಬೇಕಾಗುತ್ತದೆ. ಆದರೆ ರುಪೇ ಕಾರ್ಡ್ ನೀಡುವ ಬ್ಯಾಂಕುಗಳು ರುಪೇ ನೆಟ್ವರ್ಕ್ಗೆ ಯಾವುದೇ ಶುಲ್ಕ ಪಾವತಿ ಮಾಡಬೇಕಾಗಿಲ್ಲ.
ಈ ರೀತಿಯಾಗಿ ರುಪೇ ಕಾರ್ಡ್, ಮಾಸ್ಟರ್ ಕಾರ್ಡ್ , ವೀಸಾ ಕಾರ್ಡ್ ಈ ಮೂರು ಕಾರ್ಡ್ಗಳು ಕಾರ್ಯ ನಿರ್ವಹಿಸುತ್ತದೆ.